Dharmasthala : ಮುಜರಾಯಿ ಇಲಾಖೆಗೆ ಧರ್ಮಸ್ಥಳ ಕ್ಷೇತ್ರ ? ಸಚಿವ ರಮಾಲಿಂಗ ರೆಡ್ಡಿ ಹೇಳಿದ್ದೇನು?

Dharmasthala : ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಕೆಲವು ಅಪಪ್ರಚಾರಗಳು ಕೇಳಿ ಬಂದ ಬಳಿಕ ಧರ್ಮಸ್ಥಳ ಕ್ಷೇತ್ರವನ್ನು ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆಗೆ ವಹಿಸಬೇಕೆಂದು ಕೆಲವರು ಆಗ್ರಹಿಸಿದ್ದರು. ಇದೀಗ ಈ ಕುರಿತಾಗಿ ಸಚಿವ ರಮಾಲಿಂಗ ರೆಡ್ಡಿಯವರು ಸ್ಪಷ್ಟೀಕರಣ ನೀಡಿದ್ದಾರೆ.

ವಿಶ್ವ ಹಿಂದೂ ಪರಿಷತ್ ಮುಖಂಡರು ಹಿಂದೂ ದೇವಾಲಯಗಳನ್ನ ಧಾರ್ಮಿಕ ದತ್ತಿ ಇಲಾಖೆಯಿಂದ ಬಿಡುಗಡೆ ಮಾಡಿ ಎಂದು ರಾಜ್ಯಪಾಲರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಇಂದು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಸಚಿವರು ಧರ್ಮಸ್ಥಳ ಕುರಿತು ಕೂಡ ಮಾತನಾಡಿದ್ದಾರೆ. ಈ ವೇಳೆ ಅವರು ‘ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿ ದೇವಸ್ಥಾನವನ್ನು ಧಾರ್ಮಿಕ ದತ್ತಿ ಇಲಾಖೆಗೆ ನೀಡುವ ಯಾವುದೇ ರೀತಿಯ ಪ್ರಸ್ತಾವ ರಾಜ್ಯ ಸರಕಾರದ ಮುಂದೆ ಇಲ್ಲ. ಆ ಕುರಿತಾಗಿ ಯಾವುದೇ ಒತ್ತಡಗಳು ಕೂಡ ಕೇಳಿ ಬಂದಿಲ್ಲ ಎಂದು ಹೇಳಿದ್ದಾರೆ.
ಅಲ್ಲದೆ ಪ್ರಧಾನಿ ನರೇಂದ್ರ ಮೋದಿಯವರು ಇಡೀ ದೇಶದಲ್ಲೇ ಒಂದು ಕಾನೂನು ತಂದರೆ ನಮ್ಮ ಅಭ್ಯಂತರವಿಲ್ಲ. ಹಿಂದೆ ಧಾರ್ಮಿಕ ದತ್ತಿ ಇಲಾಖೆಯೇ ಇರಲಿಲ್ಲ. ಅನುವಂಶಿಕ ದೇವಾಲಯಗಳಿದ್ದವು. ಆಗ ಅಣ್ಣ- ತಮ್ಮಂದಿರು ಹಾಗೂ ಉತ್ತರಾಧಿಕಾರಿಗಳ ನಡುವೆ ಜಗಳ ನಡೆಯುತ್ತಿತ್ತು. ಈ ಕಾರಣದಿಂದ ಬ್ರಿಟಿಷರ ಕಾಲದಲ್ಲಿ ಮುಜರಾಯಿ ಇಲಾಖೆ ಆರಂಭ ಆಯಿತು ಎಂದು ವಿವರಿಸಿದರು.
Comments are closed.