Crime News: ಅಪ್ಪನ ಜೇಬಿನಿಂದ ಹಣ ಕದ್ದಿದ್ದಕ್ಕೆ ಮಗಳ ಕೊಲೆ

Share the Article

Murder: ಅಪ್ಪನ ಜೇಬಿನಿಂದ ಹಣ ಕದ್ದಿದ್ದಾಳೆ ಎನ್ನುವ ಕಾರಣಕ್ಕೆ ಅಪ್ರಾಪ್ತ ಮಗಳೊಬ್ಬಳನ್ನು ತಂದೆಯೋರ್ವ ಹತ್ಯೆ ಮಾಡಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ನಡೆದಿದೆ. 13 ವರ್ಷದ ಮಗಳನ್ನು ಕತ್ತು ಹಿಸುಕಿ ಕೊಂದ ಆರೋಪದಲ್ಲಿ 40 ವರ್ಷದ ವ್ಯಕ್ತಿಯನ್ನು ಬಂಧನ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಬಿಚೌಲಾ ಗ್ರಾಮದ ನಿವಾಸಿ ಏಳನೇ ತರಗತಿಯ ವಿದ್ಯಾರ್ಥಿನಿ ಸೋನಮ್‌ (13) ಮೃತ ಬಾಲಕಿ.

ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ಅನುಪ್ಶಹರ್‌ ಪೊಲೀಸ್‌ ಠಾಣೆ ಪ್ರದೇಶದ ಸೇತುವೆಯ ಕೆಳಗೆ ಪೊದೆಗಳಲ್ಲಿ ಬಾಲಕಿಯ ಶವ ದೊರಕಿದೆ.

ಇದನ್ನೂ ಓದಿ:Karnataka Gvt: ಜಾತಿ ಸಮೀಕ್ಷೆ- ಶಿಕ್ಷಕರಿಗೆ 5,000 ಗೌರವ ಧನ ಬಿಡುಗಡೆಗೊಳಿಸಿದ ರಾಜ್ಯ ಸರ್ಕಾರ !!

ಪೊಲೀಸರ ಪ್ರಕಾರ ತಂದೆ ಅಜಯ್‌ ಶರ್ಮಾ ತನ್ನ ಮಗಳು ಮನೆಯಿಂದ ಹಣವನ್ನು ಕದಿಯುತ್ತಿದ್ದಳು ಎಂದು ಹೇಳಿದ್ದು, ಇದರಿಂದ ದಂಪತಿ ನಡುವೆ ಪದೇ ಪದೇ ಗಲಾಟೆಯಾಗುತ್ತಿತ್ತು. ಹಾಗಾಗಿ ಶಾಲೆಗೆ ಹೋಗಿ ಮಗಳನ್ನು ಶಾಲೆ ಬಿಟ್ಟ ನಂತರ ಮನೆಗೆ ಕರೆದುಕೊಂಡು ಹೋಗದೆ ಹೊಲಕ್ಕೆ ಕರೆದುಕೊಂಡು ಹೋಗಿ ಸಾಯಿಸಿದ್ದಾನೆ. ಪೊಲೀಸರು ತನಿಖೆ ಮುಂದುವರಿಸಿದ್ದು, ಆರೋಪಿಯನ್ನು ಬಂಧನ ಮಾಡಿದ್ದಾರೆ.

Comments are closed.