Karnataka Gvt: ಜಾತಿ ಸಮೀಕ್ಷೆ- ಶಿಕ್ಷಕರಿಗೆ 5,000 ಗೌರವ ಧನ ಬಿಡುಗಡೆಗೊಳಿಸಿದ ರಾಜ್ಯ ಸರ್ಕಾರ !!

Share the Article

Karnataka Gvt: ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಬರದಿಂದ ಸಾಗಿದೆ. ಹೀಗೆ ಜಾತಿಗಣತಿ ಸಮೀಕ್ಷೆ ಕೈಗೊಳ್ಳುವ ಶಿಕ್ಷಕರಿಗೆ ರಾಜ್ಯ ಸರ್ಕಾರವು ಗುಡ್ ನ್ಯೂಸ್ ಕೊಟ್ಟಿದ್ದು, ಗೌರವಧನವನ್ನು ಬಿಡುಗಡೆ ಮಾಡಿ ಆದೇಶಿಸಿದೆ.

ಹೌದು, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ 1,20,728 ಸಮೀಕ್ಷಾದಾರರಿಗೆ(GBA ಹೊರತುಪಡಿಸಿ) ಮೊದಲನೇ ಕಂತಿನಲ್ಲಿ ಗೌರವಧನ ತಲಾ ರೂ.5000/- ಗಳಂತೆ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಒಟ್ಟು ರೂ.60,36,40,000 ಗಳನ್ನು ಬಿಡುಗಡೆ ಮಾಡಲು ತೀರ್ಮಾನಿಸಿ ಆದೇಶ ಹೊರಡಿಸಲಾಗಿದೆ.

ಈ ಅನುದಾನವನ್ನು ಸಮೀಕ್ಷಾದಾರರಿಗೆ ತಲಾ ರೂ.5,000 ರಂತೆ ಮೊದಲನೇ ಕಂತಿನ ಗೌರವಧನ ನೀಡಲು ಬಳಕೆ ಮಾಡುವುದು. ಉಳಿದ ಅನುದಾನವನ್ನು ಮುಂದಿನ ಕಂತುಗಳಲ್ಲಿ ಬಿಡುಗಡೆ ಮಾಡಲಾಗುವುದು.

ಇದನ್ನೂ ಓದಿ:PSI Recruitment Karnataka: PSI,PC ಆಕಾಂಕ್ಷಿಗಳಿಗೆ ಸಿಹಿ ಸುದ್ದಿ, ಗರಿಷ್ಠ ವಯೋಮಿತಿ ಸಡಿಲಿಕೆ

ಪ್ರಸ್ತಾವನೆಯಲ್ಲಿ ವಿವರಿಸಿರುವಂತೆ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ 1,20,728 ಸಮೀಕ್ಷಾದಾರರಿಗೆ (GBA ಹೊರತುಪಡಿಸಿ) ಅನುಬಂಧದಲ್ಲಿ ವಿವರಿಸಿರುವಂತೆ ಮೊದಲನೇ ಕಂತಿನಲ್ಲಿ ಗೌರವಧನ ತಲಾ ರೂ.5000/- ಗಳಂತೆ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಒಟ್ಟು ರೂ. 60,36,40,000/- (ರೂಪಾಯಿ ಅರವತ್ತು ಕೋಟಿ ಮೂವತ್ತಾರು ಲಕ್ಷದ ನಲವತ್ತು ಸಾವಿರಗಳು ಮಾತ್ರ) ಗಳನ್ನು ಸಮೀಕ್ಷಾ ಉದ್ದೇಶಕ್ಕಾಗಿ ನಿಗಮಗಳಿಂದ ಆಯೋಗದ ಠೇವಣಿ ಖಾತೆ ಲೆಕ್ಕ ಶೀರ್ಷಿಕೆ ಸಂಖ್ಯೆ: 8449-00-120-0-18-677 ಹಾಗೂ ಠೇವಣಿ ಸಂಖ್ಯೆ: 26572A010 ಗೆ ವರ್ಗಾವಣೆ ಮಾಡಿರುವ ಅನುದಾನದಿಂದ ಜಿಲ್ಲಾಧಿಕಾರಿಗಳ ಹೆಸರಿನಲ್ಲಿರುವ ಪಿ.ಡಿಖಾತೆ/ಬ್ಯಾಂಕ್ ಖಾತೆಗೆ ಈ ಕೆಳಕಂಡ ನಿಬಂಧನೆಗಳಿಗೆ ಒಳಪಟ್ಟು, ಬಿಡುಗಡೆ ಮಾಡಿ ಆದೇಶಿಸಿದೆ.

Comments are closed.