BBK-12: ಬಿಗ್ ಬಾಸ್ ಕನ್ನಡ- 12 ರ ಸ್ಪರ್ಧಿಗಳ ಪಟ್ಟಿ ವೈರಲ್ !!

BBK-12: ಕನ್ನಡಿಗರ ಬಹು ನಿರೀಕ್ಷೆಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 12 ಇನ್ನೇನು ಕೆಲವೇ ವಾರಗಳಲ್ಲಿ ಶುರುವಾಗಲಿದೆ. ಈಗಾಗಲೇ ಕಲರ್ಸ್ ಕನ್ನಡ ಒಂದರ ಮೇಲೊಂದು ಅಪ್ ಡೇಟ್ ಗಳನ್ನು ನೀಡುತ್ತಲೇ ಬಂದಿದೆ. ಈಗ ತಾನೆ ಬಹಳ ಕುತೂಹಲಕರವಾದ ಪ್ರೊಮೊ ರಿಲೀಸ್ ಕೂಡ ಆಗಿದೆ. ಈ ಬೆನ್ನಲ್ಲೇ ಬಿಗ್ ಬಾಸ್ ಮನೆಗೆ ಯಾವೆಲ್ಲ ಸ್ಪರ್ಧಿಗಳು ಬರುತ್ತಾರೆ ಎಂಬ ಲಿಸ್ಟ್ ಒಂದು ವೈರಲ್ ಆಗಿದೆ.

ನಟ ಸಾಗರ್
ಸತ್ಯ ಸೀರಿಯಲ್ ಹೀರೋ ನಟ ಸಾಗರ್ ಈ ಬಾರಿ ಬಿಗ್ ಬಾಸ್ ಕನ್ನಡ ಸೀಸನ್ 12 ಕ್ಕೆ ಬರಬಹುದು ಎನ್ನಲಾಗುತ್ತಿದೆ.
ಶ್ವೇತಾ ಪ್ರಸಾದ್
ಕಿರುತೆರೆ ನಟಿ ಶ್ವೇತಾ ಪ್ರಸಾದ್ ಕೂಡ ಈ ಸಲ ಬಿಗ್ ಬಾಸ್ ಸ್ಪರ್ಧಿ ಆಗಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ಹಾಸ್ಯ ನಟ ಕೆಂಪೇಗೌಡ
ನಟ ಕೆಂಪೇಗೌಡ ಬಿಗ್ ಬಾಸ್ ಮನೆಗೆ ಹೋಗೋದು ಕನ್ಫರ್ಮ್ ಎನ್ನಲಾಗುತ್ತಿದೆ. ಈ ಹಾಸ್ಯ ನಟ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ್ದಾರೆ.
ಪ್ರಿಯಾ ಸವದಿ
ಉತ್ತರ ಕರ್ನಾಟಕ ಪ್ರತಿಭೆ ಪ್ರಿಯಾ ಸವದಿ ಯೂಟೂಬ್ ಶಾರ್ಟ್ ಫಿಲ್ಮ್ಸ್ ಮೂಲಕ ಫೇಮಸ್ ಆದವರು. ಈ ಬಾರಿ ಬಿಗ್ ಬಾಸ್ ಗೆ ಬರೋದು ಬಹುತೇಕ ಖಚಿತವಾಗಿದೆ ಎನ್ನಲಾಗುತ್ತಿದೆ.
ಸೂರಜ್
ಕಾಮಿಡಿ ಶೋಗಳ ಮೂಲಕ ಗಮನ ಸೆಳೆದ ಸೂರಜ್ ಕಾಮಿಡಿ ಕಿಲಾಡಿಗಳು ಮೂಲಕ ಫೇಮಸ್ ಆದವರು. ಈ ಬಾರಿ ಬಿಗ್ ಬಾಸ್ ಗೆ ಬರಲಿದ್ದಾರೆ ಎನ್ನಲಾಗುತ್ತಿದೆ.
ಸ್ಪಂದನಾ ಸೋಮಣ್ಣ
ಕನ್ನಡ ಮತ್ತು ತೆಲುಗು ಸಿನಿಮಾ ರಂಗದ ನಟಿ ಸ್ಪಂದನಾ ಸೋಮಣ್ಣ ‘ನಾನು ನನ್ನ ಕನಸು’ ಮೂಲಕ ಖ್ಯಾತರಾದರು. ಈ ಬಾರಿ ಬಿಗ್ ಬಾಸ್ ಗೆ ಬರಲಿದ್ದಾರೆ ಎನ್ನಲಾಗುತ್ತಿದೆ.
ಸತೀಶ್
ದುಬಾರಿ ಶ್ವಾನಗಳನ್ನು ಸಾಕಿ ಫೇಮಸ್ ಆಗಿರುವ ಸತೀಶ್ ಈ ಬಾರಿ ಬಿಗ್ ಬಾಸ್‌ಗೆ ಬರಲಿದ್ದಾರೆ ಎನ್ನಲಾಗುತ್ತಿದೆ.
Comments are closed.