Survey: ‘ಜಾತಿಗಣತಿ’ ಸಮೀಕ್ಷೆಗೆ ಹಾಜರಾಗದ ಶಿಕ್ಷಕನಿಗೆ ಸಸ್ಪೆಂಡ್ ಆದೇಶ

Survey: ಜಾತಿಗಣತಿಗೆ (Survey) ಹಾಜರಾಗದ ಶಿಕ್ಷಕನಿಗೆ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ರಂಗನಾಥ್ ಎಂ. ಕ್ಷೇತ್ರ ಸಮನ್ವಯಾಧಿಕಾರಿಗಳು ಬಿ.ಆರ್.ಸಿ ಕೇಂದ್ರ, ಹೊಸನಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ಇವರನ್ನು ಕರ್ತವ್ಯಲೋಪ ಹಿನ್ನೆಲೆಯಲ್ಲಿ ಸರ್ಕಾರಿ ಸೇವೆಯಿಂದ ಅಮಾನತ್ತು ಮಾಡಿ ಆದೇಶ ಹೊರಡಿಸಲಾಗಿದೆ.



ಶ್ರೀ ರಂಗನಾಥ್ ಎಂ. ಕ್ಷೇತ್ರ ಸಮನ್ವಯಾಧಿಕಾರಿಗಳು ಇವರು ಕಾರಣ ಇಲ್ಲದೇ ಗೈರು ಹಾಜರಾಗಿರುವುದರಿಂದ Shadow area ದಲ್ಲಿ ಶಿಕ್ಷಕರುಗಳನ್ನು ಗಣತಿದಾರರಾಗಿ ನೇಮಕ ಮಾಡಲು ಸಾಧ್ಯವಾಗಿರುವುದಿಲ್ಲ. ಇದರಿಂದ ಗೊಂದಲ ಉಂಟಾಗಿದ್ದು, ಸದರಿ ನೌಕರರು ಮೇಲಾಧಿಕಾರಿಗಳ ದೂರವಾಣಿ ಕರೆಗೂ ಸ್ಪಂದಿಸದೇ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಕಾರ್ಯದಲ್ಲಿ ಹೊಸನಗರ ತಾಲ್ಲೂಕಿನ ಪ್ರಗತಿ ಕುಂಠಿತವಾಗಲು ನೇರವಾಗಿ ಕಾರಣರಾಗಿರುತ್ತಾರೆ ಮತ್ತು ಕಾರಣಕೇಳಿ ತಿಳುವಳಿಕೆಗೆ 24 ಗಂಟೆಯೊಳಗೆ ಲಿಖಿತ ಸಮಜಾಯಿಷಿ ಸಲ್ಲಿಸುವಂತೆ ಸೂಚಿಸಿದ್ದರೂ ಸಹ ಅವರು ಯಾವುದೇ ಉತ್ತರವನ್ನು ಸಲ್ಲಿಸಿರುವುದಿಲ್ಲ. ಆದ್ದರಿಂದ ಸದರಿ ನೌಕರರ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್, ಹೊಸನಗರ ತಾಲ್ಲೂಕು ಇವರು ಉಲ್ಲೇಖ (4)ರಂತೆ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.
ಇದನ್ನೂ ಓದಿ:Health Tips: ಬೆಳಗ್ಗೆ ಜೀರಿಗೆ ನೀರು ಕುಡಿಯುವುದರಿಂದ ಪ್ರಯೋಜನವೇನು?
ತಹಶೀಲ್ದಾರ್. ಹೊಸನಗರ ರವರ ಪ್ರಸ್ತಾವನೆಯನ್ನು ಪರಿಶೀಲಿಸಿರುವಂತೆ, ನೌಕರರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಕಾರ್ಯಗಳಿಗೆ ತೊಂದರೆಯನ್ನುಂಟು ಮಾಡಿರುವುದು ಮತ್ತು ಸರ್ಕಾರಿ ಸೇವೆಯಲ್ಲಿ ಉದ್ದಟತನದಿಂದ ವರ್ತಿಸಿ ಸರ್ಕಾರಿ ಸೇವೆಯಲ್ಲಿ ನಿರ್ಲಕ್ಷ್ಯತನ ತೋರಿರುವ ಕಾರಣ ನೌಕರರ ವಿರುದ್ಧ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ನೌಕರರನ್ನು ಸೇವೆಯಿಂದ ಅಮಾನತ್ತುಗೊಳಿಸುವುದು ಸೂಕ್ತವೆಂಬುದನ್ನು ಪರಿಗಣಿಸಿ. ಈ ಕೆಳಕಂಡ ಆದೇಶವನ್ನು ಹೊರಡಿಸಲಾಗಿದೆ.
Comments are closed.