BSNL: BSNLನ ‘ಸ್ವದೇಶಿ’ 4G ನೆಟ್ವರ್ಕ್ ಸೇವೆಗೆ ನಾಳೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

BSNL: ಸರ್ಕಾರಿ ಒಡೆತನದ ಭಾರತ ಸಂಚಾರ ನಿಗಮ ನಿಯಮಿತದ (ಬಿಎಸ್ಎನ್ಎಲ್) ‘ಸ್ವದೇಶಿ’ 4ಜಿ ನೆಟ್ವರ್ಕ್ಗೆ ನಾಳೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ.

ಭಾರತದ (india) ಸ್ವದೇಶಿ ನಿರ್ಮಿತ ನೆಟ್ವರ್ಕ್ ಕ್ಲೌಡ್ ಆಧಾರಿತವಾಗಿದ್ದು, 5Gಗೆ ಸರಾಗವಾಗಿ ಅಪ್ಗ್ರೇಡ್ ಮಾಡಬಹುದು ಎಂದು ದೂರಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ. ಬಿಎಸ್ಎನ್ಎಲ್ನ 4G ಸ್ಟ್ಯಾಕ್ ಅನ್ನು ಸೆಪ್ಟೆಂಬರ್ 27ರಂದು ದೇಶದ ಹಲವು ರಾಜ್ಯಗಳ ಸುಮಾರು 98,000 ಪ್ರದೇಶರಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ:Bank Holiday October 2025: ಅಕ್ಟೋಬರ್ನಲ್ಲಿ 21 ದಿನಗಳವರೆಗೆ ಬ್ಯಾಂಕ್ ರಜೆ
ಒಡಿಶಾದ ಜಾರ್ಸುಗುಡದಲ್ಲಿ ಪ್ರಧಾನಿ ನೆಟ್ವರ್ಕ್ಗೆ ಚಾಲನೆ ನೀಡಲಿದ್ದಾರೆ. ಇನ್ನು ಡಿಜಿಟಲ್ ಭಾರತ್ ನಿಧಿ ಯೋಜನೆ ಮೂಲಕ ಭಾರತದ ಶೇ 100 ರಷ್ಟು 4G ಸ್ಯಾಚುರೇಶನ್ ನೆಟ್ವರ್ಕ್ ಅನ್ನು ಸಹ ಪ್ರಧಾನಿ ಅನಾವರಣಗೊಳಿಸಲಿದ್ದಾರೆ.
Comments are closed.