Siddaramaiah: ಹೊಸ ಮನೆ ಕಟ್ಟಿದವರಿಗೆ OC ವಿನಾಯಿತಿ

Share the Article

Siddaramaiah: ಗ್ರೇಟರ್‌ ಬೆಂಗಳೂರು (Bangalore) ವ್ಯಾಪ್ತಿಯಲ್ಲಿನ 1200 ಚದರಡಿ ವಿಸ್ತೀರ್ಣದವರೆಗಿನ ನಿವೇಶನಗಳಿಗೆ, ಒಸಿಯಿಂದ ವಿನಾಯಿತಿ ನೀಡಲಾಗಿದೆ.

ನಕ್ಷೆ ಮಂಜೂರಾತಿ ಪಡೆದು ನಿರ್ದಿಷ್ಟ ಮಹಡಿವರೆಗಿನ ಮಿತಿಯಲ್ಲಿ ನಿರ್ಮಾಣಗೊಂಡಿರುವ ಹಾಗೂ ಹೊಸದಾಗಿ ನಿರ್ಮಿಸುವ ವಾಸದ ಕಟ್ಟಡಗಳಿಗೆ, ವಿನಾಯಿತಿ ನೀಡುವ ತೀರ್ಮಾನ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ.

ಒಸಿ ಗೆ ವಿನಾಯಿತಿ ನೀಡಿರುವ ವಾಸದ ಕಟ್ಟಡಗಳ ನಿರ್ಮಾಣಕ್ಕೆ, ಆರಂಭಿಕ ಪ್ರಮಾಣ ಪತ್ರ ಪಡೆಯುವ ಅಗತ್ಯವಿಲ್ಲ ಎಂದು ಮೂಲಗಳು ಹೇಳಿವೆ. ಹಾಗಾಗಿ, ನಿವೇಶನದಾರರಿಗೆ ಒಸಿ ಮತ್ತು ಸಿಸಿ ಎರಡರಿಂದಲೂ ವಿನಾಯಿತಿ ಸಿಕ್ಕಂತಾಗಲಿದೆ. ಈ ಬಗ್ಗೆ ಅಧಿಕೃತವಾಗಿ ಸಿಎಂ ಸಿದ್ದರಾಮಯ್ಯ (Siddaramaiah) ಕಚೇರಿಯಿಂದಲೇ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ.

ಇದನ್ನೂ ಓದಿ:Karnataka: ಎದ್ದು ಕಾಣುವ ‘ಅಂಗವೈಕಲ್ಯ’ ಇರುವ ‘ರಾಜ್ಯ ಸರ್ಕಾರಿ ನೌಕರರಿ’ಗೆ ಬಡ್ತಿಯಲ್ಲಿ ಮೀಸಲಾತಿ

Comments are closed.