Bengaluru: ‘ಚಿನ್ನೂ.. ಬಂಗಾರಿ.. ಬಂದ್ಬಿಡು ಲೀಲಾ..’ ಎನ್ನುತ್ತಿದ್ದ ಗಂಡನಿಂದ ಹೆಂಡತಿ ಮೇಲೆ ಡೆಡ್ಲಿ ಅಟ್ಯಾಕ್ !! ಮಂಜನ ಮತ್ತೊಂದು ಮುಖ ಬಯಲು

Share the Article

Bengaluru : ಸಂಸಾರದ ಗುಟ್ಟು ರಟ್ಟಾದರೆ ಅದನ್ನು ಮತ್ತೆ ಗುಟ್ಟಾಗಿ ಮಾಡಲು ಸಾಧ್ಯವಿಲ್ಲ. ಇಂದಿನ ದಾಂಪತ್ಯ ಬದುಕಿನಲ್ಲಿ ಕೊಂಚ ವೈ ಮನಸ್ಸು ಉಂಟಾದರೂ ಅದನ್ನು ಜಾಗರೂಕತೆಯಿಂದ ಬಗೆಹರಿಸಿಕೊಳ್ಳಬೇಕು. ಗಂಡ ಹೆಂಡತಿ ಇಬ್ಬರಿಗೂ ಬರುವ ಅರ್ಥ ಮಾಡಿಕೊಂಡಿದ್ದರೆ ಇದು ಸಾಧ್ಯ. ಇಲ್ಲದಿದ್ದರೆ ನಾನದನ್ನು ಬೀದಿ ರಂಪ ಮಾಡಿಕೊಳ್ಳುತ್ತೇನೆ ಎಂದರೆ ಕೆಲವೇ ಕ್ಷಣಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ನಾಡಿನಾದ್ಯಂತ ಫೇಮಸ್ ಆಗಬೇಕಾಗುತ್ತದೆ. ಇದಕ್ಕೆ ಉದಾಹರಣೆ ಇತ್ತೀಚಿಗಷ್ಟೇ ನಡೆದಿದ್ದ ಮಂಜು ಮತ್ತು ಲೀಲಾ ಪ್ರಕರಣವೇ ಸಾಕ್ಷಿ.

ಪತ್ನಿ ಲೀಲಾ ತನ್ನನ್ನು ಬಿಟ್ಟುಹೋದ ಕಾರಣಕ್ಕೆ ಮಂಜ ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ಮಧ್ಯಮಗಳಲ್ಲಿ ಕಣ್ಣೇರು ಹಾಕಿ ಹೆಂಡತಿಯನ್ನು ಬೇಡಿಕೊಂಡು ಮರಳಿ ಬರುವಂತೆ ಕೇಳಿಕೊಂಡಿದ್ದ. ಆಕೆಯು ಕೂಡ ಕಡ್ಡಿ ತುಂಡಾಗುವಂತೆ ನಾನು ಬರುವುದಿಲ್ಲ ಅಂದು ಬಿಟ್ಟಿದ್ದಳು. ಕೆಲವು ದಿನಗಳಲ್ಲೇ ಮಂಜ ಟ್ರೋಲಿಗರ ಬಾಯಿಗೆ ತುತ್ತಾಗಿಬಿಟ್ಟಿದ್ದ. ಇನ್ಸ್ಟಾಗ್ರಾಮ್ ರೀಲ್ಸ್ ನೋಡಿದರೆ ಸಾಕು ‘ಬಂದುಬಿಡು ಲೀಲಾ’ ಎಂಬ ಮಂಜಣ್ಣ ಡೈಲಾಗ್ ಆಧಾರಿತ ರೀಲ್ಸ್ ಗಳೇ ಮೊದಲಿಗೆ ಬರುತ್ತಿದ್ದವು. ಎಷ್ಟೋ ಜನ ಮಂಜಣ್ಣನ ಮೇಲೆ ಪರಿಸರವನ್ನು ಕೂಡ ತೋರಿಸಿದ್ದರು. ಆದರೆ ಇದೀಗ ಮಂಜಣ್ಣನ ಮತ್ತೊಂದು ಮುಖವಾಡ ಬಯಲಾಗಿದೆ.

ಯಸ್, ಇದುವರೆಗೂ ಹೆಂಡತಿ ಹೋದಳೆಂದು ಚಿನ್ನ, ಮುದ್ದು, ಬಂಗಾರಿ ಇಂದು ಹೋಗರೆಯುತ್ತಿದ್ದ ಮಂಜಣ್ಣ ಇದೀಗ ವೈಲೆಂಟ್ ಆಗಿದ್ದು ಹೆಂಡತಿಯ ಮೇಲೆ ಡೆಡ್ಲಿ ಅಟ್ಯಾಕ್ ಮಾಡಿದ್ದಾನೆ. ನಿನ್ನ ಕತೆ ಮುಗಿಸುತ್ತೇನೆ ಅಂತ ಸಂತು ಮನೆಗೆ ಎಂಟ್ರಿ ಕೊಟ್ಟಿದ್ದ ಮಂಜ, ಪತ್ನಿ ಲೀಲಾ ಮತ್ತು ಆಕೆಯ ಪ್ರಿಯಕರ ಸಂತು ಕಣ್ಣಿಗೆ ಕಾರದ ಪುಡಿ ಹಾಕಿ ಕೊಲೆ ಯತ್ನ ಮಾಡಿದ್ದಾನೆ. ಮಂಜನಿಂದ ಹಲ್ಲೆಗೊಳಾದ ಸಂತುಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆ ಸೇರಿದ್ದಾರೆ. ಅತ್ತ ಲೀಲಾ ಜಸ್ಟ್ ಮಿಸ್​​ ಆಗಿದ್ದಾರೆ.

ಅಂದಹಾಗೆ ಕಳೆದ ರಾತ್ರಿ 8.15 ಸುಮಾರಿಗೆ ಕಂಠ ಪೂರ್ತಿ ಕುಡಿದು ಕಾರದ ಪುಡಿ, ಬಿಯರ್ ಬಾಟಲ್ ನೊಂದಿಗೆ ಸಂತು ಮನೆಯ ಕಡೆ ಕಾರಿನಲ್ಲಿ ಹೊರಟಿದ್ದ. ರಸ್ತೆಯಲ್ಲಿ ಮಂಜ ಹೋಗುತ್ತಿರುವುದನ್ನು ನೋಡಿದ ಸಂತು ಸೇಹಿತ ಫೋನ್​​ ಮಾಡಿ ವಿಷಯ ತಿಳಿಸಿದ್ದ. ಕೂಡಲೇ ಲೀಲಾಳಿಗೆ ಫೋನ್​ ಮಾಡಿದ ಸಂತು ಬಾಗಿಲು ತೆಗೆಯದಂತೆ ಹೇಳಿದ್ದ. ಮನೆಯ ಬಾಗಿಲಿನಲ್ಲಿ ಹೊಂಚು ಹಾಕಿ ಕುಳಿತಿದ್ದ ಮಂಜು, ಮನೆಯ ಬಾಗಿಲು ತೆರದು ಹೊರಬಂದ ಲೀಲಾ ಮೇಲೆ ಏಕಾಏಕಿ ಕಾರದ ಪುಡಿ ಹಾಕಿ, ಬಿಯರ್ ಬಾಟಲಿಯಿಂದ ಚುಚ್ಚಲು ಮುಂದಾಗಿದ್ದ. ಈ ವೇಳೆ ತಡೆಯಲು ಬಂದ ಸಂತು ಮೇಲೆ ಕೂಡ ಕಾರದ ಪುಡಿ ಹಾಕಿ ಅಟ್ಯಾಕ್ ನಡೆಸಿದ್ದಾನೆ. ಈ ವೇಳೆ ಲೀಲಾ ಅಪಾಯದಿಂದ ಜಸ್ಟ್​ ಮಿಸ್​ ಆದರೆ, ಸಂತು ಕೈಗೆ ಗಂಭೀರ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಡೆಡ್ಲಿ ಅಟ್ಯಾಕ್ ನಡೆಸಿದ್ದ ಮಂಜು ಅಲ್ಲಿಂದ ಎಸ್ಕೇಪ್ ಆಗಿದ್ದ. ಮಂಜುವಿನಿಂದ ಜೀವ ಭಯ ಇದ್ದು, ಕಾನೂನಿ ರೀತಿಯ ಕ್ರಮ ಜರುಗಿಸಬೇಕೆಂದು ಸಂತು-ಲೀಲಾ ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ಐ ಲವ್‌ ಮಹಮ್ಮದ್‌ V/S ಐ ಲವ್ ಮಹಾದೇವ; ದೇವರ ಮೇಲೆಯೇ ಶುರುವಾಯ್ತು ಹೊಸ ಪ್ರೀತಿ!

Comments are closed.