Home News GST ಪರಿಷ್ಕರಣೆ ಬಳಿಕ ಅತಿ ಕಡಿಮೆ ಬೆಲೆಗೆ ಸಿಗುತ್ತಿರುವ ಕಾರು ಯಾವುದು?!

GST ಪರಿಷ್ಕರಣೆ ಬಳಿಕ ಅತಿ ಕಡಿಮೆ ಬೆಲೆಗೆ ಸಿಗುತ್ತಿರುವ ಕಾರು ಯಾವುದು?!

Hindu neighbor gifts plot of land

Hindu neighbour gifts land to Muslim journalist

GST: ಕೇಂದ್ರ ಸರ್ಕಾರವು ಜಿಎಸ್‌ಟಿ ಪರಿಷ್ಕರಣೆ ಮಾಡಿದ್ದು ಸೆಪ್ಟೆಂಬರ್ 22 ರಿಂದ ಇದು ಜಾರಿಯಾಗಿದೆ. ಇದರ ಬೆನ್ನಲ್ಲೇ ಕಾರುಗಳು ಹಾಗೂ ಬೈಕುಗಳ ದರದಲ್ಲಿ ಬಾರಿ ಕಡಿಮೆಯಾಗಿದೆ. ಹಾಗಾದರೆ ಜಿ ಎಸ್ ಟಿ ಪರಿಶೀಕರಣೆ ಬಳಿಕ ಮಾರುತಿ ಸುಜುಕಿ ಯಲ್ಲಿ ಅತಿ ಕಡಿಮೆ ಬೆಲೆಗೆ ಸಿಗುತ್ತಿರುವ ಕಾರು ಯಾವುದು ಗೊತ್ತಾ?

ಇತ್ತೀಚಿಗಷ್ಟೇ ಜಿಎಸ್‌ಟಿ ಪರಿಷ್ಕರಣೆ ಬಳಿಕ ಮಾರುತಿ ಸುಜುಕಿಯ ಕಾರುಗಳಲ್ಲಿ ದಾಖಲೆಯ ಮಾರಾಟವಾಗಿರುವುದು ಕಂಡುಬಂದಿತ್ತು. ಸದ್ಯ ಜಿಎಸ್​ಟಿ ಕಡಿತದ ನಂತರ ಮಾರುಕಟ್ಟೆಯಲ್ಲಿ ಅತಿ ಕಡಿಮೆ ಬೆಲೆಗೆ ಲಭ್ಯ ಇರುವ ಕಾರು ಯಾವುದು ಎಂಬುದನ್ನು ನೋಡಿದರೆ ಅದು ಮಾರುತಿ ಎಸ್-ಪ್ರೆಸ್ಸೊ ಆಗಿದೆ.

ಹೌದು, ಜಿಎಸ್‌ಟಿ 2.0 ಜಾರಿಗೆ ಬಂದ ನಂತರ, ಮಾರುತಿ ತನ್ನ ಹಲವಾರು ಸಣ್ಣ ಕಾರುಗಳ ಬೆಲೆಗಳನ್ನು ಕಡಿಮೆ ಮಾಡಿದೆ. ಇದರಲ್ಲಿ ಎಸ್-ಪ್ರೆಸ್ಸೊ ಅತಿದೊಡ್ಡ ಬೆಲೆ ಪರಿಹಾರವನ್ನು ಪಡೆದಿದ್ದು, ಅದರ ಆರಂಭಿಕ ಬೆಲೆ ಈಗ ಕೇವಲ ₹3.50 ಲಕ್ಷಕ್ಕೆ ಇಳಿದಿದೆ.

ಇದನ್ನೂ ಓದಿ:Scholarship: SC/ST ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನಕ್ಕೆ ಆನ್ಲೈನ್ ಅರ್ಜಿ ಆಹ್ವಾನ

ಅಂದಹಾಗೆ ಬೆಲೆ ಇಳಿಕೆಗೆ ಪ್ರಮುಖ ಕಾರಣವೆಂದರೆ ಸುರಕ್ಷತಾ ವೈಶಿಷ್ಟ್ಯಗಳಲ್ಲಿನ ವ್ಯತ್ಯಾಸ. ಹೊಸ ವಾಹನಗಳಿಗೆ ಸರ್ಕಾರವು ಪ್ರಮಾಣಿತ ಆರು ಏರ್‌ಬ್ಯಾಗ್‌ಗಳ ಅಗತ್ಯವನ್ನು ಕಡ್ಡಾಯಗೊಳಿಸಿದೆ. ಮಾರುತಿ ಈ ನವೀಕರಣದೊಂದಿಗೆ ಆಲ್ಟೊ ಕೆ 10 ಮತ್ತು ಸೆಲೆರಿಯೊವನ್ನು ಬಿಡುಗಡೆ ಮಾಡಿದೆ, ಆದರೆ ಎಸ್-ಪ್ರೆಸ್ಸೊ ಹೊಸ ಆವೃತ್ತಿ ಬಂದಿಲ್ಲ. ಇದು ಇನ್ನೂ ಎರಡು ಏರ್‌ಬ್ಯಾಗ್‌ಗಳಿಗೆ ಸೀಮಿತವಾಗಿದೆ. ಅದಕ್ಕಾಗಿಯೇ ಅದರ ಬೆಲೆಯನ್ನು ಕಡಿಮೆ ಇಡಲಾಗಿದೆ.