Survey: ಸರ್ವರ್ ಸಮಸ್ಯೆ ಪರಿಹರಿಸುವವರೆಗೆ ‘ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ’ ಮುಂದೂಡಲು ಸರ್ಕಾರಕ್ಕೆ ಶಿಕ್ಷಕರ ಮನವಿ

Survey: ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ’ಯಲ್ಲಿರುವ (Survey) ಸಮಸ್ಯೆಗಳನ್ನು ಪರಿಹರಿಸುವವರೆಗೂ ಮುಂದೂಡುವಂತೆ ರಾಜ್ಯ(karnataka) ಸರ್ಕಾರಕ್ಕೆ ಶಿಕ್ಷಕರು ಮನವಿ ಮಾಡಿದ್ದಾರೆ.



1) ಹೊಸ ವರ್ಷನ್ APP ಓಪನ್ ಆಗದೇ UNKNOWN ERROR ಬರುತ್ತಿರುವುದು.
2) ನಿಯೋಜಿಸಿರುವ ಮನೆಗಳು ಲೋಕೆಷನ್ ನಲ್ಲಿ ಸಿಗದೇ ಇರುವುದು.
3) ನಿಗದಿಪಡಿಸಿರುವ ಮನೆಗಳು ಒಂದೇ ಕಡೆ ಇಲ್ಲದಿರುವುದು
4) ಮನೆ ಸಮೀಕ್ಷೆ ಮಾಡಿದ ನಂತರ submit ಆಗದೇ ಇರುವುದು.
5) OTP ಮತ್ತು ODP ಸಮಸ್ಯೆ
6) ಮನೆಪಟ್ಟಿ ಮುಖ್ಯಸ್ಥರು ಹೆಸರು ಸರಿಯಾಗಿ ನಮೂದಾಗದಿರುವುದು.
7) ಅನಾರೋಗ್ಯ ಮತ್ತು ನಿವೃತ್ತಿ ಅಂಚಿನಲ್ಲಿರುವ ಶಿಕ್ಷಕರನ್ನು ನಿಯೋಜಿಸಿರುವುದು.
8) ಮೇಲ್ವಿಚಾರಕರಿಗೆ ಸೂಕ್ತ ತರಬೇತಿ ನೀಡದೆ ಅವರಿಗೆ ಸಮಸ್ಯೆಗಳನ್ನು ಪರಿಹರಿಸಲು ಆಗುತ್ತಿಲ್ಲ.
9) ಸೂಕ್ತವಾದ ಸಹಾಯವಾಣಿ (help line )ಲಭ್ಯವಿಲ್ಲ. ಲಭ್ಯವಿರುವ ಸಹಾಯವಾಣಿಗೆ ಕರೆ ಮಾಡಿದರೆ ಯಾವುದೇ ಉತ್ತರವಿಲ್ಲ.
10) ಕೆಲವು ಶಿಕ್ಷಕರ ಬಳಿ ಇರುವ ಪೋನ್ ಗಳು(mobile) APP ಗಳಿಗೆ ಸಹಕರಿಸದಿರುವುದು.
11) ಕೆಲವು ಶಿಕ್ಷಕರಿಗೆ ಸ್ಮಾರ್ಟ ಪೋನ್ (smart phone) ಗಳ ಬಳಕೆ ತಿಳಿಯದೇ ಪರದಾಡುತ್ತಿರುವು.
12. ಈಗಾಗಲೇ ಯು ಎಚ್ ಐ ಡಿ (UHID)ಸಂಖ್ಯೆಯನ್ನು ಹಚ್ಚಿದ್ದು ಅವು ಮನೆಯ ಮಕ್ಕಳಾಗಿರಬಹುದು ಮನೆಯವರಾಗಿರಬಹುದು ಹರಿದು ಹಾಕಿರುವುದು. ಯು ಹೆಚ್ ಐಡಿಯ ಕೊರತೆ ಕಾರಣದಿಂದ ಗಣತಿ ಮಾಡಲಿಕ್ಕೆ ಸಾಧ್ಯವಾಗದೇ ಇರುವುದು.
ಇದನ್ನೂ ಓದಿ:Karnataka: ಪೊಲೀಸರಿಗೆ ‘ಪ್ರಕರಣಗಳ ನಿರ್ವಹಣೆಗೆ’ ಮಾರ್ಗಸೂಚಿ ಪ್ರಕಟ
ಹೀಗೆ ಹತ್ತು ಹಲವಾರು ಸಮಸ್ಯೆಗಳು ಶಿಕ್ಷಕರಿಗೆ ಸಮೀಕ್ಷೆ ಸಮಯದಲ್ಲಿ ಎದುರಾಗುತ್ತಿವೆ ಕಾರಣ ತಾವುಗಳು ಈ ಸಾಮಾಜಿಕ ಮತ್ತು ಆರ್ಥಿಕ ಗಣತಿಯ ಎಲ್ಲ ಸಮಸ್ಯೆಗಳನ್ನು ಪರಿಹರಿಸಿ, ಪರಿಹರಿಸುವವರೆಗೂ ಮುಂದೂಡಿ ದಸರಾ ಹಬ್ಬವನ್ನು ಆಚರಿಸಲು ಶಿಕ್ಷಕರಿಗೆ ಅನುಕೂಲಿಸಲು ಮನವಿ ಮಾಡಿದ್ದಾರೆ.
Comments are closed.