Home News Karnataka School: ಶಾಲಾ ಮಕ್ಕಳಿಗೆ ಸಿಹಿ ಸುದ್ದಿ, ಇನ್ನು ಸಂಜೆ ಸಿಗಲಿದೆ ಸ್ನ್ಯಾಕ್ಸ್‌

Karnataka School: ಶಾಲಾ ಮಕ್ಕಳಿಗೆ ಸಿಹಿ ಸುದ್ದಿ, ಇನ್ನು ಸಂಜೆ ಸಿಗಲಿದೆ ಸ್ನ್ಯಾಕ್ಸ್‌

Hindu neighbor gifts plot of land

Hindu neighbour gifts land to Muslim journalist

Karnataka School: ರಾಜ್ಯ ಸರಕಾರಿ ಮತ್ತು ಅನುದಾನಿತ ಶಾಲೆಗಳ ಒಂದರಿಂದ ಹತ್ತನೇ ತರಗತಿವರೆಗಿನ ಮಕ್ಕಳಿಗೆ ರಾಹಿ ಹೆಲ್ತ್‌ ಮಿಕ್ಸ್‌ ಪುಡಿ ಮಿಶ್ರಿತ ಬಿಸಿ ಹಾಲು ನೀಡುವ ಕಾರ್ಯಕ್ರಮವನ್ನು ವಾರದಲ್ಲಿ ಐದು ದಿನಗಳಿಗೆ ವಿಸ್ತರಣೆ ಮಾಡಿ ಸರಕಾರ ಆದೇಶ ನೀಡಿದೆ.

ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದ ಅನುದಾನದಲ್ಲಿ ದಸರಾ ರಜೆ ಮುಗಿದ ನಂತರ ಸಂಜೆ ವೇಳೆ ಶಾಲಾ ಮಕ್ಕಳಿಗೆ ವಿಶೇಷ ಪೌಷ್ಟಿಕಾಂಶ ಸ್ನ್ಯಾಕ್ಸ್‌ ನೀಡಲಾಗುವುದು. ಬಳ್ಳಾರಿ, ಚಿತ್ರದುರ್ಗ, ವಿಜಯನಗರ, ತುಮಕೂರು ಜಿಲ್ಲೆಗಳ ಸರಕಾರಿ ಶಾಲಾ ಮಕ್ಕಳಿಗೆ ಈ ಸೌಲಭ್ಯ ದೊರಕಲಿದೆ.

ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿಗಾಗಿನ ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದ ಅನುದಾನವನ್ನು ಮಕ್ಕಳ ಆರೋಗ್ಯ ರಕ್ಷಣೆಗೆ ಬಳಸಲು ಈ ಯೋಜನೆಯನ್ನು ರೂಪಿಸಲಾಗಿದೆ. ಗಣಿ ಬಾಧಿತ ನಾಲ್ಕು ಜಿಲ್ಲೆಗಳು ಹತ್ತು ತಾಲೂಕುಗಳ ವ್ಯಾಪ್ತಿಯ ಎಲ್ಲಾ ಸರಕಾರಿ ಶಾಲೆಗಳ ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ಸಂಜೆ ವೇಳೆ ಸ್ನ್ಯಾಕ್ಸ್‌ ನೀಡಲಾಗುವುದು.

ಇದನ್ನೂ ಓದಿ:Bangalore: ಇಂದು ಪ್ರೀಡಂ ಪಾರ್ಕ್‌ನಲ್ಲಿ ಸೌಜನ್ಯ ಪರ ಹೋರಾಟಗಾರರಿಂದ ನ್ಯಾಯ ಸಮಾವೇಶ

ಪ್ರತಿ ಮಗುವಿಗೆ ವಾರದಲ್ಲಿ ಒಂದು ದಿನ ಕೆಎಂಎಫ್‌ ನಂದಿನಿ ಪೇಡ ಅಥವಾ ಮೈಸೂರು ಪಾಕ್‌, ವಾರದಲ್ಲಿ ನಾಲ್ಕು ದಿನ ಹಣ್ಣು, ಎರಡು ದಿನ ಬೇಯಿಸಿದ ತರಕಾರಿ ನೀಡುವ ನಿಟ್ಟಿನಲ್ಲಿ ಸಿದ್ಧತೆ ನಡೆದಿದೆ. ಶಿಕ್ಷಕರು ಸಮೀಕ್ಷೆ ಕಾರ್ಯದಲ್ಲಿ ನಿಯೋಜಿತರಾಗಿದ್ದು, ದಸರಾ ಮುಗಿದ ನಂತರ ಶಾಲೆಗಳಲ್ಲಿ ಸಂಜೆ ಲಘು ಉಪಾಹಾರ ವ್ಯವಸ್ಥೆ ಜಾರಿ ಮಾಡಲಾಗುವುದು ಎಂದು ಹೇಳಲಾಗಿದೆ.