Aarogya Sanjeevani: ಸರ್ಕಾರಿ ನೌಕರರಿಗೆ ಅ.1ರಿಂದ ಆರೋಗ್ಯ ಸಂಜೀವಿನಿ ಯೋಜನೆ ಜಾರಿ

Share the Article

Aarogya Sanjeevani: ಸರ್ಕಾರಿ ನೌಕರರು ಹಾಗೂ ಕುಟುಂಬ ಸದಸ್ಯರಿಗೆ ಕರ್ನಾಟಕ ಆರೋಗ್ಯ ಸಂಜೀವಿನಿ (Aarogya Sanjeevani) ಯೋಜನೆ ಜಾರಿಗೊಳಿಸಲಾಗಿದ್ದು, ಅಕ್ಟೋಬರ್ 1 ರಿಂದಲೇ ಈ ಯೋಜನೆ ಜಾರಿಗೆ ಬರಲಿದೆ. ಈ ಯೋಜನೆಯಡಿ ನಗದು ರಹಿತ ವೈದ್ಯಕೀಯ ಚಿಕಿತ್ಸೆ ಸಿಗಲಿದೆ. ನೋಂದಾಯಿತ ಖಾಸಗಿ ಆಸ್ಪತ್ರೆಯಲ್ಲಿಯೂ ನಗದು ರಹಿತ ಉಚಿತ ಚಿಕಿತ್ಸೆ (treatment) ಸಿಗಲಿದೆ.

ಈ ಯೋಜನೆಯ ಫ‌ಲಾನುಭವಿಗಳಾಗಲು ಸರ್ಕಾರಿ ನೌಕರರು ಮಾಸಿಕವಾಗಿ ಇಂತಿಷ್ಟು ವಂತಿಕೆ ಕೊಡಬೇಕಾಗುತ್ತದೆ. ಇದು ನೌಕರರ ಖಾತೆಯಿಂದ ಅಕ್ಟೋಬರ್‌ನಿಂದಲೇ ಕಡಿತವಾಗಲಿದೆ.

ಈ ಯೋಜನೆಗೆ ಫ‌ಲಾನುಭವಿಗಳಾಗಲು ನೌಕರರ ಇಚ್ಛೆಗೆ ಆನುಸಾರವಾಗಿದೆ.

ಇದನ್ನೂ ಓದಿ:NIA: ಮೋದಿ ರಾಷ್ಟ್ರಧ್ವಜ ಹಾರಿಸೋದನ್ನ ತಡೆಯಲು ಬಹುಮಾನ ಘೋಷಿಸಿದ್ದ ಪನ್ನುನ್ ವಿರುದ್ಧ NIA ಕೇಸ್

ವಂತಿಕೆ ಎಷ್ಟು ಕಡಿತಗೊಳ್ಳಲಿದೆ?

ಗ್ರೂಪ್‌ ಎ -1000 ರೂ., ಗ್ರೂಪ್‌ ಬಿ – 500 ರೂ. ಗ್ರೂಪ್‌ ಸಿ – 350 ರೂ., ಗ್ರೂಪ್‌ ಡಿ – 250 ರೂ. ಪಾವತಿಸಬೇಕಾಗುತ್ತದೆ.

Comments are closed.