Home News KPCL: ಕೆಪಿಸಿಎಲ್‌ ಸಹಾಯಕ ಇಂಜಿನಿಯರ್‌ ನೇಮಕಾತಿ ಮರು ಪರೀಕ್ಷೆ ನಡೆಸಲು ಸುಪ್ರೀಂಕೋರ್ಟ್‌ ಆದೇಶ

KPCL: ಕೆಪಿಸಿಎಲ್‌ ಸಹಾಯಕ ಇಂಜಿನಿಯರ್‌ ನೇಮಕಾತಿ ಮರು ಪರೀಕ್ಷೆ ನಡೆಸಲು ಸುಪ್ರೀಂಕೋರ್ಟ್‌ ಆದೇಶ

KPCL KSFC Recruitment

Hindu neighbor gifts plot of land

Hindu neighbour gifts land to Muslim journalist

Supreme Court: ಕರ್ನಾಟಕ ವಿದ್ಯುತ್‌ ನಿಗಮ ನಿಯಮಿತ (ಕೆಪಿಸಿಎಲ್)‌ 404 ಸಹಾಯಕ ಇಂಜಿನಿಯರ್‌ ಮತ್ತು ಕಿರಿಯ ಇಂಜಿನಿಯರ್‌ ನೇಮಕಾತಿಗೆ ನಾಲ್ಕು ತಿಂಗಳೊಳಗೆ ಹೊಸದಾಗಿ ಪರೀಕ್ಷೆ ನಡೆಸುವಂತೆ ರಾಜ್ಯ ಸರಕಾರಕ್ಕೆ ಸುಪ್ರೀಂ ಕೋರ್ಟ್‌ ಆದೇಶಿಸಿದೆ.

ಕೆಪಿಸಿಎಲ್‌ ಸಹಾಯಕ ಇಂಜಿನಿಯರ್‌ (ಇಎ) ಮತ್ತು ಕಿರಿಯ ಇಂಜಿನಿಯರ್‌ (ಜೆಇ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರ 2024 ರ ಮೇ 8 ರಂದು ಆಯ್ಕೆ ಪಟ್ಟಿ ಪ್ರಕಟ ಮಾಡಿದ್ದು, ಇದನ್ನು ಪ್ರಶ್ನೆ ಮಾಡಿ ಸಲ್ಲಿಕೆ ಮಾಡಲಾಗಿದ್ದು ಮೇಲ್ಮನವಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌ ವಿಭಾಗೀಯ ಪೀಠ ಆಯ್ಕೆ ಪಟ್ಟಿಯನ್ನು ರದ್ದು ಮಾಡಿ ಮೇ 28 ರಂದು ತೀರ್ಪು ನೀಡಿತ್ತು.

ಅದನ್ನು ಪ್ರಶ್ನೆ ಮಾಡಿ ರಾಜ್ಯ ಸರಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಈ ಮೇಲ್ಮನವಿಯನ್ನು ಸುಪ್ರೀಂಕೋರ್ಟ್‌ ಮಂಗಳವಾರ ವಜಾ ಮಾಡಿ ಮರು ಪರೀಕ್ಷೆ ನಡೆಸಲು ಆದೇಶಿಸಿದೆ.

ಇದನ್ನೂ ಓದಿ:APL Card: ಎಪಿಎಲ್‌ ಕಾರ್ಡ್‌ದಾರರಿಗೆ ಉಚಿತವಾಗಿದ್ದ ಸಿಟಿ, MRI ಸ್ಕ್ಯಾನ್‌ಗೆ ಶೇ.70 ರಷ್ಟು ಶುಲ್ಕ ಪಾವತಿ ಕಡ್ಡಾಯ ಮಾಡಿದ ಸರಕಾರ