APL Card: ಎಪಿಎಲ್‌ ಕಾರ್ಡ್‌ದಾರರಿಗೆ ಉಚಿತವಾಗಿದ್ದ ಸಿಟಿ, MRI ಸ್ಕ್ಯಾನ್‌ಗೆ ಶೇ.70 ರಷ್ಟು ಶುಲ್ಕ ಪಾವತಿ ಕಡ್ಡಾಯ ಮಾಡಿದ ಸರಕಾರ

Share the Article

APL Card: ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ರೋಗ ಪತ್ತೆ ಸೇವೆ ಸೌಲಭ್ಯ ಪಡೆದುಕೊಳ್ಳುತ್ತಿದ್ದ ಎಪಿಎಲ್‌ ಕಾರ್ಡ್‌ ಹೊಂದಿದವರಿಗೆ ಶೇ.70 ರಷ್ಟು ಶುಲ್ಕ ಪಾವತಿ ಕಡ್ಡಾಯ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಲ್ಲಿ ಇದುವರೆಗೆ ರಾಜ್ಯದ 16 ಜಿಲ್ಲಾ ಆಸ್ಪತ್ರೆಗಳಲ್ಲಿ ಉಚಿತ ಸಿಟಿ, ಎಂ.ಆರ್‌.ಐ ಸ್ಕ್ಯಾನ್‌ ಸೌಲಭ್ಯ ಕಲ್ಪಿಸಲಾಗಿತ್ತು. ಆದರೆ ಜುಲೈನಲ್ಲಿ ಶುಲ್ಕ ಪಾವತಿ ಕುರಿತು ಪ್ರಸ್ತಾವನೆ ಮಾಡಲಾಗಿತ್ತು. ಸೆ.23 ರ ಮಂಗಳವಾರದಿಂದಲೇ ಎಪಿಎಲ್‌ ಕಾರ್ಡ್‌ದಾರರಿಗೆ ಶುಲ್ಕ ಪಾವತಿ ಮಾಡಿ ಸೇವೆ ಪಡೆಯುವುದನ್ನು ಕಡ್ಡಾಯ ಮಾಡಿ ಜಿಲ್ಲಾ ಆಸ್ಪತ್ರೆಗಳಿಗೆ ಸುತ್ತೋಲೆ ಕಳುಹಿಸಲಾಗಿದೆ.

ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ಐಟಿ ವಿಭಾಗದ ಮೂಲಕ ಲಾಜಿಸ್ಟಿಕ್‌ ಅನುಷ್ಠಾನ ಮಾಡುವುದನ್ನು ಕಡ್ಡಾಯ ಮಾಡಿ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಸೆ.18 ರಂದೇ ಈ ಆದೇಶ ಹೊರಡಿಸಿದ್ದು, ಸೆ.23 ರಿಂದ ಕಡ್ಡಾಯವಾಗಿ ಎಪಿಎಲ್‌ ಕಾರ್ಡ್‌ದಾರರು ಶೇ.70/30 ಪ್ರಕಾರ ಆನ್ಲೈನ್‌ ಹಾಗೂ ಆಫ್ಲೈನ್‌ ಪಾವತಿ ಮೂಲಕ ಪಡೆದುಕೊಳ್ಳಬಹುದಾಗಿದೆ.

ಇದನ್ನೂ ಓದಿ:Bangalore: ರಾಜ್ಯದಲ್ಲಿ SC,ST ಜೊತೆ ಸೇರಿದ್ದ 14 ಕ್ರೈಸ್ತ ಜಾತಿಗಳಿಗೆ ಕೊಕ್‌: ಸರಕಾರದಿಂದ ಮಹತ್ವದ ಆದೇಶ

ದಾವಣಗೆರೆ, ಚಾಮರಾಜನಗರ, ಚಿಕ್ಕಮಗಳೂರು, ವಿಜಯಪುರ, ಚಿತ್ರದುರ್ಗ, ಉಡುಪಿ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಯಾದಗಿರಿ, ಕೊಡಗು, ತುಮಕೂರು, ಕೋಲಾರ, ಕಾರವಾರ ಜಿಲ್ಲಾ ಆಸ್ಪತ್ರೆಗಳು ಬೆಂಗಳೂರಿನ ಜಯನಗರ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸಿಟಿ, ಎಂಆರ್‌ಐ ಸ್ಕ್ಯಾನ್‌ಗೆ ಎಪಿಎಲ್‌ ಕಾರ್ಡ್‌ದಾರರು ಶುಲ್ಕ ಭರಿಸಿ ಸೇವೆ ಪಡೆಯಬೇಕಿದೆ ಎಂದು ಹೇಳಲಾಗಿದೆ ಎಂದು ವರದಿಯಾಗಿದೆ.

 

Comments are closed.