Bangalore: ರಾಜ್ಯದಲ್ಲಿ SC,ST ಜೊತೆ ಸೇರಿದ್ದ 14 ಕ್ರೈಸ್ತ ಜಾತಿಗಳಿಗೆ ಕೊಕ್‌: ಸರಕಾರದಿಂದ ಮಹತ್ವದ ಆದೇಶ

Share the Article

Bangalore: ರಾಜ್ಯದಲ್ಲಿ SC,ST ಜೊತೆ 14 ಕ್ರೈಸ್ತ ಜಾತಿಗಳಿಗೆ ಕೊಕ್‌ ನೀಡಿದ್ದು, ಈ ಕುರಿತು ಸರಕಾರ ಮಹತ್ವದ ಆದೇಶ ನೀಡಿದೆ.

ಸುತ್ತೋಲೆಯಲ್ಲೇನಿದೆ?
ದಿನಾಂಕ:23-09-2025ರ ಪತ್ರದ ಮೂಲಕ ಭಾರತೀಯ ಜನತಾ ಪಕ್ಷದ ಪದಾಧಿಕಾರಿಗಳಾದ ಛಲವಾದಿ ನಾರಾಯಣಸ್ವಾಮಿ (ವಿಧಾನ ಪರಿಷತ್ ವಿಪಕ್ಷ ನಾಯಕರು), ಎ.ನಾರಾಯಣಸ್ವಾಮಿ (ಕೇಂದ್ರದ ಮಾಜಿ ಸಚಿವರು) ಹಾಗೂ ವಿ. ಸುನಿಲ್ ಕುಮಾರ್(ಬಿ.ಜೆ.ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕರು) ಆಯೋಗದ ಅಧ್ಯಕ್ಷರಿಗೆ ಮನವಿ ಸಲ್ಲಿಸಿ ಈ ಕೆಳಕಂಡ ಜಾತಿಗಳನ್ನು ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಸೇರಿಸಬಾರದು ಎಂದು ಆಗ್ರಹಿಸಿರುತ್ತಾರೆ.

1) ಆದಿ ಆಂಧ್ರ ಕ್ರಿಶಿಯನ್
2)ಆದಿ ಕರ್ನಾಟಕ ಕ್ರಿಶ್ಚಿಯನ್
3)ಆದಿದ್ರಾವಿಡ ಕ್ರಿಶ್ಚಿಯನ್
4)ಬಂಜಾರ ಕ್ರಿಶ್ಚಿಯನ್
5)ಬುಡುಗ ಜಂಗಮ ಕ್ರಿಶ್ಚಿಯನ್
6)ಹೊಲೆಯ ಕ್ರಿಶ್ಚಿಯನ್
7)ಲಮಾಣಿ ಕ್ರಿಶ್ಚಿಯನ್
8)ಲಂಬಾಣಿ ಕ್ರಿಶ್ಚಿಯನ್
9)ಮಾದಿಗ ಕ್ರಿಶ್ಚಿಯನ್
10)ಮಹಾರ್ ಕ್ರಿಶ್ಚಿಯನ್
11)ಮಾಲಾ ಕ್ರಿಶ್ಚಿಯನ್
12)ಪರಯ ಕ್ರಿಶ್ಚಿಯನ್
13)ವಡ್ಡ ಕ್ರಿಶ್ಚಿಯನ್
14)ವಾಲ್ಮೀಕಿ ಕ್ರಿಶ್ಚಿಯನ್

ಮೇಲೆ ತೋರಿಸಲಾದ 14 ಜಾತಿಗಳ ಕುರಿತು ದಿನಾಂಕ: 23-09-2025 ರಂದು ನಡೆದ ಆಯೋಗದ ಸಭೆಯಲ್ಲಿ ದೀರ್ಘವಾಗಿ ಚರ್ಚಿಸಿ ಪರಿಶೀಲಿಸಲಾಯಿತು. ದಿನಾಂಕ:22-08-2025 ರಂದು ಪತ್ರಿಕೆಗಳಲ್ಲಿ ಸಲಹೆ ಕೋರಿ ಪ್ರಕಟಿಸಿರುವ ಜಾತಿ ಪಟ್ಟಿಯಲ್ಲಿ ಈ ಜಾತಿಗಳ ಹೆಸರು ನಮೂದಾಗಿತ್ತು. ನಂತರ ಸ್ವೀಕರಿಸಿರುವ ಸಲಹೆ ಮತ್ತು ಚರ್ಚೆಯ ನಂತರ ಮೇಲಿನ ಜಾತಿಗಳು ಸೇರಿದಂತೆ ಹಲವು ಜಾತಿಗಳ ಹೆಸರನ್ನು ಅಂತಿಮ ಪಟ್ಟಿಯಲ್ಲಿ ಕೈಬಿಟ್ಟು ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಆದಾಗ್ಯೂ ಸಮೀಕ್ಷಾ ಕೈಪಿಡಿ-2025 ರ ಪುಟ ಸಂಖ್ಯೆ:57 ರಿಂದ 89 ರವರೆಗಿನ 1561 ಜಾತಿಗಳ ಪಟ್ಟಿಯಲ್ಲಿ ಹಾಗೂ EDCS ಸಂಸ್ಥೆಯು ಸಿದ್ಧಪಡಿಸಿರುವ ಸಮೀಕ್ಷಾ ಆಪ್ನಲ್ಲಿ ಅಳವಡಿಸಿರುವ ಜಾತಿ ಪಟ್ಟಿಯ Drop-down ನಲ್ಲಿಯೂ ಸಹ ಮೇಲ್ಕಂಡ 14 ಜಾತಿಗಳು ಸೇರಿರುವುದಿಲ್ಲವೆಂಬ ಅಂಶವನ್ನು ಖಚಿತಪಡಿಸಿಕೊಳ್ಳಲಾಗಿದೆ. ಮೇಲಿನ ಸ್ಪಷ್ಟಿಕರಣವನ್ನು ಸಾರ್ವಜನಿಕರ ಮಾಹಿತಿಗಾಗಿ ಈ ಮೂಲಕ ಪ್ರಕಟಿಸಲಾಗಿದೆ.

ಇದನ್ನೂ ಓದಿ:Bangalore Police: ಒಂದು ಸಣ್ಣ ಘಟನೆ, ಒಂದು ದೊಡ್ಡ ಪಾಠ ಮತ್ತು ಅಪಾರ ಗೌರವ : ಉತ್ತರದ ಮಹಿಳೆಗೆ ಬೆಂಗಳೂರಲ್ಲಾದ ಆ ಅನುಭವ ಏನು..?

Comments are closed.