Caste Survey: ಇಂದಿನಿಂದ ಜಾತಿ ಗಣತಿ ಆರಂಭ- ಇಲ್ಲಿದೆ ಗಣತಿದಾರರು ಮನೆಗೆ ಬಂದಾಗ ಕೇಳಲಿರುವ 60 ಪ್ರಶ್ನೆಗಳು!!

Share the Article

Caste Survey : ರಾಜ್ಯದಲ್ಲಿ ಭಾರಿ ಚರ್ಚೆ ಮತ್ತು ವಿವಾದಗಳ ಇಂದಿನಿಂದ ಜಾತಿ ಗಣತಿ, ಆರಂಭವಾಗಲಿದೆ. ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಪ್ರತಿ ಕುಟುಂಬದ ಸಮಗ್ರ ಚಿತ್ರಣವನ್ನು ಪಡೆಯುವ ಗುರಿಯನ್ನು ಹೊಂದಿದ್ದು ಈ “ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಸಮೀಕ್ಷೆ” ನಡೆಸುತ್ತಿದೆ. ಈ ಸಮೀಕ್ಷೆಯಲ್ಲಿ ಸಾರ್ವಜನಿಕರ ಬಳಿ ಸುಮಾರು 60 ಪ್ರಮುಖ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅದರ ಪಟ್ಟಿ ಇಲ್ಲಿದೆ ನೋಡಿ.

ಅಂದಹಾಗೆ ಸರ್ಕಾರವು ಈ ಸಮೀಕ್ಷೆಯ ಬಗ್ಗೆ ಹಲವು ಮಾಹಿತಿಗಳನ್ನು ನೀಡಿದ್ದರೂ, ಸಮೀಕ್ಷೆಯಲ್ಲಿ ಕೇಳಲಾಗುವ ಪ್ರಶ್ನೆಗಳನ್ನು ಅಧಿಕೃತವಾಗಿ ಪ್ರಕಟಿಸಿರಲಿಲ್ಲ. ಇದೀಗ, ಗಣತಿದಾರರು ನಿಮ್ಮ ಮನೆಗೆ ಭೇಟಿ ನೀಡಿದಾಗ ಕೇಳಲಿರುವ ಪ್ರಮುಖ ಪ್ರಶ್ನೆಗಳು ಇಲ್ಲಿವೆ.

ಪಟ್ಟಿ ರೂಪದಲ್ಲಿ ಪ್ರಶ್ನೆಗಳು ಈ ಕೆಳಗಿನಂತಿವೆ
1. ಮನೆಯ ಮುಖ್ಯಸ್ಥರ ಹೆಸರು
2. ತಂದೆಯ ಹೆಸರು
3. ತಾಯಿಯ ಹೆಸರು
4. ಕುಟುಂಬದ ಕುಲ ಹೆಸರು
5. ಮನೆ ವಿಳಾಸ
6. ಮೊಬೈಲ್ ಸಂಖ್ಯೆ
7. ರೇಷನ್ ಕಾರ್ಡ್ ಸಂಖ್ಯೆ
8. ಆದಾರ್ ಸಂಖ್ಯೆ
9. ಮತದಾರರ ಗುರುತಿನ ಚೀಟಿ ಸಂಖ್ಯೆ
10. ಕುಟುಂಬದ ಒಟ್ಟು ಸದಸ್ಯರು
11. ಧರ್ಮ
12. ಜಾತಿ / ಉಪಜಾತಿ
13. ಜಾತಿ ವರ್ಗ (SC/ST/OBC/General/Other)
14. ಜಾತಿ ಪ್ರಮಾಣ ಪತ್ರ ಇದೆಯೇ?
15. ಪ್ರಮಾಣ ಪತ್ರ ಸಂಖ್ಯೆ
16. ಜನ್ಮ ದಿನಾಂಕ
17. ವಯಸ್ಸು
18. ಲಿಂಗ (ಪುರುಷ/ಸ್ತ್ರೀ/ಇತರೆ)
19. ವೈವಾಹಿಕ ಸ್ಥಿತಿ
20. ಜನ್ಮ ಸ್ಥಳ
21. ವಿದ್ಯಾಭ್ಯಾಸದ ಮಟ್ಟ
22. ಮನೆಯಲ್ಲಿ ಓದಲು ಬಲ್ಲವರು ಎಷ್ಟು?
23. ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆಯೇ?
24. ಶಾಲೆಯ ಪ್ರಕಾರ (ಸರ್ಕಾರಿ/ಖಾಸಗಿ)
25. ಮನೆಯಲ್ಲಿ ಶಾಲೆ ಬಿಟ್ಟವರು ಇದ್ದಾರೆಯೇ?
26. ಮನೆಯ ಮುಖ್ಯ ಉದ್ಯೋಗ
27. ಎಷ್ಟು ಜನರು ಉದ್ಯೋಗದಲ್ಲಿದ್ದಾರೆ?
28. ಕೆಲಸದ ಪ್ರಕಾರ (ಸರ್ಕಾರಿ/ಖಾಸಗಿ)
29. ನಿರುದ್ಯೋಗಿಗಳು ಇದ್ದಾರೆಯೇ?
30. ದಿನದ ಆದಾಯ
31. ತಿಂಗಳ ಆದಾಯ
32. ತಿಂಗಳ ಖರ್ಚು
33. ಸಾಲ ಇದೆಯೇ?
34. BPL ಕಾರ್ಡ್ ಇದೆಯೇ?
35. ಪಿಂಚಣಿ ಪಡೆಯುತ್ತೀರಾ?
36. ಒಟ್ಟು ಜಮೀನು
37. ಕೃಷಿ/ನಿವಾಸಿ ಜಮೀನು?
38. ಮನೆ ಸ್ವಂತದ್ದೇ/ಬಾಡಿಗೆ?
39. ಮನೆಯ ಪ್ರಕಾರ (ಕಚ್ಚಾ/ಪಕ್ಕಾ)
40. ವಿದ್ಯುತ್ ಸಂಪರ್ಕ ಇದೆಯೇ?
41. ಕುಡಿಯುವ ನೀರಿನ ಮೂಲ
42. ಶೌಚಾಲಯ ಇದೆಯೇ?
43. ಮನೆಯಲ್ಲಿ ಎಷ್ಟು ಕೊಠಡಿಗಳು?
44. ಇಂಟರ್ನೆಟ್/ಮೊಬೈಲ್ ಸೌಲಭ್ಯ ಇದೆಯೇ?
45. ವಾಹನ ಇದೆಯೇ (ಸೈಕಲ್/ಬೈಕ್/ಕಾರು/ಟ್ರಾಕ್ಟರ್)?
46. ರೇಷನ್ ಸಬ್ಸಿಡಿ ಸಿಗುತ್ತಿದೆಯೇ?
47. ವಸತಿ ಯೋಜನೆ ಲಾಭ ಪಡೆದಿದ್ದೀರಾ?
48. ವಿದ್ಯಾರ್ಥಿವೇತನ ಪಡೆದಿದ್ದೀರಾ?
49. ಮೀಸಲಾತಿ ಲಾಭ ಪಡೆದಿದ್ದೀರಾ?
50. ಆರೋಗ್ಯ ಯೋಜನೆ ಲಾಭ ಇದೆಯೇ?
51. ಮನೆಯಲ್ಲಿ ಯಾರಾದರು ವಿಧವೆ ಇದ್ದಾರೆಯೇ?
52. ಅಂಗವಿಕಲರು ಇದ್ದಾರೆಯೇ?
53. ಹಿರಿಯ ನಾಗರಿಕರು (60+) ಇದ್ದಾರೆಯೇ?
54. ಆರು ವರ್ಷದೊಳಗಿನ ಮಕ್ಕಳು ಎಷ್ಟು?
55. ಯುವಕರು (18-35) ಎಷ್ಟು?
56. ಯಾವುದೇ ಸಾಮಾಜಿಕ ಸಂಘ/ಸಂಸ್ಥೆಯಲ್ಲಿ ಸೇರಿದ್ದೀರಾ?
57. ಮನೆಯಲ್ಲಿ ನೋಂದಾಯಿತ ಮತದಾರರು ಎಷ್ಟು?
58. ಮತದಾನ ಮಾಡುವವರೇ?
59. ಜಾತಿ ಆಧಾರದ ಮೇಲೆ ಬೇಧಭಾವ ಅನುಭವಿಸಿದ್ದೀರಾ?
60. ಜಾತಿ ಸಮೀಕ್ಷೆಯಿಂದ ನಿಮಗೆ ಏನು ಪ್ರಯೋಜನ?

ಇದನ್ನೂ ಓದಿ:Bangalore: ಜನಾರ್ಧನ ರೆಡ್ಡಿ ವಿರುದ್ಧ ಸಸಿಕಾಂತ್‌ ಸೆಂಥಿಲ್‌ ಮಾನನಷ್ಟ ಮೊಕದ್ದಮೆ ದೂರು ವಿಚಾರಣೆಗೆ ಅಂಗೀಕಾರ

Comments are closed.