Bangalore: ಜನಾರ್ಧನ ರೆಡ್ಡಿ ವಿರುದ್ಧ ಸಸಿಕಾಂತ್ ಸೆಂಥಿಲ್ ಮಾನನಷ್ಟ ಮೊಕದ್ದಮೆ ದೂರು ವಿಚಾರಣೆಗೆ ಅಂಗೀಕಾರ

Bangalore: ಶಾಸಕ ಹಾಗೂ ಮಾಜಿ ಸಚಿವ ಜನಾರ್ಧನ ರೆಡ್ಡಿ ಅವರ ವಿರುದ್ಧ ಸಂಸದ ಸಸಿಕಾಂತ್ ಸೆಂಥಿಲ್ ಅವರು ದಾಖಲಿಸಿರುವ ಮಾನನಷ್ಟ ಮೊಕದ್ದಮೆ ದೂರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಚಾರಣೆಗೆ ಅಂಗೀಕಾರ ಮಾಡಿದೆ.

ಸೆ.29 ರಂದು ನ್ಯಾಯಾಲಯವು ದೂರಿನ ಕುರಿತು ಸಂಸದ ಸಸಿಕಾಂತ್ ಸೆಂಥಿಲ್ ಅವರ ಸ್ವಯಂ ಹೇಳಿಕೆ ದಾಖಲು ಮಾಡಲು ವಿಚಾರಣೆ ನಿಗದಿಪಡಿಸಿದೆ. ಧರ್ಮಸ್ಥಲ ಸಾಮೂಹಿಕ ಮೃತದೇಹಗಳ ಅಂತ್ಯಸಂಸ್ಕಾರ, ಬುರುಡೆ ಸಾಕ್ಷ್ಯ ಪ್ರಕರಣದಲ್ಲಿ ಸಂಸದ ಸಸಿಕಾಂತ್ ಸೆಂಥಿಲ್ ಮಾಸ್ಟರ್ ಮೈಂಡ್ ಎಂದು ಜನಾರ್ಧನ ರೆಡ್ಡಿ ಅವರು ಆರೋಪ ಮಾಡಿದ್ದು, ಈ ಕಾರಣದಿಂದ ಜನಾರ್ದನ ರೆಡ್ಡಿ ಅವರ ವಿರುದ್ಧ ಕಾನೂನು ಸಮರಕ್ಕೆ ಸಸಿಕಾಂತ್ ಸೆಂಥಿಲ್ ಅವರು ಮುಂದಾಗಿದ್ದರು.
ಸೆ.6 ರಂದು ಜನಾರ್ಧನ ರೆಡ್ಡಿ ವಿರುದ್ಧ ಮಾನನಷ್ಟ ಮೊಕದ್ದಮೆ ಖಾಸಗಿ ದೂರು ದಾಖಲು ಮಾಡಿದ್ದರು. ಇದೀಗ ನ್ಯಾಯಾಲಯವು ದೂರಿನ ಕುರಿತು ಸ್ವಯಂ ಹೇಳಿಕೆ ದಾಖಲಿಸಲು ವಿಚಾರಣೆಗೆ ಸೆ.29 ರಂದು ದಿನಾಂಕ ನಿಗದಿ ಪಡಿಸಿದೆ.
Comments are closed.