Tripureswari Temple: ನವರಾತ್ರಿ ಮೊದಲ ದಿನ ತ್ರಿಪುರ ಸುಂದರಿ ದೇವಿ ದರ್ಶನ ಪಡೆದ ಮೋದಿ

Tripureswari Temple: ನವರಾತ್ರಿ (navarathri) ಉತ್ಸವದ ಮೊದಲ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು, ದೇಶದಲ್ಲಿರುವ 51 ಶಕ್ತಿಪೀಠಗಳಲ್ಲಿ ಒಂದಾಗಿರುವ ಗಡಿರಾಜ್ಯದ ತ್ರಿಪುರಾದ ಉದಯ್‌ಪುರದ ʻಮಾತಾ ತ್ರಿಪುರ ಸುಂದರಿʼ ಅಮ್ಮನವರ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ʻಮಾತಾ ತ್ರಿಪುರ ಸುಂದರಿʼ ge ವಿಶೇಷ ಪೂಜೆ ಸಲ್ಲಿಸಿದರು. ನಂತರ ಗೋಮತಿ ಜಿಲ್ಲೆಯ ಉದಯಪುರ ಪಟ್ಟಣದಲ್ಲಿ ಜೀರ್ಣೋದ್ಧಾರಗೊಂಡಿರುವ ತ್ರಿಪುರೇಶ್ವರಿ ದೇಗುಲದ (Tripura Sundari Temple) ಉದ್ಘಾಟನೆ ನೆರವೇರಿಸಿದರು.
ಇದನ್ನೂ ಓದಿ;Tech Tips: ವಾಟ್ಸಾಪ್ ನಲ್ಲಿ ಹೊಸ ವಿಡಿಯೋ ನೋಟ್ಸ್ ಫೀಚರ್ ಬಳಸುವುದು ಹೇಗೆ?
ಮಹಾರಾಜ ಧನ್ಯ ಮಾಣಿಕ್ಯ 1,501ರಲ್ಲಿ ಈ ದೇಗುಲ ನಿರ್ಮಿಸಿದ್ದರು. ತೀರ್ಥಕ್ಷೇತ್ರ ಪುನರುಜ್ಜಿವನ ಮತ್ತು ಅಧ್ಯಾತ್ಮ ವಿಸ್ತರಣಾ ಅಭಿಯಾನ (PRASAD) ಅಡಿಯಲ್ಲಿ 52 ಕೋಟಿ ರೂ. ವೆಚ್ಚದಲ್ಲಿ ಈ ದೇಗುಲ ಜೀರ್ಣೋದ್ಧಾರಗೊಂಡಿದ್ದು, ಪ್ರಧಾನಿ ಮೋದಿ ಉದ್ಘಾಟಿಸಿದ್ದಾರೆ.
Comments are closed.