Bigg Boss: ಪ್ರತಿ ವರ್ಷ ‘ಬಿಗ್ ಬಾಸ್’ ಮನೆ ನಿರ್ಮಾಣಕ್ಕೆ ಬೇಕಾಗುವ ಹಣ ಎಷ್ಟು?

Share the Article

Bigg Boss: ರಿಯಾಲಿಟಿ ಶೋ ಗಳಲ್ಲಿ ‘ಬಿಗ್ ಬಾಸ್’ ಶೋ ಅಂದರೆ ಒಂದು ರೀತಿಯ ಕುತೂಹಲ. ಬಿಗ್ ಬಾಸ್ ಶೋ ನಲ್ಲಿ ಇಂಚು ಇಂಚುವಿನಲ್ಲೂ ಒಂದು ತರ ಥ್ರಿಲ್ ಇರುತ್ತೆ. ಇನ್ನು ಪ್ರತಿ ಬಾರಿ ಬಿಗ್ ಬಾಸ್ ಮನೆಯನ್ನು ನಿರ್ಮಿಸಲು ಎಷ್ಟು ವೆಚ್ಚವಾಗುತ್ತದೆ ನಿಮಗೆ ಯೋಚನೆ ಬಂದಿದ್ದರೆ ಇಲ್ಲಿದೆ ಉತ್ತರ.

ಬಿಗ್ ಬಾಸ್‌ನ ಪ್ರತಿ ಸೀಸನ್‌ನಲ್ಲಿ ಮನೆ ಕಟ್ಟಲು ಎಷ್ಟು ವೆಚ್ಚವಾಗುತ್ತದೆ ಎಂಬುದನ್ನು ಎಲ್ಲಿಯೂ ರಿವೀಲ್ ಮಾಡಿಲ್ಲ ಆದರೆ ಪ್ರತಿ ಸೀಸನ್‌ನಲ್ಲಿ ಅದಕ್ಕಾಗಿ ಕೋಟ್ಯಂತರ ಮೊತ್ತ ಖರ್ಚು ಮಾಡಲಾಗುತ್ತೆ ಎಂದು ಅಂದಾಜಿಸಲಾಗಿದೆ.

ಮಾಧ್ಯಮ ವರದಿಗಳ ಪ್ರಕಾರ, ಬಿಗ್ ಬಾಸ್ (bigg boss) ಮನೆಯನ್ನು ಕೆಡವಿ ಪುನರ್ನಿರ್ಮಿಸಲು ಸುಮಾರು 3.5 ಕೋಟಿ ರೂ. ವೆಚ್ಚ ಆಗುತ್ತದೆ. ಇದರಲ್ಲಿ ಮನೆಯ ವಿನ್ಯಾಸ, ಸೆಟ್‌ನಲ್ಲಿನ ಬದಲಾವಣೆಗಳು, ಭದ್ರತೆ ಮತ್ತು ಕಾರ್ಯಕ್ರಮಕ್ಕೆ ಅಗತ್ಯವಿರುವ ಸಹಾಯಕ ಸಿಬ್ಬಂದಿ ಕೂಡ ಸೇರಿದ್ದಾರೆ. ಮನೆ ಕಟ್ಟಲು ಸುಮಾರು 600 ಕಾರ್ಮಿಕರು ಆರು ತಿಂಗಳ ಕಾಲ ಕೆಲಸ ಮಾಡುತ್ತಾರೆ. ಯಾಕೆಂದರೆ ಥೀಮ್‌ಗೆ ಅನುಗುಣವಾಗಿ ಮನೆಯನ್ನು ಬದಲಾಯಿಸಲಾಗುತ್ತದೆ.

ಮನೆ ಕಟ್ಟುವ ವೆಚ್ಚವು ಪ್ರತಿ ವರ್ಷವೂ ಬದಲಾಗುತ್ತದೆ. ಏಕೆಂದರೆ ಶೋ ಥೀಮ್ ಪ್ರತಿ ಸೀಸಸನ್​ನಲ್ಲಿ ಬೇರೆಯೇ ಆಗಿರುತ್ತೆ. ಅದಕ್ಕೆ ಅನುಗುಣವಾಗಿ, ಮನೆಯ ಲುಕ್ ಬದಲಾಗುತ್ತದೆ. ಕಲಾ ನಿರ್ದೇಶಕರು ಒಳಾಂಗಣವನ್ನು ಅಲಂಕರಿಸಲು ಬಹಳಷ್ಟು ಹಣವನ್ನು ಖರ್ಚು ಮಾಡಲಾಗುತ್ತದೆ.

ಇನ್ನು ಬಿಗ್ ಬಾಸ್ ಮನೆಯಲ್ಲಿ ಅಳವಡಿಸಲಾದ ಕ್ಯಾಮೆರಾಗಳನ್ನು ಬಾಡಿಗೆಗೆ ಪಡೆಯಲಾಗುತ್ತದೆ. ಅಡುಗೆಮನೆಯ ವಸ್ತುಗಳನ್ನು ಅಂದರೆ ರೆಫ್ರಿಜರೇಟರ್‌ಗಳು, ಓವನ್‌ಗಳು, ಗ್ಯಾಸ್ ಸ್ಟೌವ್‌ಗಳು ಮತ್ತು ಪಾತ್ರೆಗಳು ಮುಂತಾದವನ್ನು ಗೋದಾಮಿಗೆ ಕಳಿಸಲಾಗುತ್ತೆ.

ಇದನ್ನೂ ಓದಿ:Charana: ಕುಕ್ಕೆ ಸುಬ್ರಹ್ಮಣ್ಯ: ಕುಮಾರ ಪರ್ವತ ಚಾರಣ ಆರಂಭ

ಇನ್ನು ಬಿಗ್ ಬಾಸ್​ನ ಬೆಡ್, ಹಾಸಿಗೆಗಳು ಪ್ರತಿ ಸೀಸನ್​ನಲ್ಲೂ ಬದಲಾಗುತ್ತವೆ. ಹೊಸ ಬೆಡ್ ನಿರ್ಮಾಣ ಮಾಡಲು ಕುಶಲಕರ್ಮಿಗಳು ಸೆಟ್​ಗೆ ಬರುತ್ತಾರೆ. ಮುಖ್ಯವಾಗಿ ಗುಣಮಟ್ಟ ಮತ್ತು ನೈರ್ಮಲ್ಯದ ಕಾರಣಗಳಿಗಾಗಿ, ಹಿಂದಿನ ಸೀಸನ್ ವಸ್ತುಗಳನ್ನು ಮರುಬಳಕೆ ಮಾಡಲಾಗುವುದಿಲ್ಲ.

Comments are closed.