Home News Karantaka Domestic Workers Bill: ಮನೆ ಕೆಲಸಕ್ಕೆ ಜನ ಮಾಡಲು ಇನ್ನು ಮುಂದೆ ಪಾವತಿಸಬೇಕು ಶೇ.5...

Karantaka Domestic Workers Bill: ಮನೆ ಕೆಲಸಕ್ಕೆ ಜನ ಮಾಡಲು ಇನ್ನು ಮುಂದೆ ಪಾವತಿಸಬೇಕು ಶೇ.5 ಶುಲ್ಕ: ಹೊಸ ಕಾನೂನು

Hindu neighbor gifts plot of land

Hindu neighbour gifts land to Muslim journalist

Karnataka: ಗೃಹ ಕಾರ್ಮಿಕರ ಹಿತದೃಷ್ಟಿಯ ನಿಟ್ಟಿನಲ್ಲಿ ಮಹತ್ವದ ಕ್ರಮಕ್ಕೆ ರಾಜ್ಯ ಸರಕಾರ ಮುಂದಾಗಿದೆ. ಮನೆ ಕೆಲಸಗಳಿಗೆ ಸೇರುವ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಸಂಘಟನೆ ಖಾತರಿ ಪಡಿಸುವ ಉದ್ದೇಶದಿಂದ ಉದ್ಯೋಗದಾತರಿಗೆ ಶೇ.5 ರ ಕಲ್ಯಾಣ ಶುಲ್ಕ ವಿಧಿಸುವ ಗೃಹ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಮಸೂದೆ ರೂಪಿಸಲು ಕರ್ನಾಟಕ ಸರಕಾರ ಮುಂದಾಗಿದೆ ಎಂದು ಟಿವಿ9 ವರದಿ ಮಾಡಿದೆ.

ಕನಿಷ್ಠ ವೇತನ ಮತ್ತು ಸಾಮಾಜಿಕ ಭದ್ರತೆಯಂತಹ ಪ್ರಮುಖ ಭದ್ರತೆಗಳನ್ನು ಒದಗಿಸುವುದೇ ಇದರ ಮುಖ್ಯ ಉದ್ದೇಶ. ಈ ಮಸೂದೆ ಜಾರಿಗೆ ಬಂದರೆ ಮನೆಗಳಲ್ಲಿ ಕೆಲಸ ಮಾಡುವವರು, ಸೇವಕಿಯರು, ಅಡುಗೆಯವರು, ಚಾಲಕರು, ದಾದಿಯರು ಮತ್ತು ಇತರರು ಸರಕಾರಕ್ಕೆ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ಮನೆ ಕೆಲಸಕ್ಕೆ ಜನ ನೇಮಿಸುವವರು, ಮಸೂದೆಯ ಅಧೀನದಲ್ಲಿ ಸ್ಥಾಪಿಸಲಾಗುವ ಕಲ್ಯಾಣ ನಿಧಿಗೆ ವೇತನದ ಶೇ.5 ರಷ್ಟನ್ನು ಪಾವತಿ ಮಾಡಬೇಕಾಗುತ್ತದೆ.

ಗೃಹ ಕಾರ್ಮಿಕರ ಹಕ್ಕುಗಳನ್ನು ರಕ್ಷಣೆ ಮಾಡಲು ಒಂದು ಚೌಕಟ್ಟು ಇದಾಗಿದೆ ಎಂದು ವರದಿಯಾಗಿದೆ. ಅದರಲ್ಲೂ ಮುಖ್ಯವಾಗಿ ಮಹಿಳಾ ಕಾರ್ಮಿಕರ ಹಿತವನ್ನು ಗಮನದಲ್ಲಿಟ್ಟುಕೊಳ್ಳಲಾಗಿದೆ. ಗೃಹ ಕೆಲಸಗಾರರ ನೋಂದಣಿಗೆ ಆರಂಭ ಮಾಡಲಾಗುವ ವೆಬ್‌ಸೈಟ್‌ನಲ್ಲಿ ಕೆಲಸಕ್ಕೆ ಸೇರಿದ 30 ದಿನಗಳ ಒಳಗೆ ನೋಂದಣಿ ಮಾಡಬೇಕಾಗುತ್ತದೆ. ಜೊತೆ ಇದು ಕಡ್ಡಾಯವಾಗಿರಲಿದೆ.

ಇದನ್ನೂ ಓದಿ:Dowry Dispute: ವರದಕ್ಷಿಣೆ ಕಿರುಕುಳ: ಸೊಸೆಯನ್ನು ಕೋಣೆಯಲ್ಲಿ ಕೂಡಿ ಹಾಕಿ ಹಾವು ಬಿಟ್ಟ ಅತ್ತೆ-ಮಾವ

ಕನಿಷ್ಠ ವೇತನ, ಓವರ್‌ಟೈಂ ಡ್ಯೂಟಿ ವೇತನ, ಮಾತೃತ್ವ ಸೌಲಭ್ಯಗಳು, ಸಾಪ್ತಾಹಿಕ ರಜಾ ದಿನಗಳು, ವೈದ್ಯಕೀಯ ಮರುಪಾವತಿ, ಶಿಕ್ಷಣ ಬೆಂಬಲ ಮತ್ತು ಕೆಲಸದ ಸ್ಥಳದಲ್ಲಿ ಗಾಯಗೊಂಡರೆ ಪರಿಹಾರವನ್ನು ಪಡೆಯಲು ನೋಂದಾಯಿತ ಗೃಹ ಕಾರ್ಮಿಕರು ಅರ್ಹರಾಗಿರುತ್ತಾರೆ.