ಜನಗಣತಿ ಸಮೀಕ್ಷೆಯಲ್ಲಿ ಧರ್ಮದ ಕಾಲಮ್‌ನಲ್ಲಿ ಹಿಂದೂ ಎಂದು ಬರೆಯಿಸಬೇಡಿ- ಜೈನ ಅಸೋಸಿಯೇಷನ್ ಕರೆ

Bengaluru : ಮುಂಬರುವ ‘ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯ ವೇಳೆ ಜೈನರು ಧರ್ಮದ ಕಾಲಂನಲ್ಲಿ ‘ಹಿಂದೂ’ ಎಂದು ಬರೆಯಿಸಬಾರದು. ಬದಲಿಗೆ ‘ಜೈನ’ ಎಂದೇ ಬರೆಯಿಸಬೇಕು’ ಎಂದು ಕರ್ನಾಟಕ ಜೈನ ಅಸೋಸಿಯೇಷನ್ ಕರೆ ನೀಡಿದೆ.

‘ಸಮೀಕ್ಷೆ ವೇಳೆ ಸಮುದಾಯದ ಎಲ್ಲರೂ ಧರ್ಮದ ಕಾಲಂನಲ್ಲಿ ‘ಜೈನ’, ಜಾತಿಯ ಕಾಲಂನಲ್ಲಿ ‘ಜೈನ’, ಉಪಜಾತಿಯ ಕಾಲಂನಲ್ಲಿ ‘ಜೈನ ದಿಗಂಬರ’ ಅಥವಾ ಇನ್ನಿತರ 32 ಉಪಜಾತಿಗಳನ್ನು ಬರೆಯಿಸಬೇಕು’ ಎಂದು ಈ ಸಂಘಟನೆ ಕೋರಿಕೊಂಡಿದೆ. ‘ಜೈನ ಎಂದೇ ಬರೆಯಿಸುವುದರಿಂದ ರಾಜ್ಯದಲ್ಲಿರುವ ಸಮುದಾಯದ ಜನರ ಸಂಖ್ಯೆ ನಿಖರವಾಗಿ ಗೊತ್ತಾಗಲಿದೆ’ ಎಂದು ಜೈನ ಅಸೋಸಿಯೇಷನ್ ಅಧ್ಯಕ್ಷ ಎಸ್. ಜಿತೇಂದ್ರ ಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಚಾರ್ಮಾಡಿ ಘಾಟ್‌ನಲ್ಲಿ ರಾತ್ರಿ ಸಂಚಾರ ನಿರ್ಬಂಧ: ಹೊಸ ನಿಯಮ ಜಾರಿ, ಒಟ್ಟೊಟ್ಟಿಗೆ 5 ವಾಹನ ಮಾತ್ರ ಸಾಗಾಟ
Comments are closed.