ಚಾರ್ಮಾಡಿ ಘಾಟ್‌ನಲ್ಲಿ ರಾತ್ರಿ ಸಂಚಾರ ನಿರ್ಬಂಧ: ಹೊಸ ನಿಯಮ ಜಾರಿ, ಒಟ್ಟೊಟ್ಟಿಗೆ 5 ವಾಹನ ಮಾತ್ರ ಸಾಗಾಟ

Share the Article

Belthangady: ಬೆಂಗಳೂರು-ಮಂಗಳೂರು ಹೆದ್ದಾರಿಯಾದ ಚಾರ್ಮಾಡಿ ಘಾಟ್ ವಿಭಾಗದ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯನ್ನು ರಾತ್ರಿ ವೇಳೆ ಪ್ರವೇಶಿಸುವ ವಾಹನಗಳಿಗೆ ಹೊಸ ಸಂಚಾರ ನಿಯಮ ತರಲಾಗಿದೆ.

ಇದೀಗ ಇರುವ ಹೊಸ ನಿಯಮದ ಪ್ರಕಾರ, ರಾತ್ರಿ ಪ್ರಯಾಣಿಸುವ ವಾಹನಗಳನ್ನು ಇನ್ನು ಮುಂದೆ ಪ್ರತ್ಯೇಕವಾಗಿ ಅಥವಾ ಜೋಡಿಯಾಗಿ ಸಾಗಲು ಬಿಡುವುದಿಲ್ಲ. ಕನಿಷ್ಠ ಐದು ವಾಹನಗಳನ್ನು ಒಟ್ಟಾಗಿ ಗುಂಪಾಗಿ ಸಂಚರಿಸಲು ಅನುಮತಿ ನೀಡಲಾಗುತ್ತದೆ.

ಈ ದಾರಿಯಲ್ಲಿ ರಾತ್ರಿ ಸಮಯದಲ್ಲಿ ಎಲ್ಲಾ ವಾಹನಗಳನ್ನು ಕೊಟ್ಟಿಗೆಹಾರ ಚೆಕ್‌ಪೋಸ್ಟ್‌ನಲ್ಲಿ ಕಡ್ಡಾಯವಾಗಿ ಪರಿಶೀಲಿಸಲಾಗುತ್ತದೆ. 5 ವಾಹನಗಳ ಗುಂಪು ರಚನೆಯಾದ ನಂತರವಷ್ಟೇ ಆ ವಾಹನಗಳ.ಗುಂಪನ್ನು ಮುಂದೆ ಸಾಗಲು ಬಿಡಲಾಗುತ್ತದೆ. ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ಜಾನುವಾರು ಕಳ್ಳತನ ಮತ್ತಿತರ ಅಪರಾಧ ಚಟುವಟಿಕೆಗಳ ಬಗ್ಗೆ ದೂರು ಹೆಚ್ಚಿದ ಹಿನ್ನೆಲೆಯಲ್ಲಿ ಈ ನಿಯಮ ಜಾರಿಗೆ ತರಲಾಗಿದೆ ಎನ್ನಲಾಗಿದೆ.

ಕೊಟ್ಟಿಗೆಹಾರ ಚೆಕ್‌ಪೋಸ್ಟ್ ಮೂಲಕ ಹಾದುಹೋಗುವ ಎಲ್ಲಾ ವಾಹನಗಳ ವಿವರಗಳನ್ನು ಸಿಸಿಟಿವಿಯಲ್ಲಿ ದಾಖಲಿಸಿ ಪೊಲೀಸ್‌ ದಾಖಲೆಗಳಲ್ಲಿ ನಮೂದಿಸಲಾಗುವುದು

ಇಲ್ಲಿ ರಾತ್ರಿ ವೇಳೆ ಪಿಎಸ್‌ಐ ನೇತೃತ್ವದ ಪೊಲೀಸ್ ತಂಡವನ್ನು ನಿಯೋಜನೆ ಮಾಡಲಾಗುವುದು. ಚೆಕ್‌ಪೋಸ್ಟ್‌ನಿಂದ 1.5 ಕಿ.ಮೀ ದೂರದ ಮಣ್ಣಿನ ರಸ್ತೆಯ ಮೂಲಕ ಜಾನುವಾರು ಕಳ್ಳರು ಸಾಗುತ್ತಿದ್ದು ಈ ಬಗ್ಗೆ, ಸ್ಥಳೀಯರೊಂದಿಗೆ ಸಮಾಲೋಚಿಸಿ, ಅಧಿಕಾರಿಗಳು ಈ ರಸ್ತೆಯಲ್ಲಿ ಗೇಟ್ ಹಾಕಿ ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ಮುಚ್ಚಲಾಗುವುದು ಎಂದಿದ್ದಾರೆ. ಈ ಮಾರ್ಗವು ಆಗಾಗ್ಗೆ ಎದುರಾಗುವ ದಟ್ಟವಾದ ಮಂಜು, ಕಾಡಾನೆಗಳು ಮತ್ತು ಇತರ ಪ್ರಾಣಿಗಳ ಓಡಾಟ, ಮರ ಬಿದ್ದು ಸಂಚಾರಕ್ಕೆ ಅಡ್ಡಿ, ಅಪಘಾತಗಳು ಮತ್ತು ನೆಟ್‌ವರ್ಕ್ ಇಲ್ಲದಿರುವಂತಹ ಸವಾಲುಗಳನ್ನು ಎದುರಿಸುತ್ತಿದ್ದು, ಹೊಸ ಸಂಚಾರ ನಿಯಮಾವಳಿ ರಸ್ತೆಯ ಸುರಕ್ಷತೆಯನ್ನು ಸುಧಾರಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ;ಟ್ರಂಪ್ ಗೆNobel Prize: ನನಗೆ ‘ನೊಬೆಲ್ ಶಾಂತಿ’ ಪ್ರಶಸ್ತಿ ಬರಲೇಬೇಕು: ಡೊನಾಲ್ಡ್ ಟ್ರಂಪ್ ರದ್ದು ಒಂದೇ ರಚ್ಚೆ!

Comments are closed.