ಮಂಡೋದರಿ ಪಾತ್ರಕ್ಕೆ ನಟಿ ಪೂನಂ ಪಾಂಡೆ ವಿಚಾರ; ಪುರಾಣದ ಪಂಚ ಪತಿವೃತೆಯರು ಯಾರು?

ಮಂಡೋದರಿ ಪಾತ್ರಕ್ಕೆ ನಗ್ನ ನಟಿ ಪೂನಂ ಪಾಂಡೆ ಆಯ್ಕೆಯಾಗಿದ್ದಾರೆ ಈ ಆಯ್ಕೆಯ ಬಗ್ಗೆ ವಿಶ್ವ ಹಿಂದೂ ಪರಿಷತ್ ತನ್ನ ವಿರೋಧವನ್ನು ವ್ಯಕ್ತಪಡಿಸಿದೆ. ತುಂಡುಡುಗೆ ತೊಟ್ಟು, ಒಂದಿಲ್ಲೊಂದು ವಿವಾದದಲ್ಲೇ ಇರುವ ನಟಿಗೆ ಪೌರಾಣಿಕ ಪಾತ್ರ ನೀಡುವುದು ಸರಿಯಲ್ಲ. ಮಂಡೋದರಿ ಎಂಬ ಸ್ತ್ರೀಯು ಸದ್ಗುಣ, ಘನತೆ, ಸಂಯಮದ ಪ್ರತೀಕ. ರಾಮಾಯಣ ಕೇವಲ ನಾಟಕವಲ್ಲ. ಅದು ನಮ್ಮ ಸಂಸ್ಕೃತಿ ಎಂದು ವಿಎಚ್‌ಪಿ ಹೇಳಿದೆ. ಈ ಸಂದರ್ಭದಲ್ಲಿ ಪುರಾಣ ಕಾಲದ ಪಂಚ ಪತಿವ್ರತೆಯರು ಯಾರು ಎನ್ನುವ ಬಗ್ಗೆ ಒಂದು ಸಣ್ಣ ಮಾಹಿತಿ ಇಲ್ಲಿದೆ.

ಅಹಲ್ಯಾ ದ್ರೌಪದಿ ಸೀತಾ ತಾರಾ ಮಂಡೋದರೀ ತಥಾ
ಪಂಚಕನ್ಯಾ ಸ್ಮರೇನಿತ್ಯಂ ಮಹಾಪಾತಕ ನಾಶನಂ ಅನ್ನುತ್ತದೆ ಒಂದು ಸುಭಾಷಿತ.
ಈ 5 ಜನ ಪಂಚ ಪತಿವ್ರತೆಯರು ಎನ್ನುತ್ತದೆ ಪುರಾಣ ಗ್ರಂಥಗಳು. ರಾಮಾಯಣ ಮತ್ತು ಮಹಾಭಾರತದ ಪುರಾಣಗಳಲ್ಲಿ ಐದು ಪತಿವ್ರತೆಯರ ಉಲ್ಲೇಖವಿದೆ: ಸೀತೆ, ದ್ರೌಪದಿ, ಮಂಡೋದರಿ, ತಾರಾ, ಮತ್ತು ಅಹಲ್ಯಾ. ಇವರು ತಮ್ಮ ಪತಿವ್ರತಾ ಧರ್ಮ, ನೈತಿಕತೆ ಮತ್ತು ಪತಿವ್ರತೆಯನ್ನು ಕಾಪಾಡಿಕೊಂಡ ಇತಿಹಾಸದ ಮತ್ತು ಪುರಾಣದ ಮಹಾ ಮಹಿಳೆಯರು. ಪುರಾಣದಲ್ಲಿ ಈ ನಾಲ್ಕು ಐದು ಜನ ಮಾತ್ರ ಪತಿವ್ರತೆಯರಾಗಿದ್ದರ? ಉಳಿದವರು ಆಗಿರಲಿಲ್ಲವೇ ಎನ್ನುವ ಪ್ರಶ್ನೆ ಇಲ್ಲಿ ಅನಗತ್ಯ. ಘಟಿಸಿ ಹೋದ ಕಾಲದಿಂದ ಹಿಡಿದು, ಅಂದಿನಿಂದ ಇಂದಿನ ತನಕ ಕೋಟ್ಯಂತರ ಮಹಿಳೆಯರು ಪತಿವ್ರತೆಯರಾಗಿ ಬಾಳಿದ್ದಾರೆ, ಬಾಳುತ್ತಿದ್ದಾರೆ.
ಪುರಾಣದ ಆ ಪಂಚ ಪತಿವ್ರತೆಯರು ಯಾರು?
ಅಹಲ್ಯಾ: ಗೌತಮ ಋಷಿಗಳ ಪತ್ನಿಯಾಗಿದ್ದ ಮಹಿಳೆ ಅಹಲ್ಯಾ. ಇಂದ್ರನ ಕೆಟ್ಟ ವಂಚನೆಗೆ ಆಕೆ ಬಲಿಯಾಗಿದ್ದರೂ ಕೂಡ, ತನ್ನ ಪತಿವ್ರತೆಯನ್ನು ಉಳಿಸಿಕೊಂಡ ಮಹಿಳೆ ಎಂದು ಕರೆಯಲಾಗುತ್ತದೆ.
ದ್ರೌಪದಿ: ಮಹಾಭಾರತದಲ್ಲಿ ಪಂಚ ಪಾಂಡವರ ಪತ್ನಿಯಾಗಿದ್ದ ದ್ರೌಪದಿಯನ್ನು ಕೂಡ ಪಂಚ ಪತಿವ್ರತೆಯಲ್ಲಿ ಒಬ್ಬರು ಎನ್ನಲಾಗುತ್ತದೆ. ಆಕೆ ತನ್ನ ಐದೂ ಜನ ಗಂಡಂದಿರಿಗೆ ಸಮಾನವಾಗಿ ಪ್ರೀತಿ ಮತ್ತು ನಿಷ್ಠೆಯನ್ನು ಹಂಚಿದ ಹೆಂಡತಿ ಎಂಬ ಕೀರ್ತಿ ಆಕೆಗೆ ಸಲ್ಲುತ್ತದೆ.
ಸೀತೆ: ರಾಮಾಯಣದ ನಾಯಕಿಯಾದ, ಕೇಂದ್ರ ಪಾತ್ರವಾದ ಸೀತೆ, ಅಯೋಧ್ಯೆಯ ರಾಜ ಶ್ರೀರಾಮನ ಧರ್ಮ ಪತ್ನಿ. ತನ್ನ ಗಂಡನಿಗೆ ನಿಷ್ಠೆಯಾಗಿದ್ದ ಜತೆಗೆ ತನ್ನ ಧರ್ಮವನ್ನು ಅನುಸರಿಸಿದ ಮಹಾನ್ ಪತಿವ್ರತೆ ಎಂದು ಸೀತೆಯನ್ನು ಕರೆಯಲಾಗುತ್ತದೆ.
ತಾರಾ: ವಾನರ ರಾಜನಾಗಿದ್ದ ಸುಗ್ರೀವನ ಪತ್ನಿಯಾದ ತಾರಾ ಕೂಡಾ ಪಂಚ ಪತಿವ್ರತೆ ಪಟ್ಟಕ್ಕೆ ಆಯ್ಕೆ ಆಗಿದವಳು.ಆಕೆ ತೀರಾ ಬುದ್ಧಿವಂತ ಮತ್ತು ಚಾಣಾಕ್ಷ ಮಹಿಳೆ, ಜತೆಗೆ
ಮಂಡೋದರಿ: ರಾವಣನ ಪತ್ನಿಯಾದ ಮಂಡೋದರಿ, ತನ್ನ ಗಂಡನ ತಪ್ಪುಗಳನ್ನು ಯಾವುದೇ ಭಯ ಆತಂಕ ಇಲ್ಲದೆ ಎತ್ತಿ ತೋರಿಸಿದವಳು ಮತ್ತು ಸೀತೆಯನ್ನು ರಾಮನಿಗೆ ಹಿಂದಿರುಗಿಸಲು ಸಲಹೆ ನೀಡಿದವಳು. ಆಕೆಯ ಪತಿ ನಿಷ್ಠೆ ಮತ್ತು ಇತರ ಹಲವಾರು ಸದ್ಗುಣಗಳಿಂದ ಆಕೆ ಪಂಚ ಪತಿವ್ರತೆಯಯರಲ್ಲಿ ಒಬ್ಬಳಾಗಿದ್ದಾಳೆ.
ಇದನ್ನೂ ಓದಿ:SIT: ಆಳಂದ ಫೈಲ್ಸ್ ಸೇರಿ ರಾಜ್ಯದ ಮತಗಳ್ಳತನ ಸೇರಿ ರಾಜ್ಯದ ಮತಗಳ್ಳತನ ಪ್ರಕರಣಗಳ ತನಿಖೆಗೆ SIT ರಚನೆ
ಪತಿವ್ರತೆಯರ ಮಹತ್ವ
ಪಂಚ ಪತಿವ್ರತೆಯರ ಕಥೆಗಳು ನಮ್ಮ ಸ್ತೀಯರಲ್ಲಿ ಸ್ತ್ರೀತ್ವ, ಧರ್ಮ ಮತ್ತು ಗಂಡನ ಮತ್ತು ಕುಟುಂಬದ ಕಡೆಗೆ ನಿಷ್ಠೆಯನ್ನು ಸೂಚಿಸುತ್ತದೆ. ತನ್ನ ಗಂಡನಿಗೆ ನಿಯತ್ತಾಗಿ ಇರುವುದು ಮಾತ್ರವಲ್ಲ, ತಮ್ಮ ನೈತಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಕಾಪಾಡಿಕೊಳ್ಳುವುದು, ಬರುವ ಎಲ್ಲಾ ಕಷ್ಟಗಳನ್ನು ಸಮರ್ಥವಾಗಿ ಎದುರಿಸಿ ಗಟ್ಟಿಯಾಗಿ ನಿಂತ ಪುರಾಣಕಾಲದ ಗಟ್ಟಿಗಿತ್ತಿ ಮಹಿಳೆಯರಿವರು. ಅದಕ್ಕಾಗಿ ಅವರನ್ನು ಪಂಚ ಪತಿವ್ರತೆಯರು ಎನ್ನುತ್ತೇವೆ.
Comments are closed.