Gold Price : ಚಿನ್ನದ ದರದಲ್ಲಿ ಇಂದು 75 ರೂ ಹೆಚ್ಚಳ !! 10 ಗ್ರಾಂ ಗೆ ಎಷ್ಟಾಯ್ತು ಬೆಲೆ?

Gold Price : ದಸರಾ ಸಮೀಪಿಸುತ್ತಿರುವ ಹಿನ್ನೆಲೆ ಚಿನ್ನದ ಬೆಲೆ ದಿನೇ ದಿನೇ ಏರಿಕೆ ಕಾಣುತ್ತಿದೆ. ಈ ವಾರದ ಆರಂಭದಲ್ಲಿ ಚಿನ್ನ ಹಾಗೂ ಬೆಳ್ಳಿ ದರಗಳು ಇಳಿಕೆ ಕಂಡಿದ್ದವು. ಆದರೆ ಕಳೆದೆರಡು ದಿನಗಳಿಂದ ಚಿನ್ನ ಮತ್ತು ಬೆಳ್ಳಿಯ ದರ ಗಗನಕ್ಕೆ ಏರುತ್ತಿದೆ. ಇಂದು ಮತ್ತೆ ಚಿನ್ನದ ಬೆಲೆಯಲ್ಲಿ 75 ರೂ ಏರಿಕೆ ಕಂಡಿದೆ.

ಯಸ್, ಕಳೆದ ಎರಡು ದಿನಗಳಿಂದ ಏರುಗತಿಯಲ್ಲಿ ಸಾಗಿದ್ದ ಚಿನ್ನದ ದರ ಇಂದು ಮತ್ತಷ್ಟು ಹೆಚ್ಚಾಗಿದೆ.22 ಕ್ಯಾರೆಟ್ ಚಿನ್ನ ಪ್ರತಿ ಗ್ರಾಂಗೆ 75 ರೂ. ಏರಿಕೆಯಾಗಿ 10,280 ರೂ. ತಲುಪಿದೆ. ಇದರಂತೆ, 8 ಗ್ರಾಂಗೆ 82,240 ರೂ., 10 ಗ್ರಾಂಗೆ 1,02,800 ರೂ. ಮತ್ತು 100 ಗ್ರಾಂಗೆ 10,28,000 ರೂ. ಆಗಿದೆ.
24 ಕ್ಯಾರೆಟ್ ಚಿನ್ನದ ದರ (ಪ್ರತಿ ಗ್ರಾಂಗೆ)
1 ಗ್ರಾಂ: ₹11,215 (ನಿನ್ನೆ: ₹11,133, ಏರಿಕೆ: ₹82)
8 ಗ್ರಾಂ: ₹89,720 (ನಿನ್ನೆ: ₹89,064, ಏರಿಕೆ: ₹656)
10 ಗ್ರಾಂ: ₹1,12,150 (ನಿನ್ನೆ: ₹1,11,330, ಏರಿಕೆ: ₹820)
100 ಗ್ರಾಂ: ₹11,21,500 (ನಿನ್ನೆ: ₹11,13,300, ಏರಿಕೆ: ₹8,200)
ಒಟ್ಟಾರೆ ಅಖಿಲ ಭಾರತ ಸರಾಫಾ ಸಂಘದ ಪ್ರಕಾರ, 99.9 ಪ್ರತಿಶತ ಶುದ್ಧತೆಯ ಚಿನ್ನ ಗುರುವಾರ 10 ಗ್ರಾಂಗೆ 1,13,200 ರೂ.ಗಳಿಗೆ ಮುಕ್ತಾಯಗೊಂಡಿದೆ. ಇನ್ನು ಬೆಳ್ಳಿ ಬೆಲೆಯೂ ಸಹ 500 ರೂ.ಗಳಷ್ಟು ಏರಿಕೆಯಾಗಿ ಪ್ರತಿ ಕೆಜಿಗೆ 1,32,000 ರೂ.ಗಳಿಗೆ ತಲುಪಿದೆ (ಎಲ್ಲಾ ತೆರಿಗೆಗಳು ಸೇರಿದಂತೆ).
Comments are closed.