Bangalore: ಕೆಆರ್ ಪುರಂನ ಗೋಡೆಗಳ ಮೇಲೆ ಸಮುದಾಯ ಸಹಭಾಗಿತ್ವದ ಭಿತ್ತಿಚಿತ್ರದ ಚಿತ್ತಾರ

Bangalore: ಭಾರತದಲ್ಲಿ ಮಕ್ಕಳ ಶಿಕ್ಷಣ ಕ್ಷೇತ್ರದಲ್ಲಿ ಪರಿವರ್ತನೆ ತರಲು ಶ್ರಮಿಸುತ್ತಿರುವ ‘ಡ್ರೀಮ್ ಎ ಡ್ರೀಮ್’ ಸಂಸ್ಥೆಯು, ‘ಅರಾವನಿ ಆರ್ಟ್ ಪ್ರಾಜೆಕ್ಟ್’ (ತೃತೀಯ ಲಿಂಗಿಗಳು ಮತ್ತು ಮಹಿಳೆಯರ ನೇತೃತ್ವದ ಕಲಾ ಸಮೂಹ) ಸಹಯೋಗದೊಂದಿಗೆ, ಬೆಂಗಳೂರಿನ ಕೆ.ಆರ್. ಪುರಂನಲ್ಲಿ ಸಾರ್ವಜನಿಕ ಭಿತ್ತಿಚಿತ್ರವೊಂದನ್ನು ಅನಾವರಣಗೊಳಿಸಿದೆ.

ಬಸವನಪುರ ಮುಖ್ಯರಸ್ತೆಯಲ್ಲಿ ಅನಾವರಣಗೊಂಡಿರುವ ಈ ಕಲಾಕೃತಿಯು, ‘ಯಶಸ್ಸನ್ನು ಮರು ವ್ಯಾಖ್ಯಾನಿಸುವುದು’ (Redefining Success) ಎಂಬ ಅಭಿಯಾನದ ಭಾಗವಾಗಿದ್ದು, ಅಂಚಿನಲ್ಲಿರುವ ಸಮುದಾಯಗಳ ಯುವಜನರಿಗೆ ‘ಯಶಸ್ಸು’ ಎಂದರೆ ಏನು ಎಂಬುದನ್ನು ಅರಿಯಲು ನೆರವಾಗುತ್ತದೆ. ಸಮಾಜದಲ್ಲಿ ಬೇರೂರಿರುವ ‘ಯಶಸ್ಸು’ ಮತ್ತು ‘ವೈಫಲ್ಯ’ ಎಂಬ ಸಾಂಪ್ರದಾಯಿಕ ಕಥನಗಳನ್ನು ಪ್ರಶ್ನಿಸುವುದು ಈ ಅಭಿಯಾನದ ಮೂಲ ಉದ್ದೇಶವಾಗಿದೆ.
Comments are closed.