Udupi: ಉಡುಪಿ: ಉಕ್ಕಿನ ರೈಲ್ವೆ ಬ್ರಿಡ್ಜ್ ಉದ್ಘಾಟನೆಗೆ ಸಿದ್ಧ

Indrali Railway Overbridge: ಇಂದ್ರಾಳಿ ರೈಲ್ವೆ ಬ್ರಿಡ್ಜ್ ಉದ್ಘಾಟನೆಗೆ ಸಿದ್ಧಗೊಂಡಿದೆ. ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಉದ್ಘಾಟನೆ ಮಾಡಲಿದ್ದಾರೆ.

ಮಲ್ಪೆಯಿಂದ ಚಿತ್ರದುರ್ಗದ ಮೊಳಕಾಲ್ಮೂರು ನಡುವೆ ರಾಷ್ಟ್ರೀಯ ಹೆದ್ದಾರಿ 169 ಎ ನಿರ್ಮಾಣ ಆಗುತ್ತಿದೆ. ಉಡುಪಿಯ ಇಂದ್ರಾಳಿ ಬಳಿ ರೈಲ್ವೆ ಟ್ರ್ಯಾಕ್ ಹಾದು ಹೋಗುತ್ತದೆ. 10 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಬ್ರಿಡ್ಜ್, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೊಸ ಉಕ್ಕಿನ ಬ್ರಿಡ್ಜ್ ಅನ್ನು ಉದ್ಘಾಟನೆ ಮಾಡಲಿದ್ದಾರೆ.
ಹೊಸ ಬ್ರಿಡ್ಜ್ ನಿರ್ಮಾಣದೊಂದಿಗೆ ಅಪಘಾತ, ಒನ್ ವೇ, ಟ್ರಾಫಿಕ್ ಜಾಮ್, ಪಾದಚಾರಿಗಳ-ವಾಹನ ಸವಾರರ ಪರದಾಟಕ್ಕೆ ಪರಿಹಾರ ದೊರಕಿದಂತಾಗಿದೆ. ಉದ್ಘಾಟನೆ ಕುರಿತು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅವರು ಮಾಹಿತಿ ನೀಡಿದ್ದಾರೆ.
Photo Credit: Public TV
Comments are closed.