Viral Video: 6 ಪಾನಿಪುರಿ ಬದಲು 4 ಪಾನಿಪುರಿ ಕೊಟ್ಟರೆಂದು ರಸ್ತೆ ಮಧ್ಯೆ ಅಳುತ್ತಾ ಕೂತ ಮಹಿಳೆ, ಪೊಲೀಸರಿಂದ ಸಂಧಾನ

Share the Article

Viral Video: ಗುಜರಾತ್‌ನ ವಡೋದರಾದಲ್ಲಿ ಪಾನೀಪುರಿ ವಿಷಯಕ್ಕೆ ಸಂಬಂಧಪಟ್ಟಂತೆ ಒಂದು ವಿಚಿತ್ರ ಘಟನೆ ನಡೆದಿದೆ. ಸುರ್‌ಸಾಗರ್ ಸರೋವರದ ಬಳಿ ಈ ಘಟನೆ ನಡೆದಿದ್ದು, ಮಹಿಳೆಯೊಬ್ಬರು ರಸ್ತೆಯಲ್ಲಿ ಗಲಾಟೆ ಎಬ್ಬಿಸಿದರು. ಈ ಘಟನೆಯ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಮಹಿಳೆಯೊಬ್ಬಳು ಪಾನೀಪುರಿ ತಿನ್ನಲು ಬಂದಿದ್ದು, ಆಗ ಅಂಗಡಿಯವನು ಅವಳಿಗೆ 20 ರೂಪಾಯಿಗೆ 6 ಪಾನೀಪುರಿ ಎಂದು ಹೇಳಿದ್ದು, ಆದರೆ ತಿನ್ನುವ ಸಮಯ ಬಂದಾಗ, ಅವಳಿಗೆ ಕೇವಲ 4 ಪಾನೀಪುರಿ ಮಾತ್ರ ನೀಡಿದ್ದು, ಮಹಿಳೆ ಕೋಪಗೊಂಡು ರಸ್ತೆ ಮಧ್ಯೆ ಕುಳಿತಿದ್ದಾಳೆ. ಜನರು ಕಾರಣ ಕೇಳಿದಾಗ, ಅವಳು ಅಳಲು ಪ್ರಾರಂಭಿಸಿದಳು ಮತ್ತು ತನಗೆ ಪಾನೀಪುರಿ ತುಂಬಾ ಇಷ್ಟ ಎಂದು ಹೇಳಿದಳು, ಆದರೆ ಅಂಗಡಿಯವನು ನನಗೆ ಮೋಸ ಮಾಡಿದ್ದಾನೆ ಎಂದು ಆರೋಪ ಮಾಡಿದ್ದಾಳೆ.

ಪರಿಸ್ಥಿತಿ ಉಲ್ಬಣಗೊಳ್ಳುವುದನ್ನು ಗಮನಿಸಿದ ಜನರು 112 ಗೆ ಕರೆ ಮಾಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಿಳೆಯನ್ನು ಶಾಂತಗೊಳಿಸಲು ಪ್ರಯತ್ನಿಸಿದರು. ಆದರೆ ಆ ಮಹಿಳೆ ಅಳುತ್ತಾ, 20 ರೂಪಾಯಿಗೆ ಆರು ಪಾನೀಪುರಿ ಮಾತ್ರ ಸಿಗಬೇಕೆಂದು ಪದೇ ಪದೇ ಹೇಳಿದ್ದಾರೆ. ಕೊನೆಗೆ, ಸಾಕಷ್ಟು ಪ್ರಯತ್ನದ ನಂತರ, ಪೊಲೀಸರು ಅವಳನ್ನು ಶಾಂತಗೊಳಿಸಿ, ಅವರೇ ಪಾನಿಪುರಿ ತಿನ್ನಿಸಿದ್ದಾರೆ.

ಇದನ್ನೂ ಓದಿ:

ಈ ಘಟನೆಗೆ ಸಂಬಂಧಪಟ್ಟಂತೆ ಜನರು ನಾನಾ ಕಮೆಂಟ್‌ ಹಾಕುತ್ತಿದ್ದಾರೆ.

Comments are closed.