Deep Sleep: ರಾತ್ರಿ ಸರಿಯಾಗಿ ನಿದ್ದೆ ಬರದಿದ್ದರೆ ಹೊಕ್ಕಳಿಗೆ ಈ ಪೇಸ್ಟ್ ಹಚ್ಚಿದ್ರೆ ಸುಖ ನಿದ್ರೆ ನಿಮ್ಮದಾಗುತ್ತೆ

Deep Sleep: ಇತ್ತೀಚಿಗೆ ನಿದ್ರಾಹೀನತೆ ವಯಸ್ಸಾದವರಿಗೆ ಮಾತ್ರ ಸೀಮಿತವಲ್ಲ. ಬದಲಾಗಿ ಹದಿ ಹರೆಯದಿಂದ ನಿದ್ರಾಹೀನತೆ ಸಮಸ್ಯೆ ಇದೆ. ಈ ಸಮಸ್ಯೆಗೆ ಕೆಲವರು ನಿದ್ರೆ ಮಾತ್ರೆಗೆ ಅಡಿಕ್ಟ್ ಆಗಿದ್ದಾರೆ. ಈ ಅಭ್ಯಾಸ ತಪ್ಪು. ನಿಮ್ಮ ಆರೋಗ್ಯಕ್ಕೆ (health) ಕೆಟ್ಟ ಪರಿಣಾಮ ಉಂಟು ಮಾಡುತ್ತೆ. ಅದಕ್ಕಾಗಿ ರಾತ್ರಿ (night ) ನಿದ್ದೆ ಸಮಸ್ಯೆ ಇದ್ದವರಿಗೆ ಉತ್ತಮ ಮನೆಮದ್ದನ್ನು ಇಲ್ಲಿ ತಿಳಿಸಲಾಗಿದೆ. ಹೌದು ಕೇವಲ ಒಂದು ಪೇಸ್ಟ್ ನ್ನು ಹೊಕ್ಕಳಿಗೆ ಹಚ್ಚಿದ್ರೆ ಸಾಕು. ಸುಖ ನಿದ್ರೆ (Deep Sleep)ನಿಮ್ಮದಾಗುತ್ತೆ. ಬನ್ನಿ ನಿದ್ದೆ ಬರಿಸುವ ಆ ಪೇಸ್ಟ್ ಯಾವುದು ಮತ್ತು ಹೇಗೆ ಬಳಸಬೇಕು ಇಲ್ಲಿ ನೋಡೋಣ.


ಪೇಸ್ಟ್ ಮಾಡಲು ಬೇಕಾಗುವ ಸಾಮಗ್ರಿಗಳು:
1 ಟೀಚಮಚ ಶುದ್ಧ ಹಸುವಿನ ತುಪ್ಪ
ಒಂದು ಚಿಟಿಕೆ ಜಾಯಿಕಾಯಿ
ಒಂದು ಚಿಟಿಕೆ ಜಾವಿತ್ರಿ
ಕೆಲವು ಕೇಸರಿ ಎಳೆಗಳು
ಪೇಸ್ಟ್ ತಯಾರಿಸುವ ವಿಧಾನ:
ಒಂದು ಬಟ್ಟಲಿನಲ್ಲಿ 1 ಟೀಚಮಚ ಶುದ್ಧ ಹಸುವಿನ ತುಪ್ಪ, ಅದಕ್ಕೆ ಒಂದು ಚಿಟಿಕೆ ಜಾಯಿಕಾಯಿ ಸೇರಿಸಿ ಜೊತೆಗೆ ಒಂದು ಚಿಟಿಕೆ ಜಾವಿತ್ರಿ ಸೇರಿಸಿ. ನಂತರ ನಿಮ್ಮಲ್ಲಿ ಕೇಸರಿ ಇದ್ದರೆ ಕೆಲವು ಎಳೆಗಳನ್ನು ಸೇರಿಸಿ. ಇವುಗಳನ್ನು ಒಟ್ಟಾಗಿ ಚೆನ್ನಾಗಿ ಬೆರೆಸಿ ಪೇಸ್ಟ್ ಮಾಡಿ.
ಈ ಪೇಸ್ಟ್‌ನ ಕೆಲವು ಹನಿಗಳನ್ನು ನಿಮ್ಮ ಹೊಕ್ಕುಳ ಮೇಲೆ ಹಚ್ಚಿ ಹಾಗೆಯೇ ಬಿಡಿ. ನಂತರ ಹೊಕ್ಕುಳನ್ನು ಹಗುರವಾದ ಕೈಗಳಿಂದ ನಿಮ್ಮ ಬೆರಳಿನಿಂದ ಪ್ರದಕ್ಷಿಣಾಕಾರವಾಗಿ ಮಸಾಜ್ ಮಾಡಿ. ಈ ರೀತಿ ಮಾಡಿದಲ್ಲಿ ನೀವು ನಿಧಾನವಾಗಿ ನಿದ್ದೆಗೆ ಜಾರಲು ಸಹಾಯ ಮಾಡುತ್ತೆ.
Comments are closed.