PF ಬ್ಯಾಲೆನ್ಸ್ ಮತ್ತಿತರ ಸೇವೆಗಳು ಇನ್ನು ಒಂದೇ ಲಾಗಿನ್‌ಲ್ಲಿ ಲಭ್ಯ | ಪಾಸ್‌ಬುಕ್ ಲೈಟ್ ಆರಂಭ!

ಹೊಸದಿಲ್ಲಿ: ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ತನ್ನ ಬಳಕೆದಾರರಿಗಾಗಿ ‘ಪಾಸ್‌ಬುಕ್ ಲೈಟ್’ ಎಂಬ ಹೊಸ ವ್ಯವಸ್ಥೆಯನ್ನು ಶುರು ಮಾಡಿದೆ. ಅದರ ಮೂಲಕ ಪಾಸ್‌ಬುಕ್ ವೆಬ್‌ಸೈಟ್‌ಗೆ ಪ್ರತ್ಯೇಕವಾಗಿ ಲಾಗಿನ್ ಆಗದೆಯೇ, ತಮ್ಮ ಪಾಸ್‌ಬುಕ್ ನ ಸುಲಭ ಆವೃತ್ತಿಯನ್ನು ಇಪಿಎಫ್ ಪೋರ್ಟಲ್ ನಲ್ಲಿಯೇ ವೀಕ್ಷಿಸುವ ಅವಕಾಶ ದೊರಕಲಿದೆ.

ಇದೀಗ ದೊರೆಯುವ ‘ಪಾಸ್‌ಬುಕ್ ಲೈಟ್’ ವಿಂಡೋ ಮೂಲಕ ಗ್ರಾಹಕರು ತಮ್ಮ ದೇಣಿಗೆ, ವಿತ್ ಡ್ರಾವಲ್, ಖಾತೆಯಲ್ಲಿರುವ ಮೊತ್ತ ಇತ್ಯಾದಿ ಮಾಹಿತಿಯನ್ನು ಸುಲಭವಾಗಿ ಒಂದೇ ಕಡೆ ಪಡೆಯಬಹುದು ಎಂದು ಕೇಂದ್ರ ಸಚಿವ ಮನ್ಸುಖ್
ಮಾಂಡವೀಯ ಹೇಳಿದ್ದಾರೆ. ಅಲ್ಲದೆ, ಪಿಎಫ್ ನ್ನು ಆನ್‌ಲೈನ್‌ನಲ್ಲಿ ವರ್ಗಾವಣೆ ಮಾಡುವುದಕ್ಕಾಗಿ ಬಳಸುವ ಅನುಬಂಧ – ಕೆಯ (ವರ್ಗಾವಣೆ ಪ್ರಮಾಣಪತ್ರ) ಪಿಡಿಎಫ್ ಪ್ರತಿ ಪಡೆಯುವ ಅವಕಾಶವನ್ನು ಖಾತೆದಾರರಿಗೆ ಕಲ್ಪಿಸಲಾಗಿದೆ. ಈ ಮೂಲಕ ತಮ್ಮ ಖಾತೆ ವರ್ಗಾವಣೆ ಪ್ರಕ್ರಿಯೆಯ ಸ್ಥಿತಿಗತಿಗಳ ಮಾಹಿತಿ ಬಳಕೆದಾರರ ಬೆರಳ ತುದಿಯಲ್ಲಿ ಸಿಗಲಿದೆ. ಇದುವರೆಗೆ ಈ ಪ್ರಮಾಣಪತ್ರವನ್ನು ಇಪಿಎಫ್ ಕಚೇರಿಗಳು ತಮ್ಮೊಳಗೆ ವಿನಿಮಯ ಮಾಡಿಕೊಳ್ಳುತ್ತಿದ್ದವು. ಇದ್ರ ಜತೆಗೆ, ಇನ್ನಿತರ ಪಿಎಫ್ ಖಾತೆ ಸಂಬಂಧಿ ಸೇವೆಗಳಾದ ವರ್ಗಾವಣೆ, ವಿಲೇವಾರಿಯಂತಹ ಸೇವೆಗಳನ್ನು ಮತ್ತಷ್ಟು ಸರಳ ಹಾಗೂ ಕ್ಷಿಪ್ರಗೊಳಿಸಲಾಗಿದೆ.
ಇದನ್ನೂ ಓದಿ:33 ಕೋಟಿಗೆ ತನ್ನ ಆತ್ಮವನ್ನು ಮಾರಾಟ ಮಾಡಿದ ಮಹಿಳೆ; ಮಾರಿದ ಆ ಆತ್ಮ ಎಲ್ಲಿಟ್ಟಿದ್ದಾರೆ?
Comments are closed.