Nithyashri: ಹಾಡು ಹಾಡಿ ತಪ್ಪು ಮಾಡಿದೆ – ಕಣ್ಣೀರಿಟ್ಟ ವೈರಲ್ ಹುಡುಗಿ ನಿತ್ಯಶ್ರೀ

Share the Article

Nithyashri: ‘ಹೂವಿನ ಬಾಣದಂತೆ, ಯಾರಿಗೂ ಕಾಣದಂತೆ’ ಎನ್ನುವ ಹಾಡನ್ನು ತನ್ನದೇ ಶೈಲಿಯಲ್ಲಿ ಹಾಡಿ ರಾತ್ರೋರಾತ್ರಿ ವೈರಲ್ ಆಗಿದ್ದ ಹುಡುಗಿ ಇದೀಗ ನಾನು ಈ ಹಾಡು ಹೇಳಿ ತಪ್ಪು ಮಾಡಿದೆ ಎಂದು ಕಣ್ಣೀರಿಟ್ಟಿದ್ದಾಳೆ.

 

ಹೌದು, ಮಂಡ್ಯ ಮೂಲದ ನಿತ್ಯಶ್ರೀ ಬಿರುಗಾಳಿ’ ಚಿತ್ರದ ‘ಹೂವಿನ ಬಾಣದಂತೆ, ಯಾರಿಗೂ ಕಾಣದಂತೆ’ ಎನ್ನುವ ಈ ಹಾಡನ್ನು ತನ್ನ ಧಾಟಿಯಲ್ಲಿ ಹಾಡಿ ಇಂಟರ್ ನೆಟ್ ನಲ್ಲಿ ವೈರಲ್ ಆಗಿದ್ದಳು. ಹಾಡಿನ ರೀಲ್ಸ್ ವಿಡಿಯೋ ಮಿಲಿಯನ್ ಗಟ್ಟಲೆ ವೀವ್ಸ್ ಪಡೆದಿದ್ದಲ್ಲದೆ, ಸೆಲೆಬ್ರಿಟಿಗಳು ಇವಳ ಹಾಡಿಗೆ ಕಾಮೆಂಟ್ ಮಾಡಿದ್ದರು. ಆದರೀಗ ಈಕೆ ಈ ಹಾಡು ಹಾಡಿದಕ್ಕೆ ಕಣ್ಣೇರು ಹಾಕಿದ್ದಾಳೆ.

 

ಈ ಬಗ್ಗೆ ಮಾತನಾಡಿದ ಅವಳು “ನನಗೆ ನನ್ನ ಫ್ರೆಂಡ್ಸ್‌ ಹಾಡು ಹಾಡು ಅಂತ ಹೇಳಿದರು. ಆ ಶೈಲಿಯಲ್ಲಿ ಹಾಡನ್ನು ನಾನೇ ಕ್ರಿಯೇಟ್‌ ಮಾಡಿ ಹಾಡಿದೆ. ಒಂದು ಹಾಡನ್ನು ಮಾತ್ರ ಆ ರೀತಿ ಹಾಡಿದ್ದೇನೆ. ಅದರಿಂದಲೇ ತುಂಬಾ ಜನರಿಂದ ಏನೋ ಏನೋ ಕೇಳಿದ್ದೀನಿ. ಇದೊಂದೇ ಸಾಕು ನನಗೆ. ಒಂದು ಸಾಂಗ್‌ಗೆ ಅವಮಾನ ಮಾಡಿದ್ದು ಸಾಕು. ಅದೇ ತುಂಬಾ ಬೇಜಾರ್‌ ಆಗುತ್ತಿದೆ. ಅಷ್ಟು ಚೆನ್ನಾಗಿರುವ ಹಾಡನ್ನು ಅಷ್ಟು ಕೆಟ್ಟದಾಗಿ ಹಾಡಿದ್ದೇನೆ ಅಂತ ತುಂಬಾ ಪಶ್ಚಾತ್ತಾಪ ಆಗುತ್ತಿದೆ” ಎಂದಿದ್ದಾರೆ.

 

ಅಲ್ಲದೆ”ನಾನು ಸಂಗೀತಕ್ಕೆ ಅವಮಾನ ಮಾಡಿದ್ದೇನೆ. ನನಗೆ ಸಂಗೀತದ ಬಗ್ಗೆ ಏನೂ ಗೊತ್ತಿಲ್ಲ. ಹಾಡಿಗೆ ಅವಮಾನ ಮಾಡಿದ್ದೇನೆ ಅನ್ನೋದಕ್ಕೆ ನನಗೆ ಫೀಲ್‌ ಆಗುತ್ತಿದೆ. ನನಗೇನು ಹೇಳಬೇಕು ಅಂತ ಗೊತ್ತಿಲ್ಲ. ನಾನು ಅರ್ಜುನ್‌ ಜನ್ಯ ಅವರಿಗೆ ಸ್ಸಾರಿ ಕೇಳುತ್ತೇನೆ. ಅವರು ಇದನ್ನು ನೆಗೆಟಿವ್‌ ಆಗಿ ತೆಗೆದುಕೊಂಡಿಲ್ಲ. ಆದ್ರೂ ಅವರಿಗೆ ಕ್ಷಮೆ ಕೇಳುತ್ತೇನೆ. ಇನ್ಮುಂದೆ ಆ ರೀತಿಯ ಧಾಟಿಯಲ್ಲಿ ಯಾವತ್ತೂ ಹಾಡಲ್ಲ ಎಂದು ಹೇಳುತ್ತಾ ಕಣ್ಣೀರಿಟ್ಟಿದ್ದಾರೆ.

Comments are closed.