Caste survey: ಜಾತಿ ಸಮೀಕ್ಷೆ- ಕಾರ್ಯಕರ್ತೆಯರಿಗೆ 2,000 ಗೌರವ ಧನ ಘೋಷಿಸಿದ ಸರ್ಕಾರ, ಆದ್ರೆ ಈ ಕಂಡೀಶನ್ ಅಪ್ಲೈ

Share the Article

Caste survey: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸುತ್ತಿರುವ ಶೈಕ್ಷಣಿಕ ಹಾಗೂ ಸಾಮಾಜಿಕ ಸಮೀಕ್ಷೆ- 2025 ರಲ್ಲಿ ಭಾಗವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದ್ದು, 2,000 ಗೌರವ ಧನವನ್ನು ಘೋಷಣೆ ಮಾಡಿದೆ.

ಹೌದು, ಜಾತಿ ಸಮೀಕ್ಷೆ ಮಾಡುವಂತಹ ಆಶಾ ಕಾರ್ಯಕರ್ತೆಯರಿಗೆ ₹2000 ಗೌರವಧನ ನೀಡುವಂತೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025’ರ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆಯವರ ಸೇವೆಯನ್ನು ಉಪಯೋಗಿಸಿಕೊಳ್ಳಲು ತೀರ್ಮಾನ ಮಾಡಲಾಗಿದೆ. ಜೊತೆಗೆ, ಆಶಾ ಕಾರ್ಯಕರ್ತೆಯರಿಗೆ ತಲಾ ರೂ.2000ಗಳ ಗೌರವಧನವನ್ನು ನೀಡಿ ಸೇವೆಯನ್ನು ಪಡೆಯಲು ಸಂಬಂಧಪಟ್ಟ ಇಲಾಖೆ ಅನುಮತಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಪ್ರಸ್ತಾವನೆಯನ್ನು ಪರಿಶೀಲಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.

ಇದನ್ನೂ ಓದಿ:Viral Video : ಗಂಡನ ಜೇಬಿನಿಂದ ದುಡ್ಡು ತೆಗೆಯುವಾಗ ಸಿಕ್ಕಿ ಬಿದ್ರೆ ಏನು ಮಾಡಬೇಕು? ಮಹಿಳೆ ಕೊಟ್ಟ ಐಡಿಯಾ ಸಿಕ್ಕಾಪಟ್ಟೆ ವೈರಲ್

ಆದರೆ ಇದಕ್ಕೆ ಒಂದು ಕಂಡೀಶನ್ ಕೂಡ ಅಪ್ಲೈ ಆಗಿದೆ. ಅದೇನೆಂದರೆ ತನ್ನ ಆದೇಶದಲ್ಲಿ ಇಲಾಖೆಯು ಆರೋಗ್ಯ ಇಲಾಖೆಯಿಂದ ನಿಯೋಜಿಸಲಾದ ಆಶಾ ಕಾರ್ಯಕರ್ತೆಯರು ಶೇ.90ರಷ್ಟು ಮನೆಗಳಿಗೆ ಭೇಟಿ ನೀಡಿ ಜಾಗೃತಿ ಅಭಿಯಾನ ಆಯಪ್ ಮೂಲಕ ಯು.ಹೆಚ್‌.ಐ.ಡಿ. ನಂಬರ್ ಹಾಗೂ ಮೊಬೈಲ್ ದೂರವಾಣಿ ಸಂಖ್ಯೆಗಳನ್ನು ಸಂಗ್ರಹಿಸುವ ಪ್ರತಿ ಆಶಾ ಕಾರ್ಯಕರ್ತೆಯರಿಗೆ ರೂ.2000ಗಳ ಗೌರವಧನವನ್ನು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಲೆಕ್ಕ ಶೀರ್ಷಿಕೆಯಡಿ ಒದಗಿಸುವ ಅನುದಾನದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೂಲಕ ಪಾವತಿಸಲಾಗುವುದು ಎಂದು ತಿಳಿಸಿದೆ.

Comments are closed.