Viral Video : ಗಂಡನ ಜೇಬಿನಿಂದ ದುಡ್ಡು ತೆಗೆಯುವಾಗ ಸಿಕ್ಕಿ ಬಿದ್ರೆ ಏನು ಮಾಡಬೇಕು? ಮಹಿಳೆ ಕೊಟ್ಟ ಐಡಿಯಾ ಸಿಕ್ಕಾಪಟ್ಟೆ ವೈರಲ್

Share the Article

Viral Video : ಸೋಶಿಯಲ್ ಮೀಡಿಯಾದಲ್ಲಿ ಪ್ರತಿದಿನವೂ ಹೊಸ ಹೊಸ ವಿಡಿಯೋ ಗಳು ವೈರಲಾಗುತ್ತಲೇ ಇರುತ್ತವೆ. ಕೆಲವೊಮ್ಮೆ ಕೆಲವು ವಿಡಿಯೋಗಳು ಮಜಾ ಕೊಟ್ಟರೆ, ಮತ್ತೆ ಕೆಲವು ಒಳ್ಳೊಳ್ಳೆ ಐಡಿಯಾಗಳನ್ನು ನೀಡುತ್ತದೆ. ಇತ್ತೀಚಿನ ದಿನಗಳಲ್ಲಿ ಗಂಡನ ಜೇಬಿನಿದಿಂದ ಹೆಂಡತಿಯರು ದುಡ್ಡು ಕದಿಯುವಂತಹ ಕೆಲವೊಂದು ಕಾಮಿಡಿ ವಿಡಿಯೋಗಳು ವೈರಲ್ ಆಗೋದನ್ನ ನಾವು ನೋಡಿದ್ದೇವೆ. ಇದೀಗ ಇದೇ ತರದ ವಿಡಿಯೋ ಒಂದು ವೈರಲ್ ಆಗಿದ್ದು ಮಹಿಳೆಯೊಬ್ಬರು ಗಂಡನ ಜೇಬಿನಿಂದ ನಾವು ಹಣ ಕದಿಯುವಾಗ ಸಿಕ್ಕಿ ಬಿದ್ದರೆ ಏನು ಮಾಡಬೇಕು ಎಂಬ ಐಡಿಯಾ ನೀಡಿದ್ದಾರೆ.

https://www.instagram.com/reel/DJVjZp7PnJy/?igsh=ZnJrbXp1NmxrY3Q=

ಹೌದು, ಮಹಿಳೆ ಒಬ್ಬರುಗಂಡನ ಜೇಬಿನಿಂದ ದುಡ್ಡನ್ನು ಹೇಗೆ ಎತ್ತಿಕೊಳ್ಳುವುದು? ಎಂಬುದನ್ನು ಹಾಸ್ಯಮಯ ರೀತಿಯಲ್ಲಿ ಹೇಳಿದ್ದಾರೆ. ಇದಲ್ಲದೆ, ಗಂಡನ ಜೇಬಿನಿಂದ ಹಣವನ್ನು ತೆಗೆದುಕೊಳ್ಳುವಾಗ ಒಂದು ವೇಳೆ ಸಿಕ್ಕಿಬಿದ್ದರೆ ಇಂತಹ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಸಹ ತಿಳಿಸಿದ್ದಾರೆ.

ವೈರಲ್ ಆದ ವಿಡಿಯೋದಲ್ಲಿ ಮಹಿಳೆಯು “ಒಬ್ಬ ಸಹೋದರಿ, ನಾನು ಅವರ ಜೇಬಿನಿಂದ ಹಣ ತೆಗೆದ ತಕ್ಷಣ ತಿಳಿಯುತ್ತದೆ” ಎಂದು ಕಾಮೆಂಟ್ ಮಾಡಿದ್ದಾರೆ” ಹಾಗಾಗಿ ಈ ಕಾಮೆಂಟ್ ಅನ್ನು ಉಲ್ಲೇಖಿಸಿ ಹೇಳುವುದಾದರೆ ಎನ್ನುತ್ತಾ..ನಗುತ್ತಾ.. ಗಂಡನ ಕೈಲಿ ಸಿಕ್ಕಿ ಬಿದ್ದರೆ ತಕ್ಷಣ ಮುಗ್ಧವಾಗಿ ವರ್ತಿಸಲು ಪ್ರಾರಂಭಿಸಿ ಎಂದಿದ್ದಾರೆ.

ಅಲ್ಲದೆ ಗಂಡ, “ನಾನೇ ಇಲ್ಲಿ ಹಣ ಇಟ್ಟಿದ್ದೆ” ಎಂದು ಹೇಳಿದ ತಕ್ಷಣ, ಅದು ಹೇಗೆ ಕಾಣೆಯಾಯ್ತು? ಎಂದು ಆ ಸಮಯದಲ್ಲಿ ನೀವು ಶಾಕ್ ಆಗಿ, ಆಶ್ಚರ್ಯದ ರೀತಿಯಲ್ಲಿ ಕೇಳಬೇಕು. ನಂತರ ನೀವು ನಿಜ ಹೇಳಬೇಕು. ಅದು ನನ್ನ ಹಣ ಎಂದು ನಾನು ಭಾವಿಸಿದೆ ಅಥವಾ ನಿಮ್ಮ ಹಣ ನಮ್ಮದು ಎಂದು ನೀವು ತಮಾಷೆಯಾಗಿ ಹೇಳಬಹುದು. ಬಿಡಿ, ಈಗ ಮನೆಯಲ್ಲಿ ದುಡ್ಡನ್ನ ಯಾರು ಇಡುತ್ತಾರೆ” ಎಂದು ತಿಳಿಸಿದ್ದಾರೆ. ಅನೇಕ ಮಹಿಳೆಯರು ಈ ವಿಡಿಯೋವನ್ನು ಮೆಚ್ಚಿಕೊಂಡಿದ್ದಾರೆ.

ಇದನ್ನೂ ಓದಿ:Obesity: ಜಗತ್ತಿನ ಯಾವ ದೇಶಗಳಲ್ಲಿ ಹೆಚ್ಚು ಬೊಜ್ಜು ಇದೆ? ಮಕ್ಕಳ ಆರೋಗ್ಯದ ಮೇಲೆ ಭಾರಿ ಪರಿಣಾಮ

Comments are closed.