Moodabidre: ಮೂಡಬಿದ್ರೆ: ಟ್ರಕ್ಕಿಂಗ್‌ ಹೋದ ಪುತ್ತೂರಿನ ಯುವಕ ಕುಸಿದು ಬಿದ್ದು ಸಾವು

Share the Article

Moodabidre: ಇಲ್ಲಿನ ಗುಡ್ಡವೊಂದಕ್ಕೆ ಟ್ರಕ್ಕಿಂಗ್‌ಗೆಂದು ಹೋಗಿದ್ದ ಇಬ್ಬರು ಯುವಕರ ಪೈಕಿ ಓರ್ವ ಅಸ್ವಸ್ಥಗೊಂಡು ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ.

ಪುತ್ತೂರು ಇರ್ದೆ ನಿವಾಸಿ ಮನೋಜ್‌ ಎನ್‌ (22) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಕೇರಳದ ಆಡೂರು ನಿವಾಸಿ ಕಾರ್ತಿಕ್‌ ಜೊತೆ ಈತ ಟ್ರಕ್ಕಿಂಗ್‌ಗೆ ಹೋಗಿದ್ದರು. ಸದ್ಯ ಮೂಡಬಿದರೆ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ತನಿಖೆ ಮಾಡುತ್ತಿದ್ದಾರೆ.

ಮಂಗಳೂರಿನ ಸಿ.ಎ. ಅಂತಿಮ ವರ್ಷದ ಇಬ್ಬರು ವಿದ್ಯಾರ್ಥಿಗಳಾದ ಇವರು ಗುಡ್ಡಕ್ಕೆ ಟ್ರೆಕ್ಕಿಂಗ್‌ಗೆಂದು ತೆರಳಿದ್ದು, ಇವರಲ್ಲಿ ಕೇರಳ ಅಡೂರು ನಿವಾಸಿ ಕಾರ್ತಿಕ್‌ (22) ಹಾಗೂ ಪುತ್ತೂರು ತಾಲೂಕು ಇರ್ದೆ ಗ್ರಾಮದ ಬೆಟ್ಟಂಪಾಡಿ ನಡುವಡ್ಕ ನಿವಾಸಿ ಗೋಪಾಲಕೃಷ್ಣ ಭಟ್‌ ಪುತ್ರ ಮನೋಜ್‌ ಎನ್‌ (22) ಇದ್ದರು.

ಮನೋಜ್‌ ಆಕಸ್ಮಿಕವಾಗಿ ಜಾರಿ ಬಿದ್ದು ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಇದನ್ನೂ ಓದಿ:Drugs: ಮಾದಕ ವಸ್ತು ಮುಕ್ತ ಅಭಿಯಾನ : ₹12 ಕೋಟಿ ಮೌಲ್ಯದ ಹೆರಾಯಿನ್ ಪತ್ತೆ – ಐವರ ಬಂಧನ

Comments are closed.