H K Muniyappa : BPL ಕಾರ್ಡ್ ರದ್ದಾದರೆ ಜಸ್ಟ್ ಹೀಗೆ ಮಾಡಿ, 24 ಗಂಟೆಯೊಳಗೆ ವಾಪಸ್ ಪಡೆಯಿರಿ

H K Muniyappa: ಆಹಾರ ಇಲಾಖೆಯ ವಿಶೇಷ ಕಾರ್ಯಾಚರಣೆ ವೇಳೆ ರಾಜ್ಯದಲ್ಲಿ ಬರೋಬ್ಬರಿ 7.76 ಲಕ್ಷ ಮಂದಿ ಅನರ್ಹರು ಬಿಪಿಎಲ್ ಕಾರ್ಡ್ ಪಡೆದಿದ್ದಾರೆ ಎನ್ನುವ ಮಾಹಿತಿಯನ್ನು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯೇ ನೀಡಿದೆ. ಆದರೆ ಇದರೊಂದಿಗೆ ಕೆಲವು ಅರ್ಹ ಫಲಾನುಭವಿಗಳ ಬಿಪಿಎಲ್ ಕಾರ್ಡ್ ಕೂಡ ರದ್ದಾಗುತ್ತಿದೆ. ಒಂದು ವೇಳೆ ಹೀಗೆ ಏನಾದರೂ ಆದರೆ ತಕ್ಷಣ ಈ ಒಂದು ಕೆಲಸ ಮಾಡಿ. 24 ಗಂಟೆಯೊಳಗೆ ನಿಮ್ಮ ಕಾರ್ಡ್ ವಾಪಸ್ ಸಿಗುತ್ತದೆ ಎಂದು ಆಹಾರ ಸಚಿವರ ಘೋಷಣೆ ಮಾಡಿದ್ದಾರೆ.

ಕೇಂದ್ರ ಸರ್ಕಾರ 7 ಲಕ್ಷ ಬಿಪಿಎಲ್ ಕಾರ್ಡ್ಗಳನ್ನು ರದ್ದುಗೊಳಿಸಲು ಗೈಡ್ಲೈನ್ಸ್ ನೀಡಿದೆ. ಅದರಂತೆ ಅನರ್ಹ ಬಿಪಿಎಲ್ ಕಾರ್ಡ್ದಾರರನ್ನು ಎಪಿಎಲ್ಗೆ ವರ್ಗಾವಣೆ ಮಾಡುವ ಪ್ರಕ್ರಿಯೆ ಆರಂಭಿಸಲಾಗಿದೆ. ಒಂದು ವೇಳೆ ಅರ್ಹ ಬಿಪಿಎಲ್ ಕಾರ್ಡ್ದಾರರನ್ನು ಎಪಿಎಲ್ಗೆ ವರ್ಗಾವಣೆ ಮಾಡಿದ್ದರೆ ಸರ್ಕಾರಕ್ಕೆ ಅರ್ಜಿ ಸಲ್ಲಿಕೆ ಮಾಡಿದರೆ, 24 ಗಂಟೆಯೊಳಗೆ ಅದನ್ನು ಸರಿಪಡಿಸಿ ದವಸ ಧಾನ್ಯಗಳನ್ನು ಕೊಡಲಾಗುತ್ತದೆ ಎಂದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.
ಹೌದು, ಪರಿಷ್ಕರಣೆ ಸಂದರ್ಭದಲ್ಲಿ ತಪ್ಪಾಗಿ ಬಿಪಿಎಲ್ನಿಂದ ಎಪಿಎಲ್ಗೆ ಹೋಗಿದವರು ತಕ್ಷಣವೇ ಅರ್ಜಿ ಸಲ್ಲಿಸಬಹುದಾಗಿದೆ. ‘ಅರ್ಜಿ ಸಲ್ಲಿಸಿದವರನ್ನು 24 ಗಂಟೆಗಳೊಳಗೆ ಪುನಃ ಬಿಪಿಎಲ್ ಪಟ್ಟಿಗೆ ಸೇರಿಸಿ ಅವರಿಗೆ ದವಸ ಧಾನ್ಯಗಳನ್ನು ನೀಡಲಾಗುವುದು’ ಎಂದೂ ಅವರು ಭರವಸೆ ನೀಡಿದರು.
Comments are closed.