Shah rukh khan: ಶಾರುಖ್ ಖಾನ್ ಅವರ ಮ್ಯಾನೇಜರ್ ಪೂಜಾ ದದ್ದಾನಿ ಸಂಬಳ ಎಷ್ಟು? ಅವರ ಆಸ್ತಿ ಮೌಲ್ಯ ಎಷ್ಟು ಗೊತ್ತಾ?

Shah rukh khan: ಬಾಲಿವುಡ್‌ನ ಕಿಂಗ್ ಖಾನ್ ಜೊತೆ ಯಾವಾಗಲೂ ಒಬ್ಬರು ಮಹಿಳೆ ಇರುತ್ತಾರೆ. ಅವರ ಮ್ಯಾನೇಜರ್ ಅವರ ಜೊತೆಗಿರುವುದರಿಂದ ಹಿಡಿದು ಅವರ ದೈನಂದಿನ ಚಟುವಟಿಕೆಗಳವರೆಗೆ ಎಲ್ಲವನ್ನೂ ನೋಡಿಕೊಳ್ಳುತ್ತಾರೆ. ಅವರೇ ಪೂಜಾ ದದ್ಲಾನಿ. ಶಾರುಖ್ ಖಾನ್ ಅವರ ಮ್ಯಾನೇಜರ್. ಹಾಗೆ ಅವರ ಸಂಬಂಧವು ಒಂದು ಕುಟುಂಬದವರಂತೇ ಇರುತ್ತಾರೆ. ಪೂಜಾ ಹೆಚ್ಚಾಗಿ ಶಾರುಖ್ ಮಕ್ಕಳೊಂದಿಗೆ ಕಾಣಿಸಿಕೊಳ್ಳುತ್ತಾರೆ.

ಪೂಜಾ, ಶಾರುಖ್ ಅವರ ವ್ಯವಹಾರವನ್ನು ಸಹ ನಿರ್ವಹಿಸುತ್ತಾರೆ. ಶಾರುಖ್ ಖಾನ್ ಅವರನ್ನು ನಿರ್ವಹಿಸುವುದಕ್ಕಾಗಿ ಅವರು ವಾರ್ಷಿಕವಾಗಿ ಕೋಟ್ಯಂತರ ರೂಪಾಯಿಗಳನ್ನು ಗಳಿಸುತ್ತಾರೆ. ಪೂಜಾ ಅವರ ಸಂಬಳ ಮತ್ತು ನಿವ್ವಳ ಮೌಲ್ಯದ ಬಗ್ಗೆ ತಿಳಿದರೆ ನೀವು ಆಘಾತಕ್ಕೊಳಗಾಗುತ್ತೀರಿ.
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ನಟ ಶಾರುಖ್ ಖಾನ್ ತಮ್ಮ ಮ್ಯಾನೇಜರ್ ಪೂಜಾ ದದ್ಲಾನಿಗೆ ವಾರ್ಷಿಕ ₹7-9 ಕೋಟಿ ಸಂಬಳ ನೀಡುತ್ತಾರೆ. ವರದಿಯ ಪ್ರಕಾರ, ಪೂಜಾ ಅವರ ನಿವ್ವಳ ಆಸ್ತಿ ಮೌಲ್ಯ ₹45-50 ಕೋಟಿಗಳ ನಡುವೆ ಇದೆ. ಅವರು ತಮ್ಮ ಕುಟುಂಬದೊಂದಿಗೆ ಮುಂಬೈನ ಬಾಂದ್ರಾದಲ್ಲಿರುವ ಐಷಾರಾಮಿ ಮನೆಯಲ್ಲಿ ವಾಸಿಸುತ್ತಿದ್ದು, ಇದನ್ನು ಶಾರುಖ್ ಅವರ ಪತ್ನಿ ಗೌರಿ ಖಾನ್ ಸ್ವತಃ ವಿನ್ಯಾಸಗೊಳಿಸಿದ್ದಾರೆ.
ಇದನ್ನೂ ಓದಿ:Asiacup-2025: ಏಷ್ಯಾಕಪ್‌ನಿಂದ ಹೊರನಡೆಯುವ ಬಗ್ಗೆ ಪಾಕಿಸ್ತಾನ ಚಿಂತನೆ : ಇಂದು ಅಂತಿಮ ನಿರ್ಧಾರ
ಶಾರುಖ್ ಖಾನ್ ಅವರ ಮ್ಯಾನೇಜರ್ ಪೂಜಾ ದದ್ಲಾನಿ, ಗ್ಲಾಮರ್ ಲೋಕದಲ್ಲಿ ಓರ್ವ ಪ್ರಮುಖ ಮಹಿಳೆಯಾಗಿ ಗುರುತಿಸಿಕೊಂಡಿದ್ದಾರೆ. ಅವರು ಸಿನಿಮಾಗಳಲ್ಲಿ ಕಾಣಿಸಿಕೊಳ್ಳದೇ ಇರಬಹುದು, ಆದರೆ ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ಕುತೂಹಲಕಾರಿಯಾಗಿ, ಪೂಜಾ, ಶಾರುಖ್ ಖಾನ್ ಮಾಡುವ ಪ್ರತಿ ಪೈಸೆಯನ್ನೂ ಗಮನಿಸುತ್ತಾರೆ. ಪೂಜಾ 2012ರಿಂದ ಶಾರುಖ್ ಖಾನ್ ಜೊತೆ ಇದ್ದಾರೆ. ಅವರು ಆಭರಣ ಬ್ರ್ಯಾಂಡ್ ಲಿಸ್ಟಾದ ನಿರ್ದೇಶಕ ಹಿತೇಶ್ ಗುರ್ನಾನಿ ಅವರನ್ನು ವಿವಾಹವಾಗಿದ್ದಾರೆ.
Comments are closed.