School: ವಿದ್ಯಾರ್ಥಿಗೆ ಮನ ಬಂದಂತೆ ಥಳಿಸಿದ ಶಿಕ್ಷಕಿ – ಮೂರ್ಛೆ ತಪ್ಪಿ ಆಸ್ಪತ್ರೆ ಸೇರಿದ ಬಾಲಕ

Share the Article

School: ಶಿಕ್ಷಕಿ ಯೊಬ್ಬರು ವಿದ್ಯಾರ್ಥಿಗೆ ಮನ ಬಂದಂತೆ ಥಳಿಸಿದ ಪರಿಣಾಮ ಮೈಯೆಲ್ಲಾ ಬಾಸುಂಡೆ ಬಂದು ಪ್ರಜ್ಞೆ ತಪ್ಪಿಬಿದ್ದು ಆಸ್ಪತ್ರೆಗೆ ದಾಖಲಾಗಿದ್ದಾನೆ. ಈ ಘಟನೆ ಚಾಮರಾಗನಗರದ ಯಳದೂರು ಪಟ್ಟಣದಲ್ಲಿ ಸಂಭವಿಸಿದ್ದು, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪಟ್ಟಣದ ಚಾಮಲಾಪುರದ ನಿವಾಸಿಯ ಪುತ್ರ 10 ವರ್ಷದ ಬಾಲಕ ಆಸ್ವ ಸ್ಗೊಂಡಿದ್ದು, ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಪಟ್ಟಣದ ಕೆ.ಕೆ.ರಸ್ತೆಯಲ್ಲಿರುವ ಎಸ್‌ಡಿ ವಿಎಸ್ ವಿದ್ಯಾಸಂಸ್ಥೆಯಲ್ಲಿ 5ನೇ ತರಗತಿ ಓದುತ್ತಿರುವ ಬಾಲಕ ತೀವ್ರವಾಗಿ ಗಾಯ ಗೊಂಡಿದ್ದಾನೆ. ತರಗತಿಯಲ್ಲಿ ಪಾಠ ಮಾಡುತ್ತಿದ್ದ ಉಮ್ಮತ್ತೂರಿನ ಶಿಕ್ಷಕಿ ಭಾನುಮತಿ ಅವರು ಬೋರ್ಡ್ ಮೇಲೆ ನೋಟ್ಸ್ ಬರೆದಿದ್ದು, ಅದನ್ನು ಬರೆದು ಕೊಳ್ಳುವಂತೆ ಎಲ್ಲರಿಗೂ ಹೇಳಿದ್ದರು. ಈ ವೇಳೆ ಗುರುಪ್ರಸಾದ್ ಮೂತ್ರ ವಿಸರ್ಜನೆಗೆ ಹೋಗಬೇಕು ಎಂದು ಕೇಳಿದನಂತೆ. ಆಗ ಶಿಕ್ಷಕಿ ಭಾನುಮತಿ ನಾನು ಕೊಟ್ಟಿರುವ ಬರೆಯುವ ಕೆಲಸ ಮುಗಿಸಿ ಆಮೇಲೆ ಹೋಗು ಎಂದಿದ್ದರೆನ್ನಲಾಗಿದೆ.

ಆದರೂ ಬಾಲಕ ಪದೇ ಪದೆ ಮೂತ್ರ ವಿಸರ್ಜನೆಗೆಂದು ಕೇಳಿದಾಗ, ಶಿಕ್ಷಕಿ ನೀನೇನು ಬರೆದಿರುವೆ ತೋರಿಸು ಎಂದು ಕೇಳಿದ್ದಾರೆ. ಆದರೆ ವಿದ್ಯಾರ್ಥಿ ನೋಟ್ ಬುಕ್‌ನಲ್ಲಿ ಏನನ್ನೂ ಬರೆದಿರಲಿಲ್ಲ. ಯಾಕೆ ಏನೂ ಬರೆದಿಲ್ಲ ಎಂದು ಕೇಳಿ, ಕುಪಿತಗೊಂಡ ಶಿಕ್ಷಕಿ, ಕೋಲಿನಿಂದ ಮನ ಬಂದಂತೆ ಥಳಿಸಿದ್ದರಿಂದ ವಿದ್ಯಾರ್ಥಿ ವಿಲವಿಲ ಒದ್ದಾಡಿ ಪ್ರಜ್ಞೆ ತಪ್ಪಿ ಬಿದ್ದನೆನ್ನಲಾಗಿದೆ.

ಶಿಕ್ಷಕಿ ವಿದ್ಯಾರ್ಥಿಗೆ ಥಳಿಸಿದ ಪರಿಣಾಮ ಪ್ರಜ್ಞೆ ತಪ್ಪಿ ಬಿದ್ದ ವಿಷಯ ತಿಳಿದ ಮುಖ್ಯ ಶಿಕ್ಷಕರು ಮತ್ತು ಶಾಲೆಯ ಇತರ ಶಿಕ್ಷಕರು, ವಿದ್ಯಾರ್ಥಿ ಮುಖಕ್ಕೆ ನೀರು ಚಿಮುಕಿಸಿ ಎಚ್ಚರಗೊಳಿಸಿ ಸಮಾಧಾನ ಪಡಿಸಿ ನಂತರ ಮನೆಗೆ ಕರೆದುಕೊಂಡು ಹೋಗಿ ಬಿಟ್ಟಿದ್ದಾರೆ. ಮನೆಗೆ ಬಂದ ಬಾಲಕ ಮಂಕಾಗಿ ಮಲಗಿರುವುದನ್ನು ಮನೆಯವರು ಪ್ರಶ್ನಿಸಿದಾಗ, ಶಿಕ್ಷಕಿ ಥಳಿಸಿದ ವಿಚಾರ ಬಯಲಿಗೆ ಬಂದಿದೆ.

ಇದನ್ನೂ ಓದಿ:BBK-12: ಬಿಗ್ ಬಾಸ್- 12ರ 18 ಕಂಟೆಸ್ಟೆಂಟ್​ಗಳ ಹೆಸರು ಲೀಕ್?

ಮನೆಯವರು ಹುಡುಗನ ಬಟ್ಟೆ ಹೆಚ್ಚಿಸಿ ನೋಡಿದಾಗ ತೊಡೆ ಹಾಗೂ ಮೈಯೆಲ್ಲಾ ಬಾಸುಂಡೆ ಗುರುತುಗಳಿದ್ದು, ತಕ್ಷಣ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ. ಜೊತೆಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿದೆ.

Comments are closed.