BBK-12: ಬಿಗ್ ಬಾಸ್- 12ರ 18 ಕಂಟೆಸ್ಟೆಂಟ್ಗಳ ಹೆಸರು ಲೀಕ್?

BBK-12: ಕನ್ನಡಿಗರ ಬಹು ನಿರೀಕ್ಷೆಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 12 ಇನ್ನೇನು ಕೆಲವೇ ವಾರಗಳಲ್ಲಿ ಶುರುವಾಗಲಿದೆ. ಈಗಾಗಲೇ ಕಲರ್ಸ್ ಕನ್ನಡ ಒಂದರ ಮೇಲೊಂದು ಅಪ್ ಡೇಟ್ ಗಳನ್ನು ನೀಡುತ್ತಲೇ ಬಂದಿದೆ. ಈಗ ತಾನೆ ಬಹಳ ಕುತೂಹಲಕರವಾದ ಪ್ರೊಮೊ ರಿಲೀಸ್ ಕೂಡ ಆಗಿದೆ. ಈ ಬೆನ್ನಲ್ಲೇ ಬಿಗ್ ಬಾಸ್ ಮನೆಗೆ ಯಾವೆಲ್ಲ ಸ್ಪರ್ಧಿಗಳು ಬರುತ್ತಾರೆ ಎಂಬ ಲಿಸ್ಟ್ ಒಂದು ವೈರಲ್ ಆಗಿದೆ.

ಹೌದು, ಬಿಗ್ ಬಾಸ್ 12 ಪ್ರೋಮೋ ಹೊರಬಿದ್ದ ಬೆನ್ನಲ್ಲೇ ಈ ಬಾರಿ ಮನೆಯೊಳಗೆ ಹೋಗುವ ಸ್ಪರ್ಧಿಗಳು ಇವರೇ ಎಂಬ ಗುಸುಗುಸು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಸಾಲಿನಲ್ಲಿ ಕೇಳಿಬರುತ್ತಿರುವ ಮೊದಲ ಹೆಸರು ಸಾಗರ್ ಬಿಳಿಗೌಡ. ಸೀಸನ್ 11ರ ಸ್ಪರ್ಧಿ ಗೌತಮಿ ಜಾಧವ್ ಅವರ ಸತ್ಯ ಸೀರಿಯಲ್ನಲ್ಲಿ ಸಾಗರ್ ಹೀರೋ ಆಗಿ ಕಾಣಿಸಿಕೊಂಡಿದ್ದರು. ಎರಡನೇ ಸ್ಪರ್ಧಿ ಪುಟ್ಟಕ್ಕ ಸಿರಿಯಲ್ ನಲ್ಲಿ ಫೇಮಸ್ ಆಗಿದ್ದ ಸಂಜನಾ ಬುರ್ಲಿ ಎಂದು ಹೇಳಲಾಗಿದೆ.
ಹಾಗೆಯೆ ನಂತರ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐ ವಿಡಿಯೋ ಮಾಡಿ ಸಂಕಷ್ಟಕ್ಕೆ ಸಿಲುಕಿರುವ ಸಮೀರ್ ಎಂಡಿ ಹೆಸರು ಕೂಡ ಇದರಲ್ಲಿದೆ. ಖಾಸಗಿ ಚಾನೆಲ್ನಲ್ಲಿ ಕೆಲಸ ಮಾಡುತ್ತಿದ್ದ ದಿವ್ಯಾ ವಸಂತ್, ಗಗನ್ ಶ್ರೀನಿವಾಸ್ (ಡಾ. ಬ್ರೋ) ಹಾಗೂ ಸ್ವಾತಿ ಕೂಡ ದೊಡ್ಮನೆಯೊಳಗೆ ಕಾಲಿಡಲಿದ್ದಾರಂತೆ. ನಂತರದ ಹೆಸರು ಶ್ವೇತಾ ಪ್ರಸಾದ್. ಆರಂಭದಲ್ಲಿ ಧಾರಾವಾಹಿಗಳ ಮೂಲಕ ಶ್ವೇತಾ ಗಮನ ಸೆಳೆದವರು. ಆ ಬಳಿಕ ಅವರು ಆರ್ಜೆ ಪ್ರದೀಪ್ ಜೊತೆ ವಿವಾಹ ಮಾಡಿಕೊಂಡಿದ್ದಾರೆ. ಮೇಘಾ ಶೆಟ್ಟಿ ಕೂಡ ಬಿಬಿಕೆಗೆ ಹೋಗಲಿದ್ದಾರಂತೆ. ಅರವಿಂದ್ ರತ್ನನ್, ಪಯಲ್ ಚಂಗಪ್ಪ, ವರುಣ್ ಆರಾಧ್ಯ ಹೆಸರು ಕೂಡ ಇದೆ.
ಇದನ್ನೂ ಓದಿ:Gruhalakshmi: ‘ಗೃಹಲಕ್ಷ್ಮಿ’ ಯೋಜನೆಯಿಂದ 2 ಲಕ್ಷ ಮಹಿಳೆಯರ ಹೆಸರು ತೆಗೆದುಹಾಕಿದ ಸರ್ಕಾರ !!
ಇನ್ನು ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ರಲ್ಲಿ ಡ್ರೋನ್ ಪ್ರತಾಪ್ಗೆ ಜೋಡಿಯಾಗಿ ಮೂರನೇ ರನ್ನರ್ ಅಪ್ ಆದ ಗಗನಾ ಕೂಡ ಬಿಗ್ ಬಾಸ್ ಸ್ಪರ್ಧಿಯಂತೆ. ಬಿಗ್ ಬಾಸ್ ಆರಂಭವಾಗುವ ಹೊತ್ತಿಗೆ ದೃಷ್ಟಿಬೊಟ್ಟು ಧಾರಾವಾಹಿ ಮುಕ್ತಾಯ ಕಾಣಲಿದೆಯಂತೆ. ಇದರಲ್ಲಿ ಮುಖ್ಯ ಪಾತ್ರ ಮಾಡುತ್ತಿರುವ ವಿಜಯ್ ಸೂರ್ಯ ಕೂಡ ಲಿಸ್ಟ್ನಲ್ಲಿದ್ದಾರೆ. ಉಳಿದಂತೆ ದೀಪಿಕಾ ಗೌಡ, ಗೀತಾ ಧಾರಾವಾಹಿಯ ಧನುಷ್, ಅಮೃಟಾ ರಾಮಾಮೂರ್ತಿ, ಸಿಂಗರ್ ಸುನಿಲ್ ಹಾಗೈ ಬಾಲು ಬೆಳಗುಂಡಿ ಬಿಬಿಕೆ 12 ಸ್ಪರ್ಧಿಗಳು ಎನ್ನಲಾಗಿದೆ.
Comments are closed.