Jemini AI: “ಬ್ಲೌಸ್ ಒಳಗಿದ್ದ ಅದು AI ಗೆ ಹೇಗೆ ಗೊತ್ತಾಯ್ತು?” ಜೆಮಿನಿ ಟ್ರೆಂಡ್ ಬಗ್ಗೆ ಶಾಕಿಂಗ್ ಅನುಭವ ಬಿಚ್ಚಿಟ್ಟ ಯುವತಿ, ಬೆಚ್ಚಿಬಿದ್ದ ನೆಟ್ಟಿಗರು!!

Jemini AI: ಜೆಮಿನಿ AI ಸೀರೆ ಫೋಟೋಗಳ ಟ್ರೆಂಡ್ ಭಾರತದ ಸೋಶಿಯಲ್ ಮೀಡಿಯಾಗಳಲ್ಲಿ ಬಿರುಗಾಳಿ ಎಬ್ಬಿಸಿದ್ದು, ಸಾವಿರಾರು ಯೂಸರ್‌ಗಳು ಗೂಗಲ್‌ನ ಜೆಮಿನಿ ಅಪ್ಲಿಕೇಶನ್ ಬಳಸಿ ರಚಿಸಲಾದ ಸೊಗಸಾದ ಸೀರೆಗಳಲ್ಲಿ AI-ರಚಿತ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಆದರೆ ಇದು ಈಗ ಎಷ್ಟು ಅಪಾಯಕಾರಿ ಎಂಬುದನ್ನು ಯುವತ್ತಿಯೊಬ್ಬರು ವಿಡಿಯೋ ಮಾಡಿ ತಿಳಿಸಿಕೊಟ್ಟಿದ್ದಾರೆ. ಇದನ್ನು ಕಂಡ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ.

https://www.instagram.com/reel/DOilNgNkp7u/?igsh=MTRyMnZ1dnd3NG9tdw==
ಹೌದು, ಝಲಕ್ ಭಾವ್ನಾನಿ ಎಂಬ ಯುವತಿ ತಮ್ಮ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಈ ವಿಡಿಯೋ ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಅವರು ಈ ಸೀರೆ ಫೋಟೋ ಟ್ರೆಂಡ್ ಟ್ರೈ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಇದರಲ್ಲಿ ಅವರು ಹೇಳಿದ ವಿಚಾರವನ್ನು ಗಮನಿಸಿದರೆ ಖಂಡಿತ ನೀವೊಮ್ಮೆ ದಿಗ್ಭ್ರಮೆಗೊಳ್ಳುತ್ತೀರಿ. ಅಷ್ಟೇ ಅಲ್ಲ ಮತ್ತೆ ಇನ್ಯಾವತ್ತೂ ಈ ರೀತಿಯ AI ಫೋಟೋ ಕ್ರಿಯೆಟ್ ಮಾಡಲು ಮುಂದಾಗುವುದಿಲ್ಲ.
ವಿಡಿಯೋದಲ್ಲಿ ಯುವತಿಯು ‘ಫುಲ್ ಸ್ಲೀವ್‌ನ ಹಸಿರು ಸೂಟ್‌ನಲ್ಲಿ ತನ್ನ ಫೋಟೋವನ್ನು ಅಪ್‌ಲೋಡ್ ಮಾಡಿದ್ದೆ. ಈ ಫೋಟೋಗೆ ಪ್ರತಿಕ್ರಿಯೆಯಾಗಿ ಕಪ್ಪು ಸೀರೆ ಮತ್ತು ಬ್ಲೌಸ್‌ನಲ್ಲಿ Banana AI ನಿಂದ ಫೋಟೋವನ್ನು ಪಡೆದುಕೊಂಡೆ. ಆದರೆ ಇದು ಶಾಕಿಂಗ್ ವಿಷಯವಲ್ಲ. ನಿಮಗೆ ಈಗಾಗಲೇ ವಿಡಿಯೋದಲ್ಲಿ ತೋರಿಸಿರುವ ಹಾಗೆ ಫುಲ್ ಸ್ಲೀವ್‌ನ ಸೂಟ್‌ನಲ್ಲಿ ಫೋಟೋವನ್ನು ಹಂಚಿಕೊಂಡಿದ್ದೇನೆ. ಸೂಟ್‌ನ ಸ್ಲೀವ್ಸ್ ಕ್ಲೋಸ್ ಆಗಿದೆ. ಆದರೆ ಕೈಯ ಮೇಲ್ಭಾಗದಲ್ಲಿ ಮಚ್ಚೆ ಇದೆ ಎಂದು Banana AI ಹೇಗೆ ಗೊತ್ತಾಯ್ತು? ಆದ್ದರಿಂದ ಹುಡುಗಿಯರ ಸುರಕ್ಷತೆ ದೃಷ್ಟಿಯಿಂದ ಈ ಅಪ್ಲಿಕೇಶನ್ ಅಪಾಯಕಾರಿ’ ಎಂದು ಯುವತಿ ಹೇಳಿಕೊಂಡಿದ್ದಾಳೆ. ಇಂತಹ ಯಾವುದೇ ಟ್ರೆಂಡ್ ಫಾಲೋ ಮಾಡುವ ಮೊದಲು ಹುಡುಗಿಯರು ಮತ್ತು ಮಹಿಳೆಯರು ನೂರು ಬಾರಿ ಯೋಚಿಸಬೇಕು ಎಂದು ಆಕೆ ತಿಳಿಸಿದ್ದಾರೆ. ಒಟ್ಟಾರೆ ಈ AI ಅನ್ನುವ ಚಾಲಾಕಿ ಬ್ಲೌಸ್ ಒಳಗೆ ಕೂಡಾ ಇಣುಕು ಹಾಕಿದ್ದಾನೆ. ಪ್ರೈವೆಸಿ ಅನ್ನೋದು ಇನ್ನು ಕಷ್ಟ ಕಷ್ಟ.
Comments are closed.