Vehicle: 15 ವರ್ಷಕ್ಕಿಂತ ಹಳೇ ಸರ್ಕಾರಿ ವಾಹನ ಗುಜರಿಗೆ ಹಾಕಲು ಸರ್ಕಾರದಿಂದ ಆದೇಶ

Vehicle: ರಾಜ್ಯದಲ್ಲಿ ಸರ್ಕಾರಿ ಇಲಾಖೆ, ನಿಗಮ, ಮಂಡಳಿ, ನಗರಸಭೆ, ಸರ್ಕಾರದ ಇತರೆ ಅಧೀನ ಸಂಸ್ಥೆಗಳಿಗೆ ಸೇರಲ್ಪಟ್ಟ ಮತ್ತು ನೋಂದಣಿಯಾಗಿ 15 ವರ್ಷ ದಾಟಿದ ವಾಹನಗಳನ್ನು ಕಡ್ಡಾಯವಾಗಿ ಗುಜರಿಗೆ ಹಾಕುವಂತೆ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.


ಈ ಕುರಿತಂತೆ ರಾಜ್ಯ ಸರ್ಕಾರವು ವಿಶೇಷ ರಾಜ್ಯ ಪತ್ರಿಕೆ ಹೊರಡಿಸಿದ್ದು, ಕೇಂದ್ರ ಸರ್ಕಾರವು ನಿಗದಿಪಡಿಸಿರುವ ಮಾನದಂಡಗಳ ಅನ್ವಯ ಮೋಟಾರು ವಾಹನಗಳ ಕಾಯ್ದೆ 1988ರ ಕಲಂ 64(ಪಿ)ರ ಅಧಿಕಾರದಡಿ ರಾಜ್ಯದಲ್ಲಿ ‘Registered Vehicle Scrapping Policy of Karnataka ‘ ಜಾರಿಗೊಳಿಸಲಾಗಿದೆ ಎಂದು ಹೇಳಿದೆ.

Registered Vehicle Scrapping Policy – 2022ನ್ನು ಜಾರಿಗೊಳಿಸಲು 15 ವರ್ಷಗಳನ್ನು ಪೂರೈಸಿರುವ, ರಾಜ್ಯ ಸರ್ಕಾರ/ಕೇಂದ್ರ ಸರ್ಕಾರ/ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳು/ನಿಗಮಗಳು/ಮಂಡಳಿಗಳು/ ಸ್ಥಳೀಯ ಸಂಸ್ಥೆ/ಇತ್ಯಾದಿಗಳಲ್ಲಿರುವ 5000 ವಾಹನಗಳನ್ನು ಆದ್ಯತೆ ಮತ್ತು ಉಪಯೋಗದ ಆಧಾರದ ಮೇಲೆ ಹಂತಹಂತವಾಗಿ ನಾಶಪಡಿಸಲು ಅನುಮೋದನೆ ನೀಡಲಾಗಿರುತ್ತದೆ.
ಈ ಹಿನ್ನೆಲೆಯಲ್ಲಿ ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಇಲಾಖೆ ನಿಗಮ/ ಮಂಡಳಿ/ ನಗರಸಭೆ ಸರ್ಕಾರದ ಇತರ ಅಧೀನ ಸಂಸ್ಥೆಗಳಿಗೆ ಸೇರಿದ, ನೋಂದಣಿಯಾಗಿ 15 ವರ್ಷಗಳನ್ನು, ಮೀರಿದ ವಾಹನಗಳನ್ನು ಕಡ್ಡಾಯವಾಗಿ ರಾಜ್ಯದಲ್ಲಿ ಸ್ಥಾಪಿತವಾಗಿರುವ ನೋಂದಾಯಿತ RVSF ಕೇಂದ್ರಗಳಲ್ಲಿಯೇ ನಾಶಪಡಿಸಲು ಆದೇಶಿಸಿದೆ.
ಈ ಆದೇಶವನ್ನು ಆರ್ಥಿಕ ಇಲಾಖೆಯು ಟಿಪ್ಪಣಿ ಸಂ. ಆಇ 418 ವೆಚ್ಚ-11/2022 (E). ದಿನಾಂಕ:08.09.2025ರಲ್ಲಿ ನೀಡಿರುವ ಸಹಮತಿಯನ್ವಯ ಹೊರಡಿಸಿದೆ.
Comments are closed.