Indian Railway: ರೈಲಿನಲ್ಲಿ ನಿಮ್ಮ ಬೈಕ್ ಪಾರ್ಸೆಲ್ ಮಾಡಬೇಕೆ? ನಿಯಮಗಳೇನು?

Indian Railway: ದೂರದ ಊರಿಗೆ ಬೈಕ್ ಓಡಿಸಿಕೊಂಡು ಹೋಗುವುದು ಕಷ್ಟದ ಕೆಲಸ. ಇಂತಹ ಸಂದರ್ಭದಲ್ಲಿ ನೀವು ನಿಮ್ಮ ಊರಿಗೆ ಸಾರಿಗೆಯ ಮೂಲಕ ಬೈಕ್ ಸಾಗಿಸಬಹುದು. ಇದಕ್ಕಾಗಿಯೇ ಭಾರತೀಯ ರೈಲ್ವೆ (Indian Railway) ಪಾರ್ಸೆಲ್ ಸೇವನೆಯನ್ನ ಒದಗಿಸುತ್ತಿದೆ. ನೀವು ನಿಮ್ಮ ಬೈಕ್‌ಅನ್ನ ಸರುಕ್ಷಿತವಾಗಿ ಎಲ್ಲಿ ಬೇಕಾದರೂ ರೈಲಿನ ಮೂಲಕ ಕಳುಹಿಸಬಹುದು. ಇದಕ್ಕಾಗಿ ಕೆಲವು ಪ್ರಕ್ರಿಯೆಗಳಿವೆ. ಈ ನಿಯಮಗಳನ್ನ ತಿಳಿದುಕೊಳ್ಳುವ ಮೂಲಕ ನೀವು ಸುಲಭವಾಗಿ ಬೈಕ್-ಸ್ಕೂಟರ್‌ಅನ್ನ ಕಳುಹಿಸಬಹುದು. ಅತ್ಯಂತ ಕಡಿಮೆ ಬೆಲೆಯಲ್ಲಿ ನೀವು ಬೈಕ್ ಪಾರ್ಸೆಲ್ ಮಾಡಬಹುದು. ಇದಕ್ಕಾಗಿ ಕೆಲವು ಪ್ರಮುಖ ದಾಖಲೆಗಳನ್ನ ನೀವು ನೀಡಬೇಕು ಮತ್ತು ಕೆಲವು ಪ್ಯಾಕಿಂಗ್ ನಿಯಮಗಳನ್ನ ಪಾಲಿಸಬೇಕು.

ರೈಲಿನಲ್ಲಿ ಬೈಕ್ ಕಳುಹಿಸಲು ಅಗತ್ಯ ದಾಖಲೆಗಳು:
ಬೈಕ್‌ನ ಮಾಲೀಕತ್ವವನ್ನ ದೃಢೀಕರಿಸುವ RC (ನೋಂದಣಿ ಪ್ರಮಾಣಪತ್ರ)
ವಿಮಾ ದಾಖಲೆಗಳು
ಆಧಾರ್ ಕಾರ್ಡ್, ಚಾಲನಾ ಪರವಾನಗಿ ಅಥವಾ ಪ್ಯಾನ್ ಕಾರ್ಡ್‌ನಂತಹ ಗುರುತಿನ ಚೀಟಿ
ನೀವು ನಿಮ್ಮ ಬೈಕ್‌ಅನ್ನ ಪಾರ್ಸೆಲ್ ಮೂಲಕ ಸಾಗಿಸುವಾಗ, ಈ ದಾಖಲೆಗಳನ್ನ ಸಲ್ಲಿಸಿದ ನಂತರ, ರೈಲ್ವೆ ಅಧಿಕಾರಿಗಳು ಬೈಕಿನ ತೂಕ, ಮಾದರಿ ಮತ್ತು ಇತರ ವಿವರಗಳನ್ನ ದಾಖಲಿಸುತ್ತಾರೆ. ನಂತರ ನಿಮಗೆ ಪಾರ್ಸೆಲ್ ರಶೀದಿಯನ್ನ ನೀಡಲಾಗುತ್ತದೆ. ಈ ರಶೀದಿ ಗಮ್ಯಸ್ಥಾನ (Drop Location) ನಿಲ್ದಾಣದಲ್ಲಿ ಪಡೆಯಲು ನೀವು ಅದನ್ನ ತೋರಿಸಬೇಕಾಗುತ್ತದೆ. ಇನ್ನು ಬೈಕು ಕಳುಹಿಸುವಾಗ ಸರಿಯಾದ ಪ್ಯಾಕಿಂಗ್ ಸಹ ಮುಖ್ಯವಾಗಿದೆ. ಕಳುಹಿಸುವ ಮೊದಲು ಬೈಕ್‌ಅನ್ನ ಸರಿಯಾಗಿ ಪ್ಯಾಕ್ ಮಾಡುವುದು ಅತ್ಯಗತ್ಯ. ಏಕೆಂದರೆ ಇದು ಬೈಕು ಕಳುಹಿಸುವ ಪ್ರಕ್ರಿಯೆಯಲ್ಲಿ ಯಾವುದೇ ಹಾನಿಯನ್ನ ತಡೆಯಬಹುದು. ಈ ಪ್ಯಾಕಿಂಗ್ ಸೌಲಭ್ಯವು ರೈಲ್ವೆ ನಿಲ್ದಾಣಗಳಲ್ಲಿಯೇ ಲಭ್ಯವಿರುತ್ತದೆ.
ನಿಮ್ಮ ಬೈಕ್ ಮತ್ತು ಸ್ಕೂಟರ್ ಪ್ಯಾಕ್ ಮಾಡಲು ಸುಮಾರು 300 ರಿಂದ 600 ರೂ. ವೆಚ್ಚವಾಗುತ್ತದೆ. ನೀವೇ ಬೈಕ್‌ಅನ್ನ ಪ್ಯಾಕ್ ಮಾಡಬಹುದು. ಅಲ್ಲದೆ ಬೈಕ್‌ಅನ್ನ ಪಾರ್ಸೆಲ್‌ಗೆ ನೀಡುವಾಗ ಬೈಕಿನ ಪೆಟ್ರೋಲ್ ಟ್ಯಾಂಕ್ ಖಾಲಿಯಾಗಿಡುವುದು ಮುಖ್ಯ.
ರೈಲಿನಲ್ಲಿ ಬೈಸಿಕಲ್ ಕಳುಹಿಸಲು ಇನ್ನೊಂದು ಮಾರ್ಗವಿದೆ
ಲಗೇಜ್ ಆಗಿ ಬುಕಿಂಗ್: ನೀವು ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ, ನಿಮ್ಮ ಬೈಕ್‌ಅನ್ನ ಲಗೇಜ್ ಆಗಿ ಬುಕ್ ಮಾಡಬಹುದು. ಬೈಕ್‌ಅನ್ನ ನಿಮ್ಮ ರೈಲಿನ ಪಾರ್ಸೆಲ್ ವ್ಯಾನ್‌ನಲ್ಲಿ ಇಡಲಾಗುತ್ತದೆ. ನೀವು ಬೈಕ್‌ನೊಂದಿಗೆ ಪ್ರಯಾಣಿಸದಿದ್ದರೆ, ಅದನ್ನ ಪಾರ್ಸೆಲ್ ಆಗಿ ಬುಕ್ ಮಾಡಲಾಗುತ್ತದೆ. ರೈಲ್ವೆಗಳು ನಿಗದಿತ ಸಮಯದಲ್ಲಿ ಗಮ್ಯಸ್ಥಾನ ನಿಲ್ದಾಣಕ್ಕೆ ಬೈಕನ್ನ ತಲುಪಿಸುತ್ತವೆ.
ನೀವು ಬೈಕ್‌ಅನ್ನ ಕಳುಹಿಸುವಾಗ, ವೆಚ್ಚಗಳು ದೂರವನ್ನ ಅವಲಂಬಿಸಿರುತ್ತದೆ, ಅಂದರೆ ಕಿಲೋಮೀಟರ್‌ಗಳನ್ನ ಅವಲಂಬಿಸಿರುತ್ತದೆ ಎಂಬುದನ್ನ ನೆನಪಿನಲ್ಲಿಡಿ. ಬೈಕ್‌ನ ತೂಕವನ್ನ ಸಹ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಸಾಮಾನ್ಯವಾಗಿ ಈ ವೆಚ್ಚವು 500 ರಿಂದ 1500 ರೂ.ವರೆಗೆ ಇರಬಹುದು. ಪಾವತಿ ಮಾಡಿದ ನಂತರ ನಿಮಗೆ ಪಾರ್ಸೆಲ್ ರಶೀದಿ ಅಥವಾ ಲಗೇಜ್ ಟಿಕೆಟ್ ನೀಡಲಾಗುತ್ತದೆ. ಬೈಕ್ ತೆಗೆದುಕೊಳ್ಳುವ ಸಮಯದಲ್ಲಿ ಈ ಚೀಟಿಯನ್ನ ನೀವು ತೋರಿಸಬೇಕು. ಬೈಕು ನಿಲ್ದಾಣ ತಲುಪಿದ ನಂತರ, ನೀವು ಅಥವಾ ನಿಮ್ಮ ಪರವಾಗಿ ಬರುವ ಯಾರಾದರೂ ಪಾರ್ಸೆಲ್ ರಶೀದಿ ಮತ್ತು ಗುರುತಿನ ಚೀಟಿಯನನ ತೋರಿಸುವ ಮೂಲಕ ಬೈಕ್ ತೆಗೆದುಕೊಳ್ಳಬಹುದು. ರೈಲ್ವೆ ಸಿಬ್ಬಂದಿ ವಿವರಗಳನ್ನ ಸಂಪೂರ್ಣವಾಗಿ ಪರಿಶೀಲಿಸಿದ ನಂತರವೇ ಬೈಸಿಕಲ್ ಅನ್ನ ನಿಮಗೆ ನೀಡುತ್ತಾರೆ.
ಇದನ್ನೂ ಓದಿ:Chitturu: ಶಾಲೆಯಲ್ಲಿ ಬ್ಯಾಗ್ ನಿಂದ ವಿದ್ಯಾರ್ಥಿನಿ ತಲೆಗೆ ಹೊಡೆದ ಶಿಕ್ಷಕಿ – ಬಿರುಕು ಬಿಟ್ಟ ಬುರುಡೆ
ಒಂದು ವೇಳೆ ಹಾನಿಯಾಗಿದ್ದರೆ ನೀವು ದೂರು ನೀಡಬಹುದು. ಅಲ್ಲದೆ ಪ್ಯಾಕಿಂಗ್ ಮಾಡುವಾಗ ನಿಮ್ಮ ಬೈಕ್‌ಗೆ ಯಾವುದೇ ರೀತಿಯ ಹಾನಿ ಸಂಭವಿಸಿದರೆ, ನೀವು ತಕ್ಷಣವೇ ಈ ಬಗ್ಗೆ ಸ್ಟೇಷನ್ ಮಾಸ್ಟರ್‌ಗೆ ದೂರು ನೀಡಬಹುದು.
Comments are closed.