Pan Card: ಇಂದು ಅಪ್ರಾಪ್ತ ಮಕ್ಕಳಿಗೂ ತುಂಬಾ ಇಂಪಾರ್ಟೆಂಟ್ ‘ಪ್ಯಾನ್ ಕಾರ್ಡ್’ – ಇಲ್ಲಿದೆ ಅರ್ಜಿ ಸಲ್ಲಿಕೆ, ಬೇಕಾಗುವ ದಾಖಲೆ ವಿವರ

Share the Article

Pan Card: ಇಂದು ಸರ್ಕಾರಿ ಯೋಜನೆಗಳನ್ನು ಹಾಗೂ ಉಪಯೋಗಗಳನ್ನು ಪಡೆದುಕೊಳ್ಳಲು ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ತುಂಬಾ ಮುಖ್ಯ ಪಾತ್ರವನ್ನು ವಹಿಸುತ್ತವೆ. ಹಾಗೆಯೇ ಬ್ಯಾಂಕ್ ವಹಿವಾಟುಗಳಲ್ಲಿ ಅಥವಾ ಹಣಕಾಸಿನ ವ್ಯವಹಾರದಲ್ಲಿ ಪ್ಯಾನ್ ಕಾರ್ಡ್ ತುಂಬಾ ಇಂಪಾರ್ಟೆಂಟ್. ಇಂದು ವಯಸ್ಕರ ಗೆ ಮಾತ್ರವಲ್ಲದೆ ಅಪ್ರಾಪ್ತ ಮಕ್ಕಳಿಗೂ ಕೂಡ ಪ್ಯಾನ್ ಕಾರ್ಡ್ ತುಂಬಾ ಅಗತ್ಯವಾಗಿದೆ.

ಹೌದು, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 160 ರ ಪ್ರಕಾರ ಆದಾಯ ತೆರಿಗೆ ಇಲಾಖೆಯು ಅಪ್ರಾಪ್ತ ವಯಸ್ಕರಿಗೆ PAN ಕಾರ್ಡ್ ಹೊಂದಲು ಅವಕಾಶ ನೀಡುತ್ತದೆ. ಈ ಪ್ಯಾನ್ ಕಾರ್ಡ್ ಮಗುವಿನ ಆರ್ಥಿಕ ಭವಿಷ್ಯಕ್ಕೆ ಅಡಿಪಾಯ ಹಾಕುತ್ತದೆ. ಪ್ಯಾನ್ ಕಾರ್ಡ್ ಅನ್ನು ಮೊದಲೇ ಪಡೆಯುವುದರಿಂದ ವಹಿವಾಟುಗಳನ್ನು ಸುಗಮಗೊಳಿಸಬಹುದು, ವಿದ್ಯಾರ್ಥಿವೇತನ ಅರ್ಜಿ ಸಲ್ಲಿಸುವುದು ವಿದ್ಯಾಸಂಸ್ಥೆಗಳಲ್ಲಿ ಪ್ರವೇಶವನ್ನು ಪಡೆಯುವುದನ್ನು ಇದು ಸರಳ ಗೊಳಿಸುತ್ತದೆ. ಅಲ್ಲದೆ ಹೂಡಿಕೆಗಳನ್ನು ಸಕ್ರಿಯಗೊಳಿಸಬಹುದು. ಹಾಗಿದ್ದರೆ ಇದನ್ನು ಪಡೆಯುವುದು ಹೇಗೆ, ಅರ್ಜಿ ಸಲ್ಲಿಸುವುದು ಹೇಗೆ ಎಂಬ ಎಲ್ಲ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.

ಅಪ್ರಾಪ್ತರಿಗೆ ಪ್ಯಾನ್ ಕಾರ್ಡ್ ಪಡೆಯಲು ಬೇಕಾದ ದಾಖಲೆಗಳು:

18 ವರ್ಷಕ್ಕಿಂತ ಕಡಿಮೆ ವಯಸ್ಸಿನ ನಿಮ್ಮ ಮಗುವಿಗೆ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು, ಈ ಕೆಳಗಿನ ದಾಖಲೆಗಳು ಅವಶ್ಯಕ:

ಅಪ್ರಾಪ್ತ ವಯಸ್ಕರ ಪೋಷಕರ ವಿಳಾಸ ಮತ್ತು ಗುರುತಿನ ಪುರಾವೆ

ಅಪ್ರಾಪ್ತ ವಯಸ್ಕ ಅರ್ಜಿದಾರರ ವಿಳಾಸ ಮತ್ತು ಗುರುತಿನ ಪುರಾವೆ

ಆಧಾರ್ ಕಾರ್ಡ್, ಪಡಿತರ ಚೀಟಿ, ಪಾಸ್‌ಪೋರ್ಟ್, ಚಾಲನಾ ಪರವಾನಗಿ ಅಥವಾ ಮತದಾರರ ಗುರುತಿನ ಚೀಟಿಯಂತಹ ಪೋಷಕರ ಗುರುತಿನ ಚೀಟಿಯನ್ನು ಸಲ್ಲಿಸಬಹುದು.

ಎಲ್ಲಾ ದಾಖಲೆಗಳು ಮಾನ್ಯವಾಗಿವೆ ಮತ್ತು ಅರ್ಜಿಯಲ್ಲಿ ಒದಗಿಸಲಾದ ಮಾಹಿತಿಗೆ ಹೊಂದಿಕೆಯಾಗುತ್ತವೆ ಎಂದು ಖಚಿತಪಡಿಸಿಕೊಳ್ಳಿ.

ಇದನ್ನೂ ಓದಿ:Pakistan : ಲಾಡೆನ್ ಹತ್ಯೆಯ ಬಳಿಕ ಆತನ ಹೆಂಡತಿಯರನ್ನು ಪಾಕಿಸ್ತಾನ ಮಾಡಿದ್ದೇನು?

ಅಪ್ರಾಪ್ತ ವಯಸ್ಕರ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ

ಅರ್ಜಿ ಸಲ್ಲಿಸಲು ಹೇಗೆ?

NSDL (ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರೀಸ್ ಲಿಮಿಟೆಡ್) ಪೋರ್ಟಲ್‌ಗೆ ಭೇಟಿ ನೀಡಿ

ಹೊಸ ಪ್ಯಾನ್ – ಭಾರತೀಯ ನಾಗರಿಕ (ಫಾರ್ಮ್ 49A) ಆಯ್ಕೆಮಾಡಿ ಮತ್ತು ವರ್ಗವನ್ನು ಆಯ್ಕೆಮಾಡಿ – ವ್ಯಕ್ತಿ

ಅರ್ಜಿ ನಮೂನೆಯಲ್ಲಿ ಅಪ್ರಾಪ್ತ ವಯಸ್ಕರ ಪೂರ್ಣ ಹೆಸರು, ಜನ್ಮ ದಿನಾಂಕ (DOB), ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ಒದಗಿಸಿ

ಕ್ಯಾಪ್ಚಾ ನಮೂದಿಸಿ ಮತ್ತು ಸಲ್ಲಿಸು ಕ್ಲಿಕ್ ಮಾಡಿ

ಅದನ್ನು ಬರೆದು ‘ಪ್ಯಾನ್ ಅರ್ಜಿ ನಮೂನೆಯೊಂದಿಗೆ ಮುಂದುವರಿಯಿರಿ’ ಕ್ಲಿಕ್ ಮಾಡಿ

ಡಾಕ್ಯುಮೆಂಟ್ ಸಲ್ಲಿಕೆ ವಿಧಾನವನ್ನು ಆಯ್ಕೆಮಾಡಿ ಮತ್ತು ಆಧಾರ್ ವಿವರಗಳನ್ನು ಲಿಂಕ್ ಮಾಡಿ

ಪೋಷಕ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಲಗತ್ತಿಸಿ

Comments are closed.