Heavy rainfall: ಡೆಹ್ರಾಡೂನ್‌ನಲ್ಲಿ ಮೇಘ ಸ್ಫೋಟ: ನೀರಿನಲ್ಲಿ ಮುಳುಗಿದ ತಪಕೇಶ್ವರ ಮಹಾದೇವ ದೇವಸ್ಥಾನ

Share the Article

Heavy rainfall: ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಭಾರಿ ಮಳೆಯಾಗಿ ತಮ್ಸಾ ನದಿ ಉಕ್ಕಿ ಹರಿಯುತ್ತಿದ್ದು, ತಪಕೇಶ್ವರ ಮಹಾದೇವ ದೇವಾಲಯ ಜಲಾವೃತವಾಗಿದೆ. ಪ್ರವಾಸಿ ತಾಣವಾದ ಸಹಸ್ರಧಾರದಲ್ಲಿ ಸೋಮವಾರ ರಾತ್ರಿ ಸಂಭವಿಸಿದ ಮೇಘಸ್ಫೋಟದಿಂದಾಗಿ 2-3 ದೊಡ್ಡ ಹೋಟೆಲ್‌ಗಳು ಹಾನಿಗೊಳಗಾಗಿದ್ದು, 7-8 ಅಂಗಡಿಗಳು ಕೊಚ್ಚಿಹೋಗಿವೆ ಎಂದು ವರದಿಯಾಗಿದೆ. ಅಲ್ಲಿ ಸಿಲುಕಿದ್ದ 100ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ.

ಅಪಘಾತದಲ್ಲಿ 2 ಜನರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಈ ಮಧ್ಯೆ, ತಮ್ಹಾ ನದಿಯ ನೀರಿನ ಮಟ್ಟ ಏರಿಕೆಯಿಂದಾಗಿ ತಪಕೇಶ್ವರ ಮಹಾದೇವ ದೇವಾಲಯ ಸಂಪೂರ್ಣವಾಗಿ ಮುಳುಗಿದೆ. ದೇವಾಲಯದ ಅರ್ಚಕ ಆಚಾರ್ಯ ಬಿಪಿನ್ ಜೋಶಿ ಪ್ರಕಾರ, “ಬೆಳಿಗ್ಗೆ 5 ಗಂಟೆಯಿಂದ ನದಿ ಭಾರೀ ಪ್ರಮಾಣದಲ್ಲಿ ಹರಿಯಲು ಪ್ರಾರಂಭಿಸಿತು, ಇಡೀ ದೇವಾಲಯದ ಆವರಣ ಮುಳುಗಿದೆ. ಈ ರೀತಿಯ ಪರಿಸ್ಥಿತಿ ಬಹಳ ಸಮಯದಿಂದ ಸಂಭವಿಸಿರಲಿಲ್ಲ. ವಿವಿಧ ಸ್ಥಳಗಳಲ್ಲಿ ನಷ್ಟ ಸಂಭವಿಸಿದೆ.

ಇದನ್ನೂ ಓದಿ:Pop Corn: ಭಾರತ ಅಮೆರಿಕದಿಂದ ಜೋಳ ಆಮದು ನಿಲ್ಲಿಸಿದ್ದು ಯಾಕೆ? ಟ್ರಂಪ್‌ ಸುಂಕಕ್ಕೆ ಗುನ್ನ ಮೇಲೆ ಗುನ್ನ ನೀಡುತ್ತಿರುವ ಭಾರತ

ಈ ಸಮಯದಲ್ಲಿ ಜನರು ನದಿಗಳ ಬಳಿ ಹೋಗುವುದನ್ನು ತಪ್ಪಿಸಬೇಕು. ದೇವಾಲಯದ ಗರ್ಭಗುಡಿ ಸುರಕ್ಷಿತವಾಗಿದೆ. ಇಲ್ಲಿಯವರೆಗೆ ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ.”

Comments are closed.