Jio Plan: ಜಿಯೋ ಗ್ರಾಹಕರಿಗೆ ಗುಡ್‌ ನ್ಯೂಸ್:‌ 3 GB ಡೇಟಾದೊಂದಿಗೆ ಕೇವಲ ₹77 ಹೊಸ ಯೋಜನೆ ಪರಿಚಯಿಸಿದ ಜಿಯೋ

Share the Article

Jio Plan: ಇಡೀ ಟೆಲಿಕಾಂ ಇಂಡಸ್ಟ್ರಿಯಲ್ಲಿಯೇ ಹೊಸತನವನ್ನು ತಂದು, ಅಲ್ಲಿಯವರೆಗೆ ಭಾರಿ ದರಕ್ಕೆ ನೆಟ್ಪ್ಯಾಕ್ ನೀಡುತ್ತಿದ್ದ ಕಂಪೆನಿಗಳಿಗೆಲ್ಲಾ ಸೆಡ್ಡು ಹೊಡೆದು ಹೊಸ ಕ್ರಾಂತಿಯನ್ನು ತಂದದ್ದು ಮುಕೇಶ್ ಅಂಬಾನಿ ನೇತೃತ್ವದ ಜಿಯೋ(JIO). ಕೆಲ ತಿಂಗಳ ಹಿಂದೆ ಜಿಯೋ ಕೂಡ ತನ್ನ ದರವನ್ನು ಏರಿಸಿದ್ದರೂ ಏರ್ಟೆಲ್ನಂಥ ಟೆಲಿಕಾಂಗೆ ಹೋಲಿಸಿದರೆ ಜಿಯೋದ ದರವು ಕಡಿಮೆ ಇರುವುದರ ಜೊತೆಗೆ, 5ಜಿ ಸೇವೆಯಿಂದಾಗಿ unlimited data ಸಿಗುತ್ತಿದೆ.

ಏಷ್ಯಾಕಪ್ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿರುವ ಕಾರಣ ಕ್ರಿಕೆಟ್ ಪ್ರಿಯರಿಗಾಗಿ ಜಿಯೋ ಹೊಸ ಯೋಜನೆ ಘೋಷಿಸಿದ್ದು, ಸೆಪ್ಟೆಂಬರ್ 9ರಿಂದ 28ರವರೆಗೆ ಈ ಯೋಜನೆ ಜಾರಿಯಲ್ಲಿರಲಿದೆ. ಈ ಯೋಜನೆಯಡಿ, ಕೇವಲ ₹77 ರೀಚಾರ್ಜ್ ಮಾಡಿಸಿಕೊಂಡರೆ 3 GB ಡೇಟಾ ಮತ್ತು 30 ದಿನಗಳ ಕಾಲ ಸೋನಿ ಲೈವ್ ಚಂದಾದಾರಿಕೆಯನ್ನು ಗ್ರಾಹಕರು ಪಡೆಯಬಹುದಾಗಿದೆ. ಆದರೆ, ನಿಮ್ಮಲ್ಲಿ ಮೊದಲೇ ಡೇಟಾ ಪ್ಯಾಕ್ ಇಲ್ಲದಿದ್ದರೆ ಈ ಯೋಜನೆಯನ್ನು ರೀಚಾರ್ಜ್ ಮಾಡಿಸಿಕೊಳ್ಳಲು ಸಾಧ್ಯವಿಲ್ಲ.

ಇದನ್ನೂ ಓದಿ:Maruthi Suzuki: ‘ಮಾರುತಿ ವಿಕ್ಟೋರಿಸ್‌’ಗೆ 5 ಸ್ಟಾರ್ ಸೇಫ್ಟಿ ರೇಟಿಂಗ್; ಬೆಲೆ, ಮೈಲೇಜ್‌ ಎಷ್ಟು?

ಜಿಯೋ (Reliance Jio) ಭಾರತದ ಪ್ರಮುಖ ಟೆಲಿಕಾಂ ಕಂಪೆನಿಗಳಲ್ಲಿ ಒಂದಾಗಿದ್ದು, ಇದು ರಿಲಯನ್ಸ್ ಇಂಡಸ್ಟ್ರೀಸ್‌ನ ಅಂಗಸಂಸ್ಥೆಯಾಗಿದೆ. ಇದು ಭಾರತದಾದ್ಯಂತ ಸಂಪೂರ್ಣವಾಗಿ 4G LTE ನೆಟ್‌ವರ್ಕ್ ಸೇವೆಗಳನ್ನು ಒದಗಿಸುತ್ತದೆ. 2016 ರಲ್ಲಿ ವಾಣಿಜ್ಯ ಸೇವೆಯನ್ನು ಪ್ರಾರಂಭಿಸಿ ಅಲ್ಪ ಕಾಲದಲ್ಲಿಯೇ ಭಾರಿ ಡಿಮಾಂಡ್ ಕುದುರಿಸಿಕೊಂಡಿದೆ.

Comments are closed.