Ambareesh: ರೆಬಲ್ ಸ್ಟಾರ್ ಅಂಬರೀಶ್ ಗೆ “ಕರ್ನಾಟಕ ರತ್ನ” ನೀಡಲು ಮನವಿ

Ambareesh: ಈಗಾಗಲೇ ಡಾ.ವಿಷ್ಣುವರ್ಧನ್ ಹಾಗೂ ಬಿ.ಸರೋಜಾದೇವಿಯವರಿಗೆ ಸರ್ಕಾರ `ಕರ್ನಾಟಕ ರತ್ನ’ (karnataka Ratna) ಪ್ರಶಸ್ತಿಯನ್ನು ಘೋಷಣೆ ಮಾಡಿತ್ತು. ಅಂತೆಯೇ ಇದರ ಬೆನ್ನಲ್ಲೇ ನಟ ರೆಬಲ್ ಸ್ಟಾರ್ ಅಂಬರೀಶ್ (Ambareesh) ಅವರು ಸಿನಿಮಾ ಹಾಗೂ ರಾಜಕೀಯದಲ್ಲಿ ತಮ್ಮದೇ ಛಾಪು ಮೂಡಿಸಿ ಅಪಾರ ಅಭಿಮಾನಿಗಳ ಮನಸು ಗೆದ್ದವರು. ಈ ಹಿನ್ನಲೆ ನಟ ರೆಬಲ್ ಸ್ಟಾರ್ ಅಂಬರೀಶ್ ಅವರಿಗೂ “ಕರ್ನಾಟಕ ರತ್ನ” ಪ್ರಶಸ್ತಿ ನೀಡಿ ಪುರಸ್ಕಾರ ಮಾಡುವಂತೆ ಹಿರಿಯ ನಟಿ ತಾರಾ ಮತ್ತು ಅಭಿಮಾನಿಗಳು ಮನವಿ ಮಾಡಿದ್ದಾರೆ.

ಇದನ್ನೂ ಓದಿ:Odisha: ಪೊಲೀಸ್ ಕಾರಿನ ಕೀ ಕದ್ದು, ಮನೆಗೆ ಡ್ರಾಪ್ ಕೇಳಿದ ‘ಕುಡುಕರು!! ಮುಂದೇನಾಯ್ತು ನೀವೇ ನೋಡಿ
ಹೌದು, ನಟಿ ತಾರಾ ಅನುರಾಧ
ಅವರು ಡಿಸಿಎಂ D.K ಶಿವಕುಮಾರ್ (D. K shivakmar) ಅವರನ್ನು ಭೇಟಿ ಆಗಿ ಮನವಿ ಪತ್ರ ಕೊಟ್ಟಿದ್ದಾರೆ. ಇನ್ನು ಸಾಮಾಜಿಕ ಸೇವೆಯಲ್ಲಿ ಹೆಸರು ಮಾಡಿರುವ ಈ ಕಲಾವಿದನಿಗೆ ತಕ್ಕ ಗೌರವ ಕೊಡಿ ಎಂದು ಸೋಶಿಯಲ್ ಮೀಡಿಯಾದಲ್ಲಿ (social media ) ಅಭಿಮಾನಿಗಳು ಕೇಳಿಕೊಂಡಿದ್ದರು. ಈ ಸಂಬಂಧ ಸರ್ಕಾರ (government )ಯಾವ ನಿರ್ಧಾರಕ್ಕೆ ಬರಲಿದೆ ಅನ್ನೋದನ್ನ ಕಾದು ನೋಡಬೇಕಿದೆ.
Comments are closed.