ಬೆಳ್ತಂಗಡಿ ಎಸ್ ಐಟಿ ಠಾಣೆಯಲ್ಲಿ ಪ್ರಣವ್ ಮೊಹಾಂತಿ ಸಭೆ: ಪ್ರಮುಖ ನಿರ್ಧಾರ ಸಾಧ್ಯತೆ

ಬೆಳ್ತಂಗಡಿ: ಧರ್ಮಸ್ಥಳ ಎಸ್‌ಐಟಿ ತನಿಖೆ ಪ್ರಮುಖ ಹಂತಕ್ಕೆ ಬಂದಿರುವ ಬಗ್ಗೆ ಮಾಹಿತಿ ಬರುತ್ತಿದೆ. ಪ್ರಣವ್ ಮೊಹಾಂತಿಯವರು ಇಂದು ಈವರೆಗಿನ ಬೆಳವಣಿಗೆಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದಾರೆ. ಇಂದು ಬೆಳಗ್ಗೆ 11:40 ಸಮಯಕ್ಕೆ ಸರಿಯಾಗಿ ಬೆಳ್ತಂಗಡಿ ಎಸ್ ಐಟಿ ಠಾಣೆಗೆ ಎಸ್ ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಆಗಮಿಸಿದ್ದಾರೆ. ಅವರ ಜೊತೆಗೆ ಐಪಿಎಸ್ ಜಿತೇಂದ್ರ ದಯಾಮ, ಹಾಗೂ ಇನ್ನೊಬ್ಬ ಎಸ್ಪಿ ಕೂಡಾ ಆಗಮಿಸಿದರು.

ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಎಸ್ ಐಟಿ ತನಿಖೆಯನ್ನು ಮತ್ತಷ್ಟು ಚುರುಕು ಮಾಡಿದೆ. ಇದರ ಬೆನ್ನಲ್ಲೇ ಇಂದು, ಈವರೆಗೆ ತನಿಖೆಯ ಪ್ರಗತಿ ಬಗ್ಗೆ ಅಧಿಕಾರಿಗಳೊಂದಿಗೆ ಪ್ರಣವ್ ಮೊಹಾಂತಿ ಸಭೆ ನಡೆಸಿದ್ದಾರೆ. ಅಲ್ಲದೆ ಮುಂದಿನ ತನಿಖೆಯ ಬಗ್ಗೆಯೂ ಚರ್ಚೆ ನಡೆಯಲಿದೆ. ಇನ್ನುತಿಮರೋಡಿ ಕೊಟ್ಟಿರುವ 2006 ರಿಂದ 2010 ರವರೆಗೆ ವಸತಿಗೃಹದಲ್ಲಿ ಅನುಮಾನಾಸ್ಪದ ಸಾವಿನ ಮರುತನಿಖೆಗೆ ಆಗ್ರಹಿಸಿ, ದೂರಿನ ಅರ್ಜಿ ಸಲ್ಲಿಸಿದ್ದು ಈ ಬಗ್ಗೆಯೂ ಚರ್ಚೆ ನಡೆಯಲಿದೆ ಎನ್ನುವ ಮಾಹಿತಿ ಇದೆ.
ಜತೆಗೆ ಸ್ನೇಹಮಯಿ ಕೃಷ್ಣ ವಿರುದ್ಧವೂ ಬೆಳ್ತಂಗಡಿಯಲ್ಲಿ ದೂರು ದಾಖಲಾಗಿದೆ. ಈಗಾಗಲೇ ಜಯಂತಿ ಟಿ, ಗಿರೀಶ್ ಮಟ್ಟಣ್ಣನವರ್, ಅಭಿಷೇಕ್, ವಿಠಲಗೌಡ, ಪ್ರದೀಪ್, ಉದಯ ಜೈನ್, ಮುಂತಾದವರ ವಿಚಾರಣೆ ನಿರಂತರವಾಗಿ ನಡೆದಿದೆ. ಅಲ್ಲದೆ ಈಗಾಗಲೇ ವಿಠಲಗೌಡರ ಜೊತೆ ಎರಡೆರಡು ಬಾರಿ ಸ್ಥಳ ಪರಿಶೀಲನೆ ನಡೆಸಲಾಗಿದೆ.
ವಿಠಲ ಗೌಡರ ಆಪ್ತ ಪ್ರದೀಪ್ ಹೇಳಿಕೆಯನ್ನು ನ್ಯಾಯಾಲಯದಲ್ಲಿ ದಾಖಲಿಸಿಕೊಳ್ಳಲಾಗಿದೆ. ಈಗಾಗಲೇ ಮೂರು ವಾರಗಳ ಕಾಲ ಎಸ್ಐಟಿ ತನಿಖೆ ನಡೆದಿದ್ದು ಮಾಹಿತಿಗಳ ಪ್ರಕಾರ ತನಿಖೆ ಬರುವ ವಾರ ಮುಂದಿನ ಹಂತಕ್ಕೆ ಶಿಫ್ಟ್ ಆಗಲಿದೆ ಎನ್ನಲಾಗುತ್ತಿದೆ.
Comments are closed.