

Bangalore: ಆಟೋ ಚಾಲನಾ ತರಬೇತಿ ಪಡೆಯುವ ಮಹಿಳೆಯರು, ಮಂಗಳಮುಖಿಯರಿಗೆ ವೃತ್ತಿಜೀವನ ಪ್ರಾರಂಭ ಮಾಡಲು ಸರಕಾರದಿಂದ ಉಚಿತವಾಗಿ ಆಟೋ ಒದಗಿಸುವ ಕುರಿತು ಸರಕಾರ ಮತ್ತು ಜಿಬಿಎ ಜೊತೆ ಚರ್ಚೆ ಮಾಡುವುದಾಗಿ ಶಾಸಕ ಹಾಗೂ ಬಿಡಿಎ ಅಧ್ಯಕ್ಷ ಎನ್.ಎ.ಹ್ಯಾರಿಸ್ ಹೇಳಿದ್ದಾರೆ.
ಬಿ ಪ್ಯಾಕ್, ಕಿರ್ಲೋಸ್ಕರ್, ಸಿಜಿಐ ಸಹಯೋಗದಲ್ಲಿ ಶನಿವಾರ ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣ ಕಲಾ ಕೇಂದ್ರದಲ್ಲಿ ಶಾಂತಿನಗರ ಕ್ಷೇತ್ರದ ಮಂಗಳಮುಖಿಯರು, ಮಹಿಳೆಯರಿಗೆ ಉಚಿತ ಆಟೋ ಚಾಲನಾ ತರಬೇತಿಗೆ ಚಾಲನೆ ನೀಡಿ ಅವರು ಹೇಳಿದರು.
ಆಟೋ ಚಾಲನಾ ತರಬೇತಿ, ಸ್ವಾವಲಂಬಿ ಜೀವನ ರೂಪಿಸಿಕೊಳ್ಳಲು ಉಪಯೋಗವಾಗಲಿದ್ದು, ಅರ್ಹರಿಗೆ ಸರಕಾರದಿಂದಲೇ ಉಚಿತವಾಗಿ, ಆಟೋ ಒದಗಿಡುವ ಕುರಿತು ಚರ್ಚೆ ಮಾಡುತ್ತೇನೆ ಎನ್ನುವ ಭರವಸೆ ನೀಡಿದ್ದಾರೆ.













