Hassan : ಹಾಸನ ದುರಂತ- ಮನೆಗೆಲಸ ಮಾಡಿ ಮಗನನ್ನ ಇಂಜಿನಿಯರಿಂಗ್ ಓದಿಸ್ತಿದ್ದ ತಾಯಿ; ಕಷ್ಟ ದೂರವಾಗುತ್ತೆ ಎನ್ನುವಾಗ ಹೊತ್ತೊಯ್ದ ಜವರಾಯ !!

Hassan: ಹಾಸನ ತಾಲೂಕಿನ ಮೊಸಳೆ ಹೊಸಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗಣೇಶ ಮೆರವಣಿಗೆಯ ವೇಳೆ ಕ್ಯಾಂಟರ್ ಹರಿದು ಸುಮಾರು 9 ಜನ ಸಾವನ್ನಪ್ಪಿದ್ದರೆ, 20 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ದುರಂತವೆಂದರೆ ಸಾವನ್ನಪ್ಪಿದ ಎಲ್ಲರೂ ಕೂಡ ಇನ್ನು ಹದಿಹರೆಯದ ಯುವಕರು. ಇವರ ಪೋಷಕರ ಆಕ್ರಂದನ ಇದೀಗ ಮುಗಿಲು ಮುಟ್ಟುತ್ತಿದೆ.

ಈ ದುರಂತದಲ್ಲಿ ಬಳ್ಳಾರಿಯ ಪ್ರವೀಣ್ ಮೃತಪಟ್ಟಿದ್ದು, ಇದ್ದ ಒಬ್ಬ ಮಗನನ್ನು ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ. ಇಂಜಿನಿಯರಿಂಗ್ ವಿದ್ಯಾಭ್ಯಾಸಕ್ಕಾಗಿ ಹಾಸನಕ್ಕೆ ಬಂದಿದ್ದ ಪ್ರವೀಣ್, ಶುಕ್ರವಾರ ಗಣೇಶ ವಿಸರ್ಜನೆ ವೇಳೆ ನಡೆದ ಘನಘೋರ ದುರಂತದಲ್ಲಿ ಉಸಿರುಚೆಲ್ಲಿದ್ದಾನೆ. ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದ ಪ್ರವೀಣ್ ತಾಯಿ ಸುಶೀಲಾ ಆರೈಕೆಯಲ್ಲೇ ಬೆಳೆದಿದ್ದ.
ಅತೀವ ಬಡತನವಿದ್ದರೂ ಮನೆಗೆಲಸ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡಿ ಮಗನನ್ನು ತಾಯಿ ಇಂಜಿನಿಯರಿಂಗ್ ಓದಿಸುತ್ತಿದ್ದರು. ಬಳ್ಳಾರಿಯಲ್ಲಿ ಡಿಪ್ಲೊಮಾ ಮುಗಿಸಿ, ಹಾಸನದಲ್ಲಿ ಇಂಜಿನಿಯರಿಂಗ್ ಮಾಡಲು ತೆರಳಿದ್ದ ಪ್ರವೀಣ್, ಎಲೆಕ್ಟ್ರಾನಿಕ್ ಫೈನಲ್ ಸೆಮಿಸ್ಟರ್‌ನಲ್ಲಿ ಓದುತ್ತಿದ್ದ. ಮಗ ಇನ್ನೇನು ಕೆಲಸಕ್ಕೆ ಸೇರಿ ತನ್ನ ಕಷ್ಟಗಳೆಲ್ಲ ಕಳೆಯುತ್ತದೆ ಅಂದುಕೊಂಡಿದ್ದ ತಾಯಿಗೆ ಪ್ರವೀಣ್ ಸಾವಿನ ಸುದ್ದಿ ಬರಸಿಡಿಲು ಬಡಿದಂತಾಗಿದೆ.
ಇದನ್ನು ಓದಿ:Promotion: ಶಾಲಾ ಶಿಕ್ಷಕರಿಗೆ ಬಡ್ತಿ – ತುರ್ತಾಗಿ ಈ ದಾಖಲೆ ಸಲ್ಲಿಸಿ!!
ಸಾವಿಗೀಡಾದವರಿಗೆ ಈಗಾಗಲೇ ರಾಜ್ಯ ಸರ್ಕಾರ 5 ಲಕ್ಷ ಪರಿಹಾರವನ್ನು ಘೋಷಿಸಿದೆ. ಇದರ ನಡುವೆ ಹಾಸನ ಘಟನೆಗೆ ಸಂಬಂಧಪಟ್ಟಂತೆ ಪ್ರಧಾನಿ ನರೇಂದ್ರ ಮೋದಿ (Pm modi) ಸಂತಾಪ ಸೂಚಿಸಿದ್ದು, ಮೃತರ ಕುಟುಂಬಸ್ಥರಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ. ಗಾಯಾಳುಗಳಿಗೆ 50,000 ಘೋಷಣೆ ಮಾಡಿದ್ದಾರೆ.
Comments are closed.