Madhya Pradesh: ಹಾಟ್‌ ಏರ್‌ ಬಲೂನ್‌ನಲ್ಲಿ ಬೆಂಕಿ: ಮಧ್ಯಪ್ರದೇಶ ಸಿಎಂ ಬಚಾವ್‌

Share the Article

Madhya Pradesh: ಮಧ್ಯಪ್ರದೇಶದ ಸಿಎಂ ಮೋಹನ್‌ ಯಾದವ್‌ ಅವರು ಏರ್‌ಬಲೂನ್‌ ಎಂಜಿನ್‌ನಲ್ಲಿ ಹಾರಾಟ ಮಾಡಲು ಹೋದಾಗ ಬೆಂಕಿ ಕಾಣಿಸಿಕೊಂಡಿದ್ದು, ಅಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.

ಈ ಘಟನೆ ಮಂದಸೋರ್‌ನಲ್ಲಿ ನಡೆದಿದೆ.

ಇಂದು (ಶನಿವಾರ) ಬೆಳಿಗ್ಗೆ (ಸೆ.13) ಮಂದಸೋರ್‌ನ ಗಾಂಧಿ ಸಾಗರ್‌ ಅರಣ್ಯ ಪ್ರದೇಶದಲ್ಲಿ ಮೋಹನ್‌ ಯಾದವ್‌ ಹಾಟ್‌ ಏರ್‌ ಬಲೂನ್‌ನಲ್ಲಿ ಹಾರಾಟ ಮಾಡಲು ಸಿದ್ಧತೆ ನಡೆಸಿದ್ದರು. ಅಷ್ಟರಲ್ಲಿ ಎಂಜಿನ್‌ನ ಭಾಗದಲ್ಲಿ ಬೆಂಕಿ ಹತ್ತಿಕೊಂಡಿದೆ. ಕೂಡಲೇ ಭದ್ತಾ ಸಿಬ್ಬಂದಿಗಳು ಅವರನ್ನು ಕೆಳಗಿಳಿಸಿದ್ದಾರೆ. ಹಾಟ್‌ ಏರ್‌ ಬಲೂನ್‌ ನೆಲದಲ್ಲೇ ಇದ್ದಾಗ ಅವಘಡ ಸಂಭವಿಸಿದ್ದರಿಂದ ಭಾರೀ ಅನಾಹುತ ತಪ್ಪಿದ್ದಂತಾಗಿದೆ.

ಇದನ್ನೂ ಓದಿ:Actor Darshan: ನಟ ದರ್ಶನ್‌ ಮಡದಿ ವಿಜಯಲಕ್ಷ್ಮೀ ಮನೆಯಲ್ಲಿ ಕಳ್ಳತನ

ಈ ಅವಘಡದಲ್ಲಿ ಯಾರಿಗೂ ಯಾವುದೇ ಅಪಾಯವಾಗಿಲ್ಲ ಎಂದು ಹೇಳಲಾಗಿದೆ.

Comments are closed.