Water bottle: ನೀರಿನ ಬಾಟಲಿಯ ಮುಚ್ಚಳ ನುಂಗಿ 1 ವರ್ಷದ ಮಗು ದಾರುಣ ಸಾವು!

Share the Article

Water bottle: ಒಂದು ವರ್ಷದ ಮಗು ಆಟವಾಡುತ್ತಿದ್ದಾಗ ನೀರಿನ ಬಾಟಲಿ (Water bottle) ಮುಚ್ಚಲವನ್ನು ನುಂಗಿ ದಾರುಣ ಸಾವು ಕಂಡಿದೆ.

ಹೌದು, ಅನಂತಪುರ ನಗರದ ಗುಥಿ ಪಟ್ಟಣದ ಬಳಿ ಈ ಘಟನೆ ನಡೆದಿದ್ದು, ಮಗುವಿನ ತಾಯಿ ಮೌನಿಕಾ NPTC ಟ್ರಾನ್ಸ್ಕೋ ವಿಭಾಗದಲ್ಲಿ ADE ಆಗಿ ಕೆಲಸ ಮಾಡುತ್ತಿದ್ದಾರೆ. ಮಗುವಿನ ತಂದೆ ಯುಗಂಧರ್ ಅನಂತಪುರದಲ್ಲಿ R&B AE ಆಗಿ ಕೆಲಸ ಮಾಡುತ್ತಿದ್ದಾರೆ. ಮೌನಿಕಾ ಕರ್ತವ್ಯದಲ್ಲಿದ್ದಾಗ, ಇವರ ಒಂದು ವರ್ಷದ ಮಗ ರಕ್ಷಿತ್ ರಾಮ್, ಆಟವಾಡುವಾಗ ಆಕಸ್ಮಿಕವಾಗಿ ನೀರಿನ ಬಾಟಲಿಯ ಮುಚ್ಚಳವನ್ನು ನುಂಗಿದ್ದು, ಅವನ ಗಂಟಲಲ್ಲಿ ಸಿಲುಕಿದೆ. ಇದರಿಂದ ಉಸಿರಾಟ ತೊಂದರೆ ಉಂಟಾಗಿ ಮಗು ಅಲ್ಲೇ ಕೊನೆ ಉಸಿರು ಎಳೆದಿದೆ.

ಇದನ್ನೂ ಓದಿ:Sambhav Mobile : ಇದೇ ನೋಡಿ ಆಪರೇಷನ್ ಸಿಂಧೂರ್‌ನಲ್ಲಿ ಭಾರತೀಯ ಸೇನೆ ಬಳಸಿದ ಫೋನ್ – ಈ ‘ಸಂಭವ್’ ವಿಶೇಷತೆ ಏನು?

ಕೂಡಲೇ ಮೌನಿಕಾ ಬಾಲಕನನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಸಿಪಿಆರ್ ಮಾಡಲಾಯಿತು. ಆದರೆ ಮಗುವನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

Comments are closed.