Kantara-1: ‘ಕಾಂತಾರ-1 ‘ಗೆ ಒಟಿಟಿ ಹಕ್ಕಿನಿಂದ ಬಂದ ಹಣವೆಸ್ಟು ಗೊತ್ತಾ? ಈ ದುಡ್ಡಲ್ಲೇ ಮತ್ತೊಂದು ‘KGF 2’ ನಿರ್ಮಿಸಬಹುದು!!

Share the Article

Kantara-1: ರಿಷಬ್ ಶೆಟ್ಟಿಯ ಕಾಂತಾರಾ ಚಾಪ್ಟರ್ 1 ಸಿನಿಮಾಗಾಗಿ ದೇಶವೇ ಕಾಯುತ್ತಿದೆ. ಇದರ ನಡುವೆ ಕನ್ನಡ ಸಿನಿಮಾ ಇದೀಗ ಪ್ಯಾನ್ ವರ್ಲ್ಡ್ ಸಿನಿಮಾ ಆಗಿ ಬಿಡುಗಡೆಯಾಗುತ್ತಿರುವ ಮಾಹಿತಿ ಹೊರಬಿದ್ದಿದೆ. ಕಾಂತಾರಾ 1 ಸಿನಿಮಾ 30ಕ್ಕೂ ಹೆಚ್ಚು ದೇಶ 7 ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಹೀಗಿರುವಾಗಲೇ ಸಿನಿಮಾದ ಒಟಿಟಿ ಹಕ್ಕಿನ ಮಾರಾಟ ಬಗ್ಗೆ ದೊಡ್ಡ ಸುದ್ದಿ ಹೊರ ಬಿದ್ದಿದೆ. ಈ ಹಣದಲ್ಲಿ ಮತ್ತೊಂದು ‘ಕೆಜಿಎಫ್ 2′ ನಿರ್ಮಿಸಬಹುದು ಎಂಬ ಮಾತುಗಳು ಕೇಳಿ ಬಂದಿವೆ.

ಹೌದು, ಕಾಂತಾರ’ ಚಿತ್ರದ ಪ್ರೀಕ್ವೆಲ್ ‘ಕಾಂತಾರ: ಚಾಪ್ಟರ್ 1’ ತೆರೆಗೆ ಬರುತ್ತಿದೆ. ಈ ಸಿನಿಮಾದ ಒಟಿಟಿ ಹಕ್ಕು ದಾಖಲೆ ಮೊತ್ತಕ್ಕೆ ಮಾರಾಟ ಆಗಿದೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಹಕ್ಕನ್ನು ಅಮೇಜಾನ್ ಪ್ರೈಮ್ ವಿಡಿಯೋ ಖರೀದಿ ಮಾಡಿದೆ. ಈ ಸಿನಿಮಾದ ಹಕ್ಕನ್ನು ಖರೀದಿಸಲು ತಂಡಕ್ಕೆ ಪ್ರೈಮ್ ವಿಡಿಯೋ ಕಡೆಯಿಂದ 125 ಕೊಟಿ ರೂಪಾಯಿ ಸಂದಾಯ ಆಗಿದೆ ಎನ್ನಲಾಗುತ್ತಿದೆ. ಈ ಮೊತ್ತದಲ್ಲಿ ಮತ್ತೊಂದು ‘ಕೆಜಿಎಫ್ 2’ ನಿರ್ಮಿಸಬಹುದು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ‘ಕೆಜಿಎಫ್ 2’ ಸಿನಿಮಾದ ಬಜೆಟ್ 100 ಕೋಟಿ ರೂಪಾಯಿ. ಕೆಲವರು ‘ಕೆಜಿಎಫ್ 3’ ಸಿನಿಮಾದ ಬಜೆಟ್​ಗೆ ಇದು ಸರಿ ಇದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:40 ದಿನದ ಮಗುವಿನ ಬಾಯಿಗೆ ಟಿಶ್ಯೂ ಪೇಪರ್‌ ತುರುಕಿ ಕೊಂದ ತಾಯಿ; ಕಾರಣ ಶಾಕಿಂಗ್‌!

Comments are closed.